
ಕಲಬುರಗಿ,ಅ.16-ಗುಲಬರ್ಗಾ ದೂರದರ್ಶನ ಕೇಂದ್ರದ ಪರಿಶೀಲನೆಗಾಗಿ ಬೆಂಗಳೂರಿನ ದೂರ ದರ್ಶನ ಕೇಂದ್ರ ಚಂದನದ ಉಪ ನಿದೇರ್ಶಕ ಎಲ್.ಗುರುರಾಜ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಜಾನಪ ದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾ ಟೀಲರ ನೇತೃತ್ವದ ನಿಯೋಗವು ಗುರುವಾರ ಅವರನ್ನು ಭೇಟಿ ಮಾಡಿ ದೂರ ದರ್ಶನ ಕೇಂದ್ರ ಹಾಗೂ ಆಕಾಶವಾಣಿ ಕೇಂದ್ರಗಳ ಉಳಿಸುವ ಮತ್ತು ಅವುಗಳನ್ನು ಅಭಿವೃದ್ಧಿಪಡಿಸುವ ಮತ್ತು ಈ ಭಾಗದ ವಿವಿಧ ಕ್ಷೇತ್ರಗಳ ಸಾಧಕರ ಹಾಗೂ ಕೃಷಿಯ ಬಗ್ಗೆ ಸಾಕಷ್ಟು ಅನುಕೂಲತೆಗಳ ಪ್ರಚಾರ ಪ್ರಸಾರ ಮಾಡುವುದು ಮುಖ್ಯವಾಗಿದೆ ಎಂದು ಮನವಿ ಸಲ್ಲಿಸಲಾಯಿತು.
ಯಾವುದೇ ಸಿಬ್ಬಂದಿಗಳಿಲ್ಲದೆ ಅನಾಥವಾಗಿರುವ ದೂರದರ್ಶನ ಕೇಂದ್ರದ ಬಗ್ಗೆ ಕೇಂದ್ರ ಸಚಿವ ಅಶ್ವಿನ್ ವೈಷ್ಣವÀ ಅವರು ಈ ಭಾಗದ ಯಾವುದೇ ಕೆಲಸಗಳಿಗೆ ಸ್ಪಂದಿಸ ದಿರುವುದು ವಿಷಾದನೀಯವಾಗಿದೆ. ಕಾರಣ ಸಚಿವರು ಕೂಡಲೇ ಈ ಕಡೆ ಹೆಚ್ಚಿನ ಗಮನ ಹರಿಸಿ ಕಲಬುರಗಿ ದೂರದ ರ್ಶನ ಕೇಂದ್ರ ಹಾಗೂ ಆಕಾಶವಾಣಿ ಕೇಂದ್ರಗಳು ಉಳಿಸಕೊಡಲು ಒತ್ತಾಯಿಸಿದರು.
ಹಿರಿಯ ಸಾಹಿತಿ ಭೀಮಣ್ಣ ಬೋನಾಳ ,ನಾರಾಯಣ ಎಂ.ಜೋಶಿ, ಬಿ.ಎಂ.ರಾವುರ, ಕರ್ನಾಟಕ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಿ.ಪಿ.ಸಜ್ಜನ ಉಪಸ್ಥಿತರಿದ್ದರು.























