
ಕಲಬುರಗಿ,ಜು.20-ಕಲಬುರಗಿ ನಗರ ಮತ್ತು ಕಲಬುರಗಿ ಜಿಲ್ಲಾ ಪೆÇಲೀಸ ವತಿಯಿಂದ “ಬೇಡ ಬ್ರೋ ಮತ್ತು ರೈಸ್ ” ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಶಾಲೂ, ಪ್ರವೀಣ್ ನಾಯಕ್, ಎಸ್.ಪಿ.ಅಡ್ಡೂರು ಶ್ರೀನಿವಾಸಲು ಅವರು ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
30-06-2026 ರಂದು ರಾಜ್ಯಾದ್ಯಾಂತ ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರೋಧಿ ದಿನವನ್ನು ಆಚರಿಸಲಾಗಿದ್ದು ಈ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳು ಹಾಗೂ ಮಾನ್ಯ ಗೃಹ ಮಂತ್ರಿಗಳು “Operation RISE” ಕ್ಯಾಂಪನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಅದರನ್ವಯ ಮಾದಕ ವಸ್ತುಗಳ ಸೇವನೆ, ಸಾಗಣೆ ಹಾಗೂ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ “ಬೇಡ ಬೋ ” (No Bro) ” ಮತ್ತು “ರೈಸ್” (RISE-Refuse, Inform, Support and empower) ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗುತ್ತಿದೆ ಎಂದು ಎಸ್.ಪಿ.ಅಡ್ಡೂರು ಶ್ರೀನಿವಾಸಲು, ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ ಆರೋಗ್ಯ, ಕುಟುಂಬ ಸಂಬಂಧಗಳು, ವಿಧ್ಯಾರ್ಥಿಗಳ ಶೈಕ್ಷಣಿಕ ಸಾಧನೆ. ವೃತ್ತಿ ಜೀವನ ಹಾಗೂ ಆತ್ಮಹತ್ಯೆಯಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ. ಡ್ರಗ್ಸ್ ಸೇವನೆಯಿಂದ ಹಲವಾರು ಜನ ಸಾವನಪ್ಪುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾಜ್ಯಾದ್ಯಾಂತ ಜಾರಿಗೆ ತಂದಿರುವ “ನೋ ಬ್ರೋ” (No Bro)
ಮತ್ತು “ರೈಸ್” ಅಭಿಯಾನದ ಮೂಲಕ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
“ಬೇಡ ಬ್ರೋ” ಅಭಿಯಾನದ ಉದ್ದೇಶ
ರಾತ್ರಿ ನಿದ್ದೆ ಮಾಡದೆ ಓದುವದು, ಪ್ರೇಮ ವ್ಯಫಲ್ಯ, ಸ್ನೇಹಿತರ ಒತ್ತಡ ಸೇರಿದಂತೆ ವಿವಿಧ ಕಾರಣಗಳಿಂದ ಡ್ರಗ್ಸ್ ಸೇವನೆಗೆ ಮುಂದಾಗಬಾರದು ಎಂಬ ಕಾರಣಕ್ಕೆ ‘ಬೇಡ ಬ್ರೋ” ಅಭಿಯಾನದ ಮೂಲಕ ಜಾಗೃತಿ ನೀಡಲಾಗುತ್ತಿದೆ. ಏSP ಂಠಿಠಿ ಮೂಲಕ ಮಾಹಿತಿ ನೀಡುವುದು: ಗಾಂಜಾ, ಡ್ರಗ್ಸ್, ಮಾರಾಟ ಸಂಗ್ರಹ, ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ವಿವಿಧ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ
ಅನಾಮಧೇಯವಾಗಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ವಿವರದ ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಪಾಡಲಾಗುವುದು.
“ಆಪರೇಷನ ರೈಸ್ “(Operation Rise) ಕಾರ್ಯಕ್ರಮ
R-Refuse (ನಿರಾಕರಿಸಿ) ಮಾದಕ ವಸ್ತುಗಳಿಗೆ “ಬೇಡ ಬೋ” ಎಂದು ಹೇಳಿ. I-Inform (ಮಾಹಿತಿ) KSP App ಅಥವಾ QR Code ಮೂಲಕ, ಎಂಟಿ ಡ್ರಗ್ ಸಮಿತಿ ರಚನೆ :ಶಾಲಾ-ಕಾಲೇಜುಗಳಲ್ಲಿ ಪ್ರಾಂಶುಪಾಲರು, ದೈಹಿಕ ಶಿಕ್ಷಕರು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಸ್ಥಳೀಯ ಬೀಟ್ ಪೆÇಲೀಸ್ ಸಿಬ್ಬಂದಿ ಒಳಗೊಂಡ ಸಮಿತಿಯು ಪ್ರತಿನಿಧಿಗಳ ಸಭೆ ನಡೆಸಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಸೂಕ್ತ
ಕ್ರಮಕೈಗೊಳ್ಳಲಿದೆ.































