Home ಜಿಲ್ಲೆ ಮೇ 14 ರಂದು ನೂತನ ಕಟ್ಟಡ ಉದ್ಘಾಟನೆ

ಮೇ 14 ರಂದು ನೂತನ ಕಟ್ಟಡ ಉದ್ಘಾಟನೆ

ಬಾದಾಮಿ, ಮೇ12: ಮೇ 14 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಶ್ರೀ ವೀರಪುಲಿಕೇಶಿ ಬ್ಯಾಂಕಿನ ಪ್ರಧಾನ ಕಛೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ತಿಳಿಸಿದರು.


ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು, ಹಾಲಕೆರೆ ಅನ್ನದಾನೇಶ್ವರಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಹಾವೇರಿ ಹುಕ್ಕೇರಿಮಠದ ಡಾ.ಸದಾಶಿವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೊಸ ಕಟ್ಟಡವನ್ನು, ಉದ್ಘಾಟಿಸುವರು. ಸಂಸ್ಥಾಪಕ ಅಧ್ಯಕ್ಷರ ಪುತ್ಥಳಿ ಅನಾವರಣವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಡುವರು. ಕಾರ್ಯಕ್ರಮವನ್ನು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಉದ್ಘಾಟಿಸುವರು. ಲಿಂ.ಸದಾಶಿವ ಮಹಾಸ್ವಾಮಿಗಳು ಭಾವಚಿತ್ರವನ್ನು ಡಾ.ಮುರುಗೇಶ ನಿರಾಣಿ, ಹಿಂದಿನ ಅಧ್ಯಕ್ಷರ ಭಾವಚಿತ್ರಗಳನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಅನಾವರಣ ಮಾಡುವರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ವಿಪ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ಅಜಯಕುಮಾರ ಸರನಾಯಕ, ಜಯಣ್ಣ ಮಮದಾಪೂರ ಸೇರಿದಂತೆ ಸಹಕಾರಿ ಸಂಘಗಳ ಅಧಿಕಾರಿಗಳು ಭಾವಹಿಸುವರು ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕರಾದ ಎ.ಸಿ.ಪಟ್ಟಣದ, ಡಿ.ಎಂ.ಪೈಲ್, ವಿ.ಕೆಬಾಗಲೆ, ಬಿ.ಎಂ.ಟೆಂಗಿನಕಾಯಿ, ಎಂ.ಎಸ್.ಹಿರೇಹಾಳ, ಚನ್ನಪ್ಪ ಪಟ್ಟಣದ, ಎಂ.ಎಸ್.ತೆಗ್ಗಿನಮನಿ, ವಿ.ಆರ್.ಪಾಟೀಲ, ಎಚ್.ಕೆ.ಬೆಳ್ಳಿಗುಂಡಿ, ಎಂ.ಆರ್.ತಳವಾರ, ಪ್ರಧಾನ ವ್ಯವಸ್ಥಾಪಕಿ ಎಂ.ಬಿ.ದೇಶನ್ನವರ ಉಪಸ್ಥಿತರಿದ್ದರು.