
ಲಕ್ಷೆö್ಮÃಶ್ವರ,ನ.೩: “ಕನ್ನಡ ಕೊರಳಿನ ಭಾಷೆಯಲ್ಲ, ಕರುಳಿನ ಭಾಷೆ.ಕನ್ನಡ ಭಾಷೆಯನ್ನು ನಾವು ನಿತ್ಯ ಸಂಭ್ರಮಿಸಬೇಕು. ಕನ್ನಡ ನಾಡಿನ ಸಾಂಸ್ಕöÈತಿಕ ಇತಿಹಾಸಕ್ಕೆ ಪುಲಿಗೆರೆಯ ನೀಡಿದ ಕೊಡುಗೆ ಅಪಾರ. ಪುಲಿಗೆರೆ ಆದಿಕವಿ ಪಂಪನ ನೆಲೆಬೀಡಾಗಿದ್ದು ಸಾಹಿತ್ಯ ಲೋಕಕ್ಕೆ ತಿರುಳುಗನ್ನಡ ಭಾಷೆಯನ್ನು ನೀಡಿದ ಹೆಮ್ಮೆ ಪುಲಿಗರಿಗೆ ಇದೆ ಎಂದು ಇಂತಹ ನೆಲದಲ್ಲಿ ಕನ್ನಡದ ಅಸ್ಮಿತೆಯ ಹಬ್ಬವನ್ನು ಈ ಕಾರ್ಯಕ್ರಮ ಅರ್ಥಪೂರ್ಣವಾಗಿಸಿದೆ”ಎಂದು ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರಡಿ ಅಭಿಪ್ರಾಯಪಟ್ಟರು.
ಅವರುಲಕ್ಷೆ÷್ಮÃಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ದಿ ಯೂನಿಕ್ ಸ್ಕೂಲ್ ಲಕ್ಷೆ÷್ಮÃಶ್ವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ “ಕನ್ನಡ ನಾಡಿಗೆ ಪುಲಿಗೆರೆಯ ಕೊಡುಗೆ” ಮಕ್ಕಳ ಚಿತ್ರಕಲಾ ಪ್ರದರ್ಶನ, ನಾಡು-ನುಡಿಗೆ ಗಾನ ನಮನ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾದರು.
ಬಹುಮಾನ ವಿತರಕರಾಗಿ ಭಾಗವಹಿಸಿ ಮಾತನಾಡಿದ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಶೀಮಿಕೇರಿ”ಪುಲಿಗೆರೆಯ ಸುಮಾರು ೨೦೦೦ ವರ್ಷಗಳ ಶ್ರೇಷ್ಠ ಶ್ರೀಮಂತ ಇತಿಹಾಸ- ಪರಂಪರೆಯನ್ನು ನಮ್ಮೆಲ್ಲರ ಕಣ್ಣ ಮುಂದೆ ಕಟ್ಟುವಂತೆ ವಿಚಾರ ಸಂಕಿರಣದ ವಿಷಯ ಮಂಡನೆಯಾಯಿತು.ಇದಕ್ಕೆ ಪೂರಕವಾಗಿ ಮಕ್ಕಳ ಚಿತ್ರಕಲಾ ಪ್ರದರ್ಶನ ಮತ್ತು ಪುಲಿಗೆರೆಯ ಕುರಿತಾದ ನಾಡು ನುಡಿಗೆ ಗಾನ ನಮನದ ಮೂಲಕ ಕನ್ನಡದ ಕಂಪು ಇಂಪು ಕೇಳಿಬಂದಿತು.
