Home ಜಿಲ್ಲೆ ಕಲಬುರಗಿ 5 ರಂದು ನಗರ ಸಂಕೀರ್ತನೆ

5 ರಂದು ನಗರ ಸಂಕೀರ್ತನೆ

ಕಲಬುರಗಿ,ನ.3: ವಿಶ್ವ ಮಧ್ವ ಮಹಾ ಪರಿಷತ್ತಿನ ಅಂಗ ಸಂಸ್ಥೆಯಾದ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ 310 ನೇ ನಗರ ಸಂಕೀರ್ತನೆಯನ್ನು ನ. 5 ರಂದು ಸಾಯಂಕಾಲ 4.30 ಕ್ಕೆ ಬ್ರಹ್ಮಪುರದ ದೇಶಮುಖ ವಾಡಾದ ಶ್ರೀ ರುಕ್ಮಣಿ ಪಾಂಡುರಂಗನ ಸನ್ನಿಧಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ತತ್ತ್ ಪ್ರಯುಕ್ತ ಶ್ರೀ ರಂಗ ವಿಠ್ಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಲಕ್ಷ್ಮಿ ಶೋಭಾನ ಮತ್ತು ಶ್ರೀ ವೆಂಕಟೇಶ ಸ್ತವರಾಜ ಸ್ತವನದ ಸಾಮೂಹಿಕ ಪಾರಾಯಣ ನಂತರ ಪ್ರಚಾರ ವಾಹಿನಿಯ ಅಧ್ಯಕ್ಷರಾದ ಪಂ. ಗೋಪಾಲಾಚಾರ್ಯ ಅಕಮಂಚಿ ಅವರಿಂದ ಪ್ರವಚನ ನಡೆಯಲಿದೆ.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ
ಪಿ. ಡಿ. ಎ. ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರಾದ ಪಂ. ಮುಕುಂದಾಚಾರ್ಯ ಹರವಾಳಕರ ಅವರು ಆಗಮಿಸುವರು. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಹರಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಂಚಾಲಕರಾದ ಬೆಂಕಿ ಭೀಮಣ್ಣ ಮೋತಕಪಲ್ಲಿ ಅವರು ತಿಳಿಸಿದ್ದಾರೆ.