Home ಜಿಲ್ಲೆ ಬೆಂಗಳೂರು ಸುಗಮ ಸಂಗೀತ ಕಲಿಕಾ ಶಿಬಿರ

ಸುಗಮ ಸಂಗೀತ ಕಲಿಕಾ ಶಿಬಿರ

ಬೆಂಗಳೂರು, ಜೂ.೨೦-ವಿಶ್ವ ಸಂಗೀತ ದಿನದ ಪ್ರಯುಕ್ತ ಅನುರಾಗ್ಸ್ ಸಂಗೀತ ಗುರುಕುಲ, ಇವರಿಂದ ಸುಗಮ ಸಂಗೀತ ಕಲಿಕಾ ಶಿಬಿರ ಹಾಗೂ ಕನ್ನಡ ಗಜಲ್ ಗಾಯನ ಹಮ್ಮಿಕೊಳ್ಳಲಾಗಿದೆ.

ನಾಡಿನ ಹೆಸರಾಂತ ಹಿರಿಯ ಗಾಯಕಿ, ರತ್ನಮಾಲಾ ಪ್ರಕಾಶ್ ಅವರು ತಮ್ಮ ಗಾಯನದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ ಹಾಡಲು ಹೇಳಿಕೊಡುತ್ತಾರೆ. ಬೆಳಗ್ಗೆ ೧೦ ರಿಂದ ೪:೦೦ ವರೆಗೆ ಒಂದು ದಿನದ ಕಾರ್ಯಾಗಾರನಡೆಯಲಿದ್ದು ಆಸಕ್ತರು ನಿಮ್ಮ ಹೆಸರು ನೋಂದಣಿಗಾಗಿ ೯೭೪೩೭೫೨೨೨೩ ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವುದು.

ನಾಳೆ ಸಮಯ: ಬೆಳಗ್ಗೆ ೧೦.೦೦ ರಿಂದ ಸಂಜೆ ೪.೦೦ ಗಂಟೆವರೆಗೆ, ಡಾ. ಎಂ. ಚಿದಾನಂದ ಮೂರ್ತಿ ಸಭಾಂಗಣ, ವಿಜಯನಗರ ಮೆಟ್ರೋ ನಿಲ್ದಾಣದ ಹತ್ತಿರ, ಇಲ್ಲಿ ಈ ಶಿಬಿರ ನಡೆಯಲಿದೆ.