
ಬೆಂಗಳೂರು, ಜೂ. ೨೦- ಮೇಕೆದಾಟು ಯೋಜನೆಗಾಗಿ ಕೇವಲ ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿದರೆ ಸಾಲದು ತಮ್ಮ ಕೈಗೆ ಅಧಿಕಾರ ಬಂದಾಗ ಹೋರಾಟ ಮಾಡಿ ತೋರಿಸಬೇಕು ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಇವತ್ತು ಡಿಕೆ ಶಿವಕುಮಾರ್ ಅವರ ಕೈಗೆ ಅಧಿಕಾರ ಬಂದಿದೆ ಮೇಕೆದಾಟು ಯೋಜನೆಯನ್ನು ಮಾಡಿ ತೋರಿಸಬೇಕು. ಯಾಕೆಂದರೆ ಇವತ್ತು ತಮಿಳುನಾಡಿನಲ್ಲೂ ಕಾಂಗ್ರೆಸ್ ಬೆಂಬಲಿತ ಸರ್ಕಾರವಿದೆ ಎಂದರು.
ಎರಡು ಸರ್ಕಾರಗಳು ಕೂಡ ತಕ್ಷಣ ಮೇಕೆದಾಟು ಯೋಜನೆಯನ್ನು ಮಾಡಬೇಕು. ಅದಕ್ಕಾಗಿ ನಾನು ಡಿ.ಕೆ. ಶಿವಕುಮಾರ್ ಅವರಿಗೆ ಆಗ್ರಹ ಮಾಡ್ತೇನೆ. ರಾಜಕೀಯ ಬಿಟ್ಟು, ಎಲ್ಲ ಮೇಲಾಟಗಳನ್ನು ಬಿಟ್ಟು ಅಭಿವೃದ್ಧಿಯ ಕಡೆ ಗಮನ ಕೊಡಿ ಎಂದು ಅವರು ಒತ್ತಾಯಿಸಿದರು. ಮೇಕೆದಾಟು ಯೋಜನೆಯನ್ನು ಪೂರ್ಣ ಮಾಡುವ ಕಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಮನ ಕೊಡಬೇಕು ಎಂದು ಹೇಳಿದರು.



























