Home ಜಿಲ್ಲೆ ಕಲಬುರಗಿ ಭಾರತೀಯ ನ್ಯಾಯಶಾಸ್ತ್ರದ ಸಂಶೋಧನೆ: ಸಿಯುಕೆ,ವಿಜ್ಞಾನೇಶ್ವರ ಪ್ರತಿಷ್ಠಾನ ನಡುವೆ ಒಪ್ಪಂದ

ಭಾರತೀಯ ನ್ಯಾಯಶಾಸ್ತ್ರದ ಸಂಶೋಧನೆ: ಸಿಯುಕೆ,ವಿಜ್ಞಾನೇಶ್ವರ ಪ್ರತಿಷ್ಠಾನ ನಡುವೆ ಒಪ್ಪಂದ

ಕಲಬುರಗಿ,ನ.3:ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಮತ್ತು ಕಲಬುರಗಿ ಜಿಲ್ಲೆಯ ಮರ್ತೂರಿನ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ಶೈಕ್ಷಣಿಕ ಸಹಯೋಗ, ಸಂಶೋಧನೆ ಮತ್ತು ಜ್ಞಾನ ವಿನಿಮಯಕ್ಕಾಗಿ ಸಾಂಸ್ಥಿಕ ಪಾಲುದಾರಿಕೆಯನ್ನು ಸ್ಥಾಪಿಸುವ ಉದ್ದೇಶದಿಂದ ಸೋಮವಾರ ವಿಶ್ವವಿದ್ಯಾಲಯದ ಸೆಮಿನಾರ್ ಸಭಾಂಗಣದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು.
ಸಿಯುಕೆಯ ಕಾನೂನು ಅಧ್ಯಯನ ವಿಭಾಗ ಮತ್ತು ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ನಡುವೆ ಏರ್ಪಟ್ಟಿರುವ ಈ ಒಪ್ಪಂದವು, ಸಹಯೋಗದ ಶೈಕ್ಷಣಿಕ ಹಾಗೂ ಸಂಶೋಧನಾ ಉಪಕ್ರಮಗಳ ಮೂಲಕ ಭಾರತೀಯ ನ್ಯಾಯಶಾಸ್ತ್ರ ಮತ್ತು ಅದಕ್ಕೆ ಸಂಬಂಧಿಸಿದ ಇತರ ಅಧ್ಯಯನ ಕ್ಷೇತ್ರಗಳನ್ನು ಉತ್ತೇಜಿಸುವ, ಸಂರಕ್ಷಿಸುವ ಹಾಗೂ ಪ್ರಸಾರ ಮಾಡುವ ಗುರಿಯನ್ನು ಹೊಂದಿದೆ.
ಈ ಸಹಯೋಗದ ವ್ಯಾಪ್ತಿಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಭಾಗವಹಿಸುವಿಕೆ, ಪಠ್ಯಕ್ರಮ ಅಭಿವೃದ್ಧಿ, ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ, ಗ್ರಂಥಾಲಯ ಮತ್ತು ಅಧ್ಯಯನ ಸೌಲಭ್ಯಗಳ ಬಳಕೆ, ಜಂಟಿ ಸಂಶೋಧನಾ ಯೋಜನೆಗಳು ಮತ್ತು ಪ್ರಕಟಣೆಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳು ಹಾಗೂ ಜನಸಂಪರ್ಕ ಚಟುವಟಿಕೆಗಳು ಸೇರಿವೆ. ಅಲ್ಲದೆ, ಬೌದ್ಧಿಕ ಆಸ್ತಿ ಹಕ್ಕುಗಳು, ಶೈಕ್ಷಣಿಕ ಮನ್ನಣೆ, ಸಾಂಸ್ಥಿಕ ಸಮನ್ವಯ ಮತ್ತು ಸಹಯೋಗದ ಚಟುವಟಿಕೆಗಳ ಮೇಲ್ವಿಚಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಈ ಒಪ್ಪಂದ ಅವಕಾಶ ಕಲ್ಪಿಸುತ್ತದೆ.
