Home ಜಿಲ್ಲೆ ಕಲಬುರಗಿ ಕಲ್ಯಾಣ ಕರ್ನಾಟಕದ 800 ನೌಕರರ ಸೇವಾಭದ್ರತೆಗೆ ಮನವಿ

ಕಲ್ಯಾಣ ಕರ್ನಾಟಕದ 800 ನೌಕರರ ಸೇವಾಭದ್ರತೆಗೆ ಮನವಿ

ಕಲಬುರಗಿ,ನ.3: ಕೊರೋನಾ ಮಹಾಮಾರಿಯ ಕಾಲದಲ್ಲಿ ಆಗಿನ ಸರ್ಕಾರದ ಸಂಪುಟ ಉಪ ಸಮಿತಿಯ ಕರಾಳ ಸುತ್ತೋಲೆಯಿಂದ ಉಂಟಾಗಿರುವ ಕಲ್ಯಾಣ ಕರ್ನಾಟಕದ ಸುಮಾರು ಆರು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 800 ನೌಕರರ ಸೇವಾ ಅನಿಶ್ಚಿತತೆಯ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಲ್ಯಾಣದ ನೌಕರರ ಸೇವಾ ಭದ್ರತೆಗೆ ಕಾನೂನಾತ್ಮಕವಾಗಿ ಮತ್ತು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ರಾಜ್ಯದ ಗೃಹ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ ಅವರ ನೇತೃತ್ವದಲ್ಲಿ ಸಮಿತಿಯ ನಿಯೋಗ ಭೇಟಿ ಮಾಡಿ ಮನವರಿಕೆ ಮಾಡಲಾಯಿತು.
ಕೊರೋನಾ ಮಹಾಮಾರಿ ರೋಗ ಹರಡಿರುವ ಸಂದರ್ಭದಲ್ಲಿ ಆಗಿನ ಸರ್ಕಾರದ 371ನೇ ಜೇ ಸಂಪುಟ ಉಪ ಸಮಿತಿಯು 2020 ರಲ್ಲಿ ರಾಜ್ಯದ ನೇಮಕಾತಿಗಳಿಗೆ ಸಂಬಂಧಿಸಿದಂತೆ ಅವಾಸ್ತವಿಕವಾದ ಮತ್ತು ಸಂವಿಧಾನದ ಮಿಸಲಾತಿಯ ಮೂಲ ಉದ್ದೇಶಕ್ಕೆ ವಿರುದ್ಧವಾದ ಹಾಗೂ ಕಲ್ಯಾಣ ಕರ್ನಾಟಕದ 371ನೇ ಕಲಂ ಜಾರಿಗೆಗೆ ಪ್ರತಿಕೂಲವಾದ ಸುತ್ತೋಲೆಯನ್ನು ಜಾರಿಗೆ ತಂದಿರುವ ಕಾರಣ ಕಲ್ಯಾಣ ಕರ್ನಾಟಕ ಪ್ರದೇಶದ ಪಾಲಿನ ನೌಕರಿಗಳು ಸಮರ್ಪಕವಾಗಿ ಸಿಕ್ಕಿಲ್ಲ ಅಷ್ಟೆ ಅಲ್ಲದೆ 2020ರ ಸುತ್ತೋಲೆಯಲ್ಲಿ ಅಭ್ಯರ್ಥಿಗಳಿಗೆ ಆಯ್ಕೆ ಕೇಳುವ ಶರತ್ತು ಇದ್ದ ಕಾರಣ ಮಿಸಲಾತಿಯ ಮೂಲ ಉದ್ದೇಶವೆ ಗಾಳಿಗೆ ತೊರಲಾಗಿದೆ.
ಇದನ್ನು ಸರಿಪಡಿಸಿ ಸಂವಿಧಾನ ಬದ್ಧವಾಗಿ ಮಿಕ್ಕುಳಿದ ವೃಂದ ಮತ್ತು 371ನೇ ಜೇ ಕಲಂ ಕೋಟಾದಲ್ಲಿ ನ್ಯಾಯ ಬದ್ಧವಾಗಿ ನಮ್ಮ ಪಾಲಿನ ನೌಕರಿಗಳು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಸಿಗಲು ಸರ್ಕಾರ 371ನೇ ಜೇ ಕಲಂ ಅಡಿ 1.2.23ರ ಸುತ್ತೋಲೆಯಂತೆ ನೇಮಕಾತಿಗಳು ನಡೆಸಲು ನಿಯಮ ಜಾರಿಗೆ ತಂದಿದೆ.ಇದರಿಂದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಸಂವಿಧಾನದ ಮಿಸಲಾತಿಯ ಮೂಲ ಉದ್ದೇಶಕ್ಕೆ ಪೂರಕವಾಗಿ ನೇಮಕಾತಿಗಳಲ್ಲಿ ಅವಕಾಶಗಳು ಸಿಗಲು ಆರಂಭವಾಗಿದ್ದವು ಅದರಂತೆ ಸುಮಾರು ಆರು ಇಲಾಖೆಯಲ್ಲಿ ಅರ್ಹತೆ ಮತ್ತು ಅಂಕಗಳಂತೆ ಮೆರಿಟ್ ಆಧಾರದ ಮಾನದಂಡದಂತೆ ಕಲ್ಯಾಣ ಕರ್ನಾಟಕದ 800 ಅಭ್ಯರ್ಥಿಗಳು ನಿಯಮಾನುಸಾರ ಆಯ್ಕೆಯಾಗಿ ಆಯಾ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಮಸ್ಯೆಗೆ ಸ್ಪಂದಿಸಿ ಮಾತನಾಡಿದ ಗೃಹ ಸಚಿವರು ಈ ವಿಷಯಕ್ಕೆ ಸಂಬಂಧಿಸಿ ತಮಗೆ ಸಂಪೂರ್ಣ ಮನವರಿಕೆ ಇದೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮನೀಷ ಜಾಜು,ರೌಫ ಖಾದ್ರಿ, ಕುಮಾರ ಮಠ, ಶಿವಕುಮಾರ ಪಾಟೀಲ,
ಮಹಿಬೂಬ, ಕಾಶಿನಾಥ ಬಿರಾದಾರ, ದೇವಪ್ಪ ,ವಿಶ್ವನಾಥ ಮಾಳಗೆ, ಮಾಳಪ್ಪ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.