Home ಕ್ರೈಂ ಸುದ್ದಿಗಳು ಮನೆ ಮೇಲ್ಛಾವಣೆ ಕುಸಿದು ವೃದ್ಧೆ ಸಾವು

ಮನೆ ಮೇಲ್ಛಾವಣೆ ಕುಸಿದು ವೃದ್ಧೆ ಸಾವು

ವಿಜಯಪುರ, ಮೇ. 21:ಮನೆಯ ಮೇಲ್ಚಾವಣಿ ಕುಸಿದು ಮಹಿಳೆ ಜೀವಂತ ಸಮಾಧಿಯಾಗಿರುವ ದುರಂತ ಜಿಲ್ಲೆಯ ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನ ಬಳಿ ಗುರುವಾರ ನಸುಕಿನಲ್ಲಿ ನಡೆದಿದೆ.
ನಿಡಗುಂದಿ ನಿವಾಸಿ ಮಹಾದೇವಿ ವಾರದ (55) ಮೃತಪಟ್ಟ ಮಹಿಳೆ.
ಮೊನ್ನೆ ಸುರಿದ ಮಳೆಗೆ ನೆನೆದಿದ್ದ ಹಳೆಯ ಮನೆ ಮೇಲ್ಚಾವಣಿ ಕುಸಿದು ಈ ಅವಘಡ ಸಂಭವಿಸಿದೆ.
ನಸುಕಿನ ಜಾವ ಮನೆಯ ಮೇಲ್ಚಾವಣಿ ಕುಸಿದು ಮಹಾದೇವಿ ಜೀವಂತ ಸಮಾಧಿಯಾಗಿದ್ದಾರೆ.
ಮನೆಯ ಹೊರಗೆ ಮಲಗಿದ್ದ ಪತಿ ಶಿವಾನಂದ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ನಿಡಗುಂದಿ ಪೆÇಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾದೇವಿ ಶವ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಿಡಗುಂದಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.