ಭಾರತೀಯ ನ್ಯಾಯಶಾಸ್ತ್ರ ಮತ್ತು ಭಾರತೀಯ ನ್ಯಾಯಶಾಸ್ತ್ರೀಯ ಚಿಂತನೆಗಳ ಅಧ್ಯಯನಕ್ಕಾಗಿ ಬಲವಾದ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ರೂಪಿಸುವುದು, ಕಾನೂನು ಕ್ಷೇತ್ರದ ಪಾಂಡಿತ್ಯವನ್ನು ವೃದ್ಧಿಸುವುದು, ಶೈಕ್ಷಣಿಕ ಸಾಮಥ್ರ್ಯವನ್ನು ಬಲಪಡಿಸುವುದು, ಗುಣಮಟ್ಟದ ಸಂಶೋಧನೆಯನ್ನು ಪೆÇ್ರೀತ್ಸಾಹಿಸುವುದು ಹಾಗೂ ಭಾರತದಲ್ಲಿ ಕಾನೂನು ಶಿಕ್ಷಣ ಮತ್ತು ಕಾನೂನು ಚಿಂತನೆಯ ಬೆಳವಣಿಗೆಗೆ ಅರ್ಥಪೂರ್ಣ ಕೊಡುಗೆ ನೀಡುವುದು ಈ ಉಪಕ್ರಮದ ಪ್ರಮುಖ ಉದ್ದೇಶಗಳಾಗಿವೆ.
ಸಿಯುಕೆಯ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ ಮತ್ತು ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ಮರ್ತೂರಿನ ಅಧ್ಯಕ್ಷರಾದ ಬಸವರಾಜ ಪಾಟೀಲ್ ಸೇಡಂ ಅವರು, ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್‍ನ ಕಾರ್ಯಕಾರಿ ಟ್ರಸ್ಟಿ ಮಹಾದೇವಯ್ಯ ಕರದಳ್ಳಿ ಮತ್ತು ಸಿಯುಕೆಯ ಕಾನೂನು ಅಧ್ಯಯನ ನಿಕಾಯದ ಡೀನ್ ಪೆÇ್ರ. ಬಸವರಾಜ ಎಂ. ಕುಬಕಡ್ಡಿ ಉಪಸ್ಥಿತರಿದ್ದರು.
ಸಿಯುಕೆಯ ವಿವಿಧ ನಿಕಾಯಗಳ ಡೀನ್‍ಗಳು ಹಾಗೂ ವಿಭಾಗಗಳ ಮುಖ್ಯಸ್ಥರಾದ ಪೆÇ್ರ. ಎನ್. ಸತ್ಯನಾರಾಯಣ, ಪೆÇ್ರ. ಪಾಂಡುರಂಗ ವಿ. ಪತ್ತಿ, ಪೆÇ್ರ. ರಾಜೀವ್ ಶೇಷ ಜೋಶಿ, ಪೆÇ್ರ. ಪಲ್ಲೆಪೆÇೀಗು ರಾಘವಯ್ಯ, ಪೆÇ್ರ. ಜಿ. ಆರ್. ಅಂಗಡಿ, ಪೆÇ್ರ. ಆರ್. ಎಸ್. ಹೆಗಡಿ, ಪೆÇ್ರ. ವಿಜಯೇಂದ್ರ ಪಾಂಡೆ, ಪೆÇ್ರ. ಎಂ. ಅಮರೇಂದ್ರ ಮಸ್ತ, ಪೆÇ್ರ. ಸಂದೀಪ್ ವಿಶ್ವನಾಥರಾವ್ ರಣಭೀರ್‍ಕರ್ ಮತ್ತು ಪೆÇ್ರ. ಮೊಹಮ್ಮದ್ ಅಸ್ಲಂ ಎಂ. ಎ. ಸೇರಿದಂತೆ ಉಪ ಕುಲಸಚಿವ ಡಾ. ಶೇಕ್ ಅಜರುದ್ದೀನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.