Home ಜಿಲ್ಲೆ ಮಂಗಳೂರು ಡಿವೈಎಫ್‌ಐ ೧೬ ನೇ ಸಮ್ಮೇಳನ ಆರೋಗ್ಯ ಶಿಕ್ಷಣ ಉದ್ಯೋಗ ಯುವಜನರ ಬೇಡಿಕೆಯಾಗಲಿ: ಇಮ್ತಿಯಾಜ್

ಡಿವೈಎಫ್‌ಐ ೧೬ ನೇ ಸಮ್ಮೇಳನ ಆರೋಗ್ಯ ಶಿಕ್ಷಣ ಉದ್ಯೋಗ ಯುವಜನರ ಬೇಡಿಕೆಯಾಗಲಿ: ಇಮ್ತಿಯಾಜ್

ಕುಂದಾಪುರ-ಆರೋಗ್ಯ ಶಿಕ್ಷಣ ಇಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗೀಯವರ ಕೈಯಲ್ಲಿದ್ದು ಅದು ಜನಸಾಮಾನ್ಯರ ಕೈಗೆಟುಕುತ್ತಿಲ್ಲ ಜಿಲ್ಲೆಗಳಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಗೆ ಬರುತ್ತಿದ್ದು ಡಿಗ್ರಿ ಪ್ರಮಾಣ ಪತ್ರ ಹಿಡಿದು ಮೂರುಕಾಸಿಗೆ ಕೆಲಸ ಮಾಡುತ್ತಿದ್ದು ಪೋಷಕರೇ ವಯಸ್ಕ ಯುವಜನರನ್ನು ಸಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಜಿಲ್ಲೆಯ ಯುವಜನತೆ ಧ್ವನಿ ಎತ್ತಬೇಕಾಗಿದೆ ಎಂದು ಡಿವೈಎಫ್‌ಐ ರಾಜ್ಯ ಮುಖಂಡರೂ ಹಾಗೂ ದಕ್ಷಿಣ ಕನ್ನಡ ಡಿವೈಎಫ್‌ಐ ಅಧ್ಯಕ್ಷ ಬಿ ಕೆ ಇಮ್ತಿಯಾಜ್ ಹೇಳಿದರು.
ಅವರು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ನಡೆದ ಡಿವೈಎಫ್‌ಐ ೧೬ನೇ ಕುಂದಾಪುರ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಶಿಕ್ಷಣ ಉದ್ಯೋಗವನ್ನು ಈ ದೇಶದ ಬಂಡವಾಳಗಾರರ ಕೈಯಲ್ಲಿ ಇಟ್ಟಿರುವುದರಿಂದ ಭಾರತ ಜಗತ್ತಿಗೆ ವಿಶ್ವಗುರು ಆಗಿದೆ.ಇಂದು ಒಬ್ಬ ಸಾಮಾನ್ಯ ಮನುಷ್ಯ ಗಂಭೀರ ಕಾಯಿಲೆಗೊಳಗಾದರೆ ವಾಟ್ಸ್ ಆ?ಯಪ್ ಮೂಲಕ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲ, ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಭೂಮಿ,ಕಟ್ಟಡ ಇದೆ ಆದರೆ ಖಾಯಂ ವೈದ್ಯರೇ ಇಲ್ಲ ಎಂದು ಹೇಳಿದ ಅವರು ಡಿವೈಎಫ್‌ಐಯಂತ ಯುವಜನ ಸಂಘಟನೆ ಮಾತ್ರ ಈ ಸಮಸ್ಯೆಗಳಿಗೆ ಹೋರಾಟ ಮಾಡಲು ಸಾಧ್ಯ ಆರೋಗ್ಯ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ತೀವ್ರ ಹೋರಾಟ ನಡೆಸಿ ಎಂದು ಯುವಜನರಿಗೆ ಕರೆ ನೀಡಿದರು.
ಇಂದು ಯುವಜನತೆಯನ್ನು ಸದ್ಬಳಕೆ ಮಾಡಿಕೊಳ್ಳಲು ಆಳುವ ಸರ್ಕಾರಗಳು ಮುಂದಾಗುತ್ತಿಲ್ಲ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಯುವ ಪ್ರತಿಭೆಗಳಿಗೆ ಅವಕಾಶ ಇಲ್ಲ.ಯುವಜನತೆ ಇಂದು ತಮ್ಮ ಸ್ವಂತ ಶ್ರಮದಿಂದ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾಧನಗೈದವರಿಗೆ ಗೌರವ: ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕುಂದಾಪುರದ ಡಾ.ಸತೀಶ್ ಖಾರ್ವಿ, ಸ್ಥಳೀಯ ಖ್ಯಾತ ಕ್ರಿಕೆಟಿಗ ಮನೋಜ್ ನಾಯರ್, ರಕ್ತದಾನಿ ಸುಧಾಕರ ಕಾಂಚನ್ ಅವರಿಗೆ ಸಮ್ಮೇಳನದಲ್ಲಿ ಗೌರವಿಸಲಾಯಿತು.
ಸಮ್ಮೇಳನದ ಅಧ್ಯಕ್ಷತೆ ಗಣೇಶ್ ದಾಸ್ ವಹಿಸಿದ್ದರು.
ಸಮ್ಮೇಳನದ ನಿರ್ಣಯ ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹ, ಕುಂದಾಪುರ ಪುರಸಭೆ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ, ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಗೊಳಿಸಿ ಮೇಲ್ದರ್ಜೆಗೆ ಏರಿಸಲು ಒತ್ತಾಯ,ಹೆಮ್ಮಾಡಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು, ಕುಂದಾಪುರ -ಗಂಗೊಳ್ಳಿ ಸಂಪರ್ಕ ಸೇತುವೆ ಮಾಡಲು ಒತ್ತಾಯಿಸಿ ನಿರ್ಣಯ ಮಂಡಿಸಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಹೊಸ ನಾಯಕತ್ವ ಆಯ್ಕೆ: ಡಿವೈಎಫ್‌ಐ ತಾಲೂಕು ಅಧ್ಯಕ್ಷರಾಗಿ ವಿಶ್ವನಾಥ್ ದಾರಿಮನೆ, ಕಾರ್ಯದರ್ಶಿಯಾಗಿ ಗಣೇಶ್ ದಾಸ್, ಕೋಶಾಧಿಕಾರಿ ಉದಯ ಟೈಲರ್ ಆಯ್ಕೆಯಾದರು.
ರಾಘವೇಂದ್ರ ದೋಣಿ ಮನೆ ಸ್ವಾಗತಿಸಿದರು, ಮಂಜುನಾಥ ಶೋಗನ್ ಕಾರ್ಯಕ್ರಮ ನಿರೂಪಿಸಿದರು. ರಾಜ ಬಿಟಿಆರ್ ವಂದಿಸಿದರು.