Home ಜಿಲ್ಲೆ ಹುಬ್ಬಳ್ಳಿ ೩.೫೦ ಲಕ್ಷ ಮೇಟ್ರಿಕ್ ಟನ್ ಕಬ್ಬು ಅರೆಯುವ ಗುರಿ

೩.೫೦ ಲಕ್ಷ ಮೇಟ್ರಿಕ್ ಟನ್ ಕಬ್ಬು ಅರೆಯುವ ಗುರಿ


ಚನ್ನಮ್ಮನ ಕಿತ್ತೂರು- ೬
ನಮ್ಮ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸಕ್ಕರೆ ಇಳುವರಿಗೆ ರಾಜ್ಯದಲ್ಲಿ ನಂ.೧ ಇದ್ದು ಪ್ರಶಸ್ತಿ ಕೂಡಾ ಗಿಟ್ಟಿಸಿಕೊಂಡಿದೆ ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದ್ರಿ ಹೇಳಿದರು.


ಸಮೀಪದ ಬೈಲಹೊಂಗಲ ಬೆಳವಡಿ ಸಿದ್ದಸಮುದ್ರ ಹತ್ತಿರದ ಸೋಮೇಶ್ವರ ಸಕ್ಕರೆ ಕಾರ್ಖಾನೆ ಅಂಗಳದಲ್ಲಿ ೨೦೨೬-೨೭ನೇ ಸಾಲಿನ ಕಬ್ಬು ನೂರಿಸುವ ಹಂಗಾಮಿನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ಗಣಮಟ್ಟದ ಕಬ್ಬು ಪೂರೈಸಬೇಕು. ಈ ಸಲ ೩.೫೦ ಲಕ್ಷ ಮೇಟ್ರಿಕ್ ಟನ್ ಕಬ್ಬು ಅರೆಯುವ ಗುರಿಯಿಟ್ಟುಕೊಳ್ಳಲಾಗಿದ್ದು ಕಬ್ಬು ಕಟಾವು ಗ್ಯಾಂಗ್ ವ್ಯವಸ್ಥೆ ಮಾಡಲಾಗಿದೆ. ಆಡಳಿತ ಮಂಡಳಿ, ರೈತರು, ಕಾರ್ಮಿಕರು, ಎಲ್ಲರೂ ಸೇರಿ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಕಾರ್ಖಾನೆಗೆ ಕಬ್ಬು ತರಲು ಪ್ರಯತ್ನಿಸಬೇಕು. ರೈತರ, ಕಾರ್ಮಿಕ, ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ರೈತರ, ಕಾರ್ಮಿಕರ ಏಳಿಗೆ, ಕಾರ್ಖಾನೆ ಅಭಿವೃದ್ದಿ ಬಯಸುವುದೇ ನಮ್ಮ ಧ್ಯೇಯವಾಗಿದೆ ಎಂದರು.


