
ಕಲಬುರಗಿ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನ್ಯಾಯವಾದಿಗಳ ಮೇಲೆ ನಡೆಯುತ್ತಿರುವ ಹಲ್ಲೆ,ದೌರ್ಜನ್ಯಗಳನ್ನು ಖಂಡಿಸಿ,ನ್ಯಾಯವಾದಿಗಳ ವೃತ್ತಿಪರ ಭದ್ರತೆಗಾಗಿ ನ್ಯಾಯವಾದಿಗಳ ರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಗ್ರಹಿಸಿ ಇಂದು ಗುಲಬರ್ಗಾ ನ್ಯಾಯವಾದಿಗಳ ಸಂಘ ಉಚ್ಚ ನ್ಯಾಯಾಲಯ ಘಟಕ ಮತ್ತು ರೈತಪರ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳಾದ ಎಸ್.ವಿ ಪಸಾರ,ಅನಂತ ಜಹಗೀರದಾರ,ಗೌರೀಶ ಖಾಸೆಂಪುರ,ಮಂಜುನಾಥ ಗಿನ್ನಿ,ರೇಖಾ ಪಾಟೀಲ ಅವರು ಸೇರಿದಂತೆ ಹಲವರು ಪಾಲ್ಗೊಂಡರು.























