
ಮಂಗಳೂರು-ಮAಗಳೂರು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಸುರೇಂದ್ರ ಕಂಬಳಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳನ್ನು ಬಯೋಮೆಟ್ರಿಕ್ ಅಥೆಂಟಿಕೇಷನ್ ದೃಢೀಕರಣ ಮೂಲಕ ಮರು ಪರಿಶೀಲೀಸಲು ಮುಂದಿನ ದಿನಗಳಲ್ಲಿ ಮನೆ-ಮನೆಗೆ ಭೇಟಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಮತ್ತು ಗ್ಯಾರಂಟಿ ಅನುಷಾ್ಠನ ಸಮಿತಿ ಸದಸ್ಯರ ಮೂಲಕ ನಡೆಯಲಿರುವುದಾಗಿ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.
ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯಾ ಸ್ವಾಗತಿಸಿದರು. ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷಾ್ಟನ ಸಮಿತಿ ಸದಸ್ಯರಾದ ಜಯಂತಿ, ಪ್ರಶಾಂತ್ ಎಸ್, ನವಾಜ್, ಶೈಲಾ ನೀತಾ ಡಿ ಸೋಜಾ, ರಿತೇಶ್ ಅಂಚನ್, ಶ್ರೀಧರ ಪಂಜ , ಮೊಹಮ್ಮದ್ ಮುಸ್ತಾಪ ಮತ್ತು ಮಹಮ್ಮದ್ ರಫೀಕ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ತಾಲೂಕು ಪಂಚಾಯತ್ ವ್ಯವಸ್ಥಾಪಕಿ ಸುವರ್ಣಾ ಹೆಗಡೆ ಮತ್ತಿತ್ತರರು ಇದ್ದರು.

