“ಕನ್ನಡ ನಾಡಿಗೆ ಪುಲಿಗೆರೆಯ ಕೊಡುಗೆ”ಕುರಿತು ವಿಚಾರ ಸಂಕಿರಣದ ವಿಷಯ ಮಂಡನೆ ಮಾಡಿದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ “ನಮ್ಮ ಪುಲಿಗೆರೆ ನೂರಾರು ಶಾಸನಗಳು,ಸ್ಮಾರಕಗಳು ಮತ್ತು ಐತಿಹಾಸಿಕ ಹಿರಿಮೆಯು ಕೇವಲ ಕಲ್ಲುಗಳಲ್ಲ,ಅವು ಕನ್ನಡ ಅಸ್ಮಿತೆಯ ಜೀವಂತ ಸಾಕ್ಷಿಗಳು.ಕನ್ನಡ ಭಾಷೆ,ಸಾಹಿತ್ಯ,ಸಂಸ್ಕöÈತಿ, ಪರಂಪರೆಗೆ ಪುಲಿಗೆರೆಯು ನೀಡಿದ ಎರಡು ಸಾವಿರ ವರ್ಷಗಳ ಇತಿಹಾಸದ ಕೊಡುಗೆಯನ್ನು ಮರೆತರೆ ಕನ್ನಡದ ಚರಿತ್ರೆಯೇ ಅಪೂರ್ಣವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ದಿ ಯುನಿಕ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯ ಹಾಗೂ ಹಿರಿಯ ಚಿಂತಕ ಬಿ.ಎಂ.ಕುAಬಾರ ಮುಖ್ಯ ಅತಿಥಿಪರ ನುಡಿಗಳನ್ನಾಡಿದರು.ವಿಶೇಷ ಆಹ್ವಾನಿತರಾಗಿ ಹಿರಿಯ ಶಿಕ್ಷಕ ಪಿ.ಎಚ್.ಕೊಂಡಾಬಿAಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪುಲಿಗೆರೆಯ ನಾಡು-ನುಡಿ, ಪರಂಪರೆ, ಸಂಸ್ಕöÈತಿಯನ್ನು ಬಿಂಬಿಸುವ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಸುಮಾರು ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಅವರಿಗೆ ವೇದಿಕೆಯಲ್ಲಿ ಬಹುಮಾನವನ್ನು ವಿತರಿಸಲಾಯಿತು. ಪುಲಿಗೆರೆಯ ಸಂಸ್ಕöÈತಿ, ಪರಂಪರೆಯ ಕುರಿತು ಸಾಹಿತಿ ಈಶ್ವರ ಮೆಡ್ಲೇರಿ ರಚಿಸಿದ ಗೀತೆಯನ್ನು ಸಿ.ಆರ್.ಪಿ ನವೀನ ಅಂಗಡಿ ಸುಶ್ರಾವ್ಯವಾಗಿ ಹಾಡಿ ಸಭಿಕರ ಮನಗೆದ್ದರು.
ಜಿಲ್ಲಾ ಉಪ ನಿರ್ದೇಶಕರ ಹುದ್ದೆಯಿಂದ ಜಂಟಿ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿದ ಆರ್.ಎಸ್.ಬುರಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವರಾಜ ಶೀಮಿಕೇರಿ, ಯೂನಿಕ್ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ದೇಶಪಾಂಡೆ, ಹಿರಿಯ ಚಿಂತಕ ಮುಖ್ಯೋಪಾಧ್ಯಾಯ ಬಿ.ಎಂ.ಕುAಬಾರ, ವಿಶೇಷ ಆಹ್ವಾನಿತ ಹಿರಿಯ ಶಿಕ್ಷಕ ಪಿ. ಎಚ್.ಕೊಂಡಾಬಿAಗಿ ಯವರನ್ನು ಸನ್ಮಾನಿಸಲಾಯಿತು.
ಕಸಾಪ ಪದಾಧಿಕಾರಿ ಈರಣ್ಣ ಗಾಣಿಗೇರ ಶಾಲೆಯ
ಶಶಿಕಾಂತ ಕುಂಬಾರ
ಎಸ್.ಎಸ್.ಗುಡಗೇರಿ
ಶಿಕ್ಷಕಿ ಮಂಗಳಗೌರಿ ಹೂಗಾರ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಫ್.ಆದಿ, ರಮೇಶ ನವಲೆ, ಶಿಕ್ಷಣಾಧಿಕಾರಿಗಳ ಸಂಘದ ಎಸ್.ಕೆ.ಹವಾಲ್ದಾರ, ಬಿ.ಸಿ. ಪಟ್ಟೇದ, ಆರ್.ಎಫ್.ರಿತ್ತಿ, ಎಚ್.ಎಂ.ಗುತ್ತಲ ಎಚ್.ಎಫ್.ನದಾಫ, ಪಿ.ಎಸ್. ಪುರಾಣಮಠ, ಕೆ.ಎಸ್.ಕೋಷ್ಠಿ, ವಸಂತ ಬೇವಿನಮರದ, ಅನಂತರಾಜ ಮಿಣಜಗಿ, ಸೋಮೇಶ ಉಪನಾಳ, ಸಿಆರ್ಪಿ ಚಂದ್ರಶೇಖರ ವಡಕಣ್ಣವರ, ನಾಗರಾಜ ಶಿಗ್ಲಿ, ಈರಣ್ಣ ರಿತ್ತಿ, ಸಿ.ಎಫ್.ಪಾಟೀಲ, ಮಂಜುನಾಥ ದೊಡ್ಡಮನಿ, ಸಂತೋಷ ಗುಡಗೇರಿ, ಅಶೋಕ ಬೆಟಗೇರಿ, ಷಣ್ಮುಖ ಗಡ್ಡೆಣ್ಣವರ ಸೇರಿದಂತೆ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.