ನಿರ್ದೇಶಕ ಪ್ರಕಾಶ ಮೂಗಬಸವ ಮಾತನಾಡಿ ಯಾವುದೊಂದು ಕೆಲಸವಾಗಬೇಕಾದರೆ ಒಗ್ಗಟ್ಟು ಬಹಳ ಮುಖ್ಯ. ಅಂದಿನ ಕಾರ್ಖಾನೆ ಸಂಸ್ಥಾಪಕ ಮಾಜಿ ಶಾಸಕ ದಿವಂಗತ ಆರ್.ಸಿ.ಬಾಳೇಕುಂದ್ರಿಯವರು ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸಿದರೆ ಇಲ್ಲಿನ ರೈತರ ಬದುಕು ಹಸನಾಗಬುದು ಎಂಬ ಉದ್ದೇಶದಿಂದ ಕಾರ್ಖಾನೆ ನಿರ್ಮಿಸಿದರು ಅವರ ಸೇವೆ ಅಪಾರವಾಗಿದ್ದು. ಅವರನ್ನು ನೆನೆಯುವುದು ಈ ಭಾಗದ ಎಲ್ಲ ರೈತರ ಹೆಮ್ಮೆಯ ವಿಷಯ. ಅದಲ್ಲದೇ ಕಾರ್ಖಾನೆಗಳ ಪೈಪೋಟಿ ನಡುವೆ ನಮ್ಮ ಕಾರ್ಖಾನೆ ಒಳ್ಳೆಯ ಸೇವೆ ಕೊಡುತ್ತಿದೆ. ಈಗಾಗಲೇ ರೈತರ ಎಲ್ಲ ಬಿಲ್ಲ ಪಾವತಿಸಲಾಗಿದೆ. ಮತ್ತು ಇನ್ಮುಂದೆ ಸರಕಾರ ನಿಗದಿಪಡಿಸಿದ ದರದಲ್ಲಿ ಕಬ್ಬಿನ ಬಿಲ್ಲ ನೀಡಲಾಗುವುದು. ನಿಮ್ಮೇಲ್ಲರ ಸಹಕಾರ ಸದಾ ಕಾರ್ಖಾನೆ ಮೇಲಿರಲೆಂದರು.
ರುದ್ರಾಕ್ಷಿಮಠದ ಬಸಲಿಂಗಸ್ವಾಮಿಜಿ, ಬೈಲಹೊಂಗಲ ಆರಾದ್ರಿಮಠದ ಡಾ. ಮಹಾಂತ ಶಾಸ್ತಿçÃ, ಹೊಸೂರ ಗುರುಮಡಿವಾಳೇಶ್ವರಮಠದ ಗಂಗಾಧರ ಸ್ವಾಮಿಜೀ, ಹುಣಸೀಕಟ್ಟಿ-ಬೀಳಕಿ ಬನ್ನಬಸವದೇವರು ಸಾನಿಧ್ಯವಹಿಸಿದ್ದರು. ಅಶೋಕ ಬೊಮ್ಮನವರ ಸ್ವಾಗತಿಸಿದರು, ಬಾಬು ಕಂಡೋಜಿ ರೈತಗೀತೆ ಹಾಡಿದರು,
ನಿರ್ದೇಶಕರುಗಳಾದ ಕಾರ್ಖಾನೆ ಉಪಾಧ್ಯಕ್ಷ ಮಹಾಬಳೇಶ್ವರ (ರಾಜು_ ಕುಡಸೋಮಣ್ಣವರ, ಮಹಾಂತೇಶ ಮತ್ತಿಕೊಪ್ಪ, ರಾಚಪ್ಪ ಮಟ್ಟಿ, ಅಶೋಕ ಯರಗೊಪ್ಪ, ಅನಿತಾ ಮೆಟ್ಟಗುಡ್ಡ, ಉಮೇಶ ಬಾಳಿ, ಮಲ್ಲಪ್ಪ ಅಷ್ಟಗಿ, ಕಾರ್ತಿಕ ಮಲ್ಲೂರ, ಕಸ್ತೂರಿ ಸೋಮನಟ್ಟಿ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ, ಅದೃಶ್ಯಪ್ಪ ಕೊಟಬಾಗಿ, ರಾಮಚಂದ್ರ ಕಕ್ಕಯ್ಯನವರ, ಅಶೋಕ ಬಾಳೇಕುಂದ್ರಗಿ, ಶಿವಾನಂದ ದೂತಗುಂಡಿ, ಶ್ರೀಶೈಲ ಶರಣಪ್ಪನವರ, ಶ್ರೀಶೈಲ ಮೂಗಬಸವ, ಬಸಪ್ಪ ಬೋಳಗೌಡ್ರ, ಮಹಾಂತೇಶ ತುರಮರಿ, ಸಿದ್ದನಗೌಡ ಪಾಟೀಲ, ಕಾರ್ಮಿಕರು, ಸಿಬ್ಬಂದಿ, ರೈತರು, ಸಾರ್ವಜನಿಕರು ಇತರರಿದ್ದರು.