
ವಾಷಿಂಗ್ಟನ್, ಮೇ.೧೨- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾಳೆಯಿಂದ ಇದೇ ೧೫ ರವರೆಗೆ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಟ್ರಂಪ್ ಭೇಟಿಯನ್ನು ದೃಢಪಡಿಸಿದೆ.
ಚೀನಾ ಭೇಟಿಯ ಸಮಯದಲ್ಲಿ ಡೊನಾಲ್ಟ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಇರಾನ್ ಮತ್ತು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳ ಕುರಿತು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದೆ.
ಬೀಜಿಂಗ್‌ನಲ್ಲಿ ನಡೆಯುವ ಉಭಯ ನಾಯಕರ ಸಭೆ “ಹೆಚ್ಚು ಸಾಂಕೇತಿಕ” ಮತ್ತು ಮಹತ್ವ ಪಡೆದುಕೊಂಡಿದೆ. ಮುಖ್ಯವಾಗಿ ವ್ಯಾಪಾರ ಉದ್ವಿಗ್ನತೆ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದೆ.
ಭೇಟಿಯ ಸಮಯದಲ್ಲಿ, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಾಯಕರ ನಡುವಿನ ಮಾತುಕತೆಯ ಸಮಯದಲ್ಲಿ ಸುಂಕಗಳು, ತೈವಾನ್, ಕೃತಕ ಬುದ್ಧಿಮತ್ತೆ ಮತ್ತು ನಿರ್ಣಾಯಕ ಖನಿಜಗಳಂತಹ ವಿಶಾಲ ಸಮಸ್ಯೆಗಳು ಸಹ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಚೀನಾಕ್ಕೆ ಅವರ ಮೊದಲ ಭೇಟಿಯಾಗಲಿದೆ. ಈ ಭೇಟಿಯನ್ನು ಮಾರ್ಚ್‌ನಲ್ಲಿ ನಿಗದಿಪಡಿಸಲಾಗಿತ್ತು ಆದರೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಮುಂದೂಡಲಾಗಿತ್ತು. ಇದೀಗ ಇದೇ ೧೨ ರಿಂದ ೧೫ ರ ತನಕ ಚೀನಾಗೆ ಭೇಟಿ ನೀಡುತ್ತಿದ್ದಾರೆ.
ಸುದ್ಧಿಗಾರರೊಂದಿಗೆ ಅಮೆರಿಕದ ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ ಪ್ರತಿಕ್ರಿಯಿಸಿ ಅಮೆರಿಕ ಅಧ್ಯಕ್ಷರ ಭೇಟಿ ಮಹತ್ವದ್ದಾಗಿದೆ.ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರೀ ದೇಶದ ಪರವಾಗಿ ಹೆಚ್ಚಿನ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಚೀನಾದೊಂದಿಗಿನ ಸಂಬಂಧ ಮರು ಸಮತೋಲನಗೊಳಿಸುವುದು ಮತ್ತು ಅಮೆರಿಕದ ಆರ್ಥಿಕ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು ಪರಸ್ಪರ ಮತ್ತು ನ್ಯಾಯಸಮ್ಮತತೆಗೆ ಆದ್ಯತೆ ನೀಡುವುದರ ಮೇಲೆ” ಈ ಭೇಟಿ ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಸ್ವಾಗತ ಸಮಾರಂಭ ಮತ್ತು ಚೀನಾ ಅಧ್ಯಕ್ಷ ಕ್ಸಿ ಅವರೊಂದಿಗಿನ ಸಭೆ ನಡೆಯಲಿದ್ದು, ಮಧ್ಯಾಹ್ನ ಸ್ವರ್ಗ ದೇವಾಲಯಕ್ಕೆ ಭೇಟಿ ಮತ್ತು ಸಂಜೆ ಸರ್ಕಾರಿ ಔತಣಕೂಟ ನಡೆಯಲಿದೆ. ಶುಕ್ರವಾರ, ಟ್ರಂಪ್ ವಾಷಿಂಗ್ಟನ್‌ಗೆ ಮರಳುವ ಮೊದಲು ಇಬ್ಬರೂ ನಾಯಕರು ಚಹಾ ಸಭೆ ಮತ್ತು ಮತ್ತೊಮ್ಮೆ ಔತಣ ಕೂಟ ಆಯೋಜಿಸಲಾಗಿದೆ ಎಂದು ಹೇಳೀದ್ದಾರೆ.
ಕ್ಸಿ ಜಿನ್‌ಪಿಂಗ್ ಮತ್ತು ಅವರ ಪತ್ನಿ ೨೦೨೬ ರ ನಂತರ ವಾಷಿಂಗ್ಟನ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದ ಅವರು ಅದಕ್ಕೂ ಮುನ್ನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಭೇಟಿ ಮಹತ್ವ ಪಡೆದುಕೊಂಡಿದೆ ಎಂದಿದ್ದಾರೆ.





















