
ಕಲಬುರಗಿ,ಅ.16-ನಗರದ ಇಂಜಿನಿಯರಿಂಗ್ ಕಾಲೇಜಿನ ಬಾಲಕರ ವಸತಿ ಗೃಹ ಹತ್ತಿರದ ರಸ್ತೆಯ ಮೇಲೆ ಮತ್ತು ಮನಿಹಾರ್ ಫಂಕ್ಷನ್ ಹಾಲ್ ಸಮೀಪದ ರಸ್ತೆಯ ಮೇಲೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ನಗರದ ಇಂಜಿನಿಯರಿಂಗ್ ಕಾಲೇಜಿನ ಬಾಲಕರ ವಸತಿ ಗೃಹದ ಹತ್ತಿರದ ರಸ್ತೆಯ ಮೇಲೆ ಬೈಕ್ಗೆ ಕಾರು ಡಿಕ್ಕಿ ಹೊಡೆದು ಸಂತೋಷ ಕಾಲೋನಿಯ ಮರೆಪ್ಪ ಎಂಬುವವರು ಮೃತಪಟ್ಟಿದ್ದು, ಮನಿಹಾರ್ ಫಂಕ್ಷನ್ ಹಾಲ್ ಸಮೀಪದ ರಸ್ತೆಯ ಮೇಲೆ ಬೈಕ್ ಡಿಕ್ಕಿ ಹೊಡೆದು ಉಮರ್ ಕಾಲೋನಿಯ ನಜೀರ್ ಎಂಬುವವರು ಮೃತಪಟ್ಟಿದ್ದಾರೆ.
ಸಂಚಾರಿ ಪೊಲೀಸ್ ಠಾಣೆ-1 ವiತ್ತು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.























