ಬಾದಾಮಿ ಪಟ್ಟಣದ ಕೆಇಬಿ ಎದುರು ಕೆನರಾ ಬ್ಯಾಂಕ್ ಹತ್ತಿರ ಬಾದಾಮಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ನೂತನ ಕಾರ್ಯಾಲಯದ ಉದ್ಘಾಟನಾ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ತಾಲೂಕಾಧ್ಯಕ್ಷ ಹುಚ್ಚೇಶ ಹದ್ದನ್ನವರ, ಎಂ.ಎಸ್.ಹಿರೇಹಾಳ, ಬಸವರಾಜ ಅಮರಗೋಳ, ಪ್ರಕಾಶ ಕೋಟಿ, ಮಲ್ಲು ಹಡಪದ ಸೇರಿದಂತೆ ಇತರರು ಉಪಸ್ಥಿತರಿದ್ದರು.