Home ಜಿಲ್ಲೆ ಕಲಬುರಗಿ 2.91 ಲಕ್ಷ ರೂ.ವಂಚನೆ

2.91 ಲಕ್ಷ ರೂ.ವಂಚನೆ

ಕಲಬುರಗಿ,ನ.3-ವ್ಯಕ್ತಿಯೊಬ್ಬರ ಮೊಬೈಲ್‍ಗೆ ಅಪರಿಚಿತ ವ್ಯಕ್ತಿಯೊಬ್ಬ ಸಿಓಎಂ.ರೆವಿನ್ಯೂ.ಮ್ಯಾನೇಜರ್ ಆ್ಯಪ್ ಎಪಿಕೆ ಅಪ್ಲಿಕೇಶನ್ ಕಳುಹಿಸಿ ಬ್ಯಾಂಕ್ ಖಾತೆಯಲ್ಲಿದ್ದ 2,91,084.57 ಹಣ ವರ್ಗಾವಣೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಗಂಜ್ ಕಾಲೋನಿಯ ಶೇಖ್ ಆರೀಫ್ ಎಂಬುವವರ ಮೊಬೈಲ್‍ಗೆ ಸಿಓಎಂ.ರೆವಿನ್ಯೂ.ಮ್ಯಾನೇಜರ್ ಆ್ಯಪ್ ಎಪಿಕೆ ಅಪ್ಲಿಕೇಶನ್ ಕಳುಹಿಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 2,91,084.57 ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ.
ಶೇಖ್ ಆರೀಫ್ ಅವರು ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ತನಿಖೆ ನಡೆದಿದೆ.