Home ಜಿಲ್ಲೆ ಕಲಬುರಗಿ ಸೊನ್ನ ಅರಿವು ಕೇಂದ್ರದಲ್ಲಿ ಹಿರಿಯರ ಅರೋಗ್ಯ ತಪಾಸಣಾ ಶಿಬಿರ

ಸೊನ್ನ ಅರಿವು ಕೇಂದ್ರದಲ್ಲಿ ಹಿರಿಯರ ಅರೋಗ್ಯ ತಪಾಸಣಾ ಶಿಬಿರ

ಜೇವರ್ಗಿ : ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಇಂದು ಅರಿವು ಕೇಂದ್ರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಅರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಕಾರ್ಯಕ್ರಮ ಜರುಗಿತು.
ಶಿಬಿರಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಮಂಟಾಳೆ, ಗ್ರಂಥಪಾಲಕ ಮಲ್ಲಿಕಾರ್ಜುನ ಬಿರಾದಾರ, ಟಾಟಾ ಕಲಿಕಾ ಟ್ರಸ್ಟ್ ಸಂಯೋಜಕ ಅಲ್ಲಾವುದ್ಧಿನ್,ಚಾಲನೆ ನೀಡಿದರು,

ಶಿಬಿರದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಮೈ ಕೈ ನೋವು, ಮೊಳಕಾಲು ನೋವು ಸೇರಿದಂತೆ ಅನೇಕ ರೋಗಗಳನ್ನು ಪರೀಕ್ಷಿಸಿ ಉಚಿತ ಔಷಧಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಡಾ, ಥಾಮಸ್, ಶ್ವೇತಾ,ಅಜರುದ್ಧಿನ್, ಪ್ರಿಯಾಂಕಾ,ಆಶಾ ಕಾರ್ಯಕರ್ತೆ ಲಕ್ಷ್ಮೀ ಜೇರಟಗಿ, ಸಾವಿತ್ರಿ ಕೋರವಾರ, ವಿಶಾಲ ನಂದರಗಿಮಠ ಸಂಗೀತಾ ನೆಲೋಗಿ, ಸುಧಾ ಗುತ್ತೇದಾರ,ಮಂಜುಳಾ ಬಜೇಂತ್ರಿ, ಯಲ್ಲಮ್ಮ ಮಂದೇವಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು