ಸೇವೆಯ ಪಥಕ್ಕೆ ವಿರಾಮ: ಜೆಸ್ಕಾಂ ಎಂಡಿ ಕೃಷ್ಣ ಬಾಜಪೇಯಿ

ಕಲಬುರಗಿ, ಫೆ.3: ತಮ್ಮ ಸೇವಾ ಅವಧಿಯಲ್ಲಿ ತಾಂತ್ರಿಕ ನೈಪುಣ್ಯ, ಶಿಸ್ತು, ಪಾರದರ್ಶಕ ಆಡಳಿತ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುತ್ತಾ ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಇಂದು ತಮ್ಮ ಸೇವಾ ಪಯಣಕ್ಕೆ ವಿದಾಯ ಹೇಳುತ್ತಿರುವ ಜೆಸ್ಕಾಂನ ಮುಖ್ಯ ಅಭಿಯಂತರ ಸುವರ್ಣ ದಡೇದ ಅವರು ನವ ಇಂಜಿನಿರ್‍ಗಳಿಗೆ ಮಾದರಿಯಾಗಿದ್ದಾರೆ ಎಂದು ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರು ಹೇಳಿದರು.
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಗಮ ಕಾರ್ಯಲಯದಲ್ಲಿ ಹಾಗೂ ಕಪಿಟಿಸಿಎಲ್‍ನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಮುಖ್ಯ ಅಭಿಯಂತರರಾಗಿ ನಿವೃತ್ತಿಹೊ0ದಿದ ಸುವರ್ಣ ದಡೇದ ಅವರಿಗೆ ಜೆಸ್ಕಾ0 ಕಾಪೆÇ9ರೇಟ್ ಕಚೇರಿಯ ಕೆ.ಇ.ಬಿ ಇಂಜಿನೀಯರ್ ಅಸೋಸಿಯೇಷನ್ ಸಭಾ0ಗಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರ0ಭದ ಮುಖ್ಯ ಅಥಿತಿಗಳ ಸ್ಥಾನ ವಹಿಸಿ ಮಾತನಾಡಿದ ಅವರು 34 ವರ್ಷ 5 ತಿಂಗಳ ಸುದೀರ್ಘಕಾಲ ಸಂಸ್ಥೆಗೆ ತಮ್ಮ ಜ್ಞಾನ, ಶ್ರಮ, ನಿಷ್ಠೆ ಮತ್ತು ನಾಯಕತ್ವವನ್ನು ಅರ್ಪಿಸಿ, ವಿದ್ಯುತ್ ವಿತರಣಾ ವ್ಯವಸ್ಥೆಯ ಸುಧಾರಣೆ, ಗ್ರಾಹಕ ಸೇವೆಯ ಗುಣಮಟ್ಟ ಹೆಚ್ಚಿಸುವುದು, ಸಿಬ್ಬಂದಿಗೆ ಮಾರ್ಗದರ್ಶನ ನೀಡುವುದು, ಇವೆಲ್ಲ ಕ್ಷೇತ್ರಗಳಲ್ಲಿ ಸುವರ್ಣ ದಡೇದ ಅವರ ಕೊಡುಗೆ ಅಮೂಲ್ಯವಾಗಿದೆ ಎಂದರು.
ನಿರ್ದೇಶಕ (ತಾಂತ್ರಿಕ) ಚಂದ್ರಕಾಂತ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು.ಜೆಸ್ಕಾಂನ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಅವರು, ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಲಯ ಕಚೇರಿಯ ಮುಖ್ಯ ಅಭಿಯಂತರ ವೆಂಕಟೇಶ ಹಾಲ್ವಿ, ಜೆಸ್ಕಾಂನ ಆರ್ಥಿಕ ಸಲಹೆಗಾರರಾದ ಮಹಾಲಕ್ಷೀ, ಇಂಜಿನಿಯರ್ ಅಸೋಷಿಯೇಷನ್‍ನ ಉಪಾಧ್ಯಾಕ್ಷ ಸಚಿನ ಹುಂಡೆಕಾರ, ಡಿಪೆÇ್ಲೀಮಾ ಇಂಜಿನಿಯರ್ ಅಸೋಷಿಯೇಷನ್‍ನ ಉಪಾಧ್ಯಾಕ್ಷ ಸಂತೋಷ ವಡ್ಕಿ, ಕವಿಪ್ರನಿನಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಕವಿಪ್ರನಿನಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಬು ಕೊರೆ, ವಿಶ್ವನಾಥ ರೆಡ್ಡಿ, ಸುನಂದಾ ಜೋಶಿ, ಎ.ಎಚ್. ಮುಮ್ತಾಜ್ ಹಾಗೂ ಜೆಸ್ಕಾಂನ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.