
ಕಲಬುರಗಿ,ಅ.16-ಸಹಕಾರ, ಸಹಬಾಳ್ವೇ ನಮ್ಮೆಲ್ಲರ ಮೂಲ ಸೆಲೆಯಾಗಬೇಕು, ಸುಸ್ಥಿರ ಆರ್ಥಿಕ ಸವಾಲುಗಳನ್ನು ಪರಿಹರಿಸಿಕೊಂಡು ಎಲ್ಲರಿಗಾಗಿ ನಾವು, ನಮಗಾಗಿ ಎಲ್ಲರು ಎಂಬ ಮನೋಭಾವನೆಯನ್ನು ಯುವ ಜನತೆ ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯವೆಂದು ಪ್ರಾಚಾರ್ಯರಾದ ಸುರೇಶ ಹವಲ್ದಾರ ಅವರು ಕರೆ ನೀಡಿದ್ದಾರೆ.
ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಬಿ.ಜಿ. ಪಾಟೀಲ ಅವರ ನೇತೃತ್ವದ ನಗರದ ಪ್ರತಿಷ್ಠಿತ ಚಂದ್ರಕಾಂತ ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ ಒಂದು ದಿನದ
ಸಹಕಾರ ಶಿಕ್ಷಣ ಮತ್ತು ಅಭಿವೃದ್ದಿ ಯೋಜನೆಯ ತರಬೇತಿ ಕಾರ್ಯಾಗಾರದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ವಿಪೂಲ ಅವಕಾಶಗಳಿದ್ದು ಸಿಕ್ಕ ಅವಕಾಶಗಳ ಸದುಪಯೋಗ ಪಡಿಸಿಕೊಂಡು ಶಿಸ್ತು ಭರಿತ ಸಾಧನೆಯೊಡನೆ ಸ್ವಯಂ ಉದ್ಯೋಗ ಸೃಷ್ಠಿಸಿಕೊಂಡು ಸಂಪನ್ಮೂಲ ವ್ಯಕ್ತಿಗಳಾಗಬೇಕು. ಕೌಶಲ್ಯ
ಆಧಾರಿತ ಶಿಕ್ಷಣದ ಕಡೆಗೆ ಗಮನ ಹರಿಸಬೇಕೆಂದು ಯುವ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕೋ- ಆಪರೇಟಿವ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಅರುಣಕುಮಾರ ಅವರು ಮಾತನಾಡಿ ಸಹಕಾರ ಕ್ಷೇತ್ರ ಸರ್ವರಿಗು ಸಮಬಾಳು, ಸರ್ವರಿಗೂ ಸಮಪಾಲು ಧೋರಣೆಯನ್ನು ಹೊಂದಿದೆ ಎಂದು ತಮ್ಮ ಅನುಭವಗಳನ್ನು ಯುವ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಸಂಚಾಲಕರಾದ ರೇಖಾ ಗಾಯಕವಾಡ ಸ್ವಾಗತಿಸಿದರು ರಾಜೇಶ ಯಾವಗಲ್ ಅವರು ಮಾತನಾಡಿ ಆರ್ಥಿಕ ಅಭಿವೃದ್ಧಿಗೆ ಹಾಗೂ ನಿರುದ್ಯೋಗ ನಿವಾರಣೆಗೆ ಸಹಕಾರಿ ಒಕ್ಕೂಟಗಳು ನಿರಂತರ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದರು.























