
ಕಲಬುರಗಿ: ಎಲೆಕ್ಟ್ರಿಕಲ್ ಆಟೋಗಳ ನೋಂದಣಿ ತಾತ್ಕಾಲಿಕ ತಡೆ ಹಾಗೂ ಅನಧಿಕೃತ ಬೈಕ್ ಟ್ಯಾಕ್ಸಿ,ಆಟೋಗಳ ಸಂಚಾರ ತಡೆಯುವಂತೆ ಆಗ್ರಹಿಸಿ ಇಂದು ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘ ಹಾಗೂ ವಿವಿಧ ಆಟೋ ಸಂಘ,ಸ್ಟ್ಯಾಂಡ್ಗಳ ವತಿಯಿಂದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಮಾಲಿ ಪಾಟೀಲ ,ಚಿದಾನಂದ ಬಾಣೆಕರ್,ಮೊಹಸೀನ್,ಜುಬೇರ್,ಪ್ರವೀಣರೆಡ್ಡಿ,ಆನಂದ,ಶ್ರೀಮಂತ,ಅನೀಲ ಚವ್ಹಾಣ,ಸಂಜುಕುಮಾರ,ಎಂಡಿ ಹುಸೇನ್ ಸೇರಿದಂತೆ ಹಲವರು ಪಾಲ್ಗೊಂಡರು.































