Home ಜಿಲ್ಲೆ ವಿಶ್ವ ರೆಡ್ ಕ್ರಾಸ್ ದಿನಾಚರಣೆ

ವಿಶ್ವ ರೆಡ್ ಕ್ರಾಸ್ ದಿನಾಚರಣೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ.11: ವೀ.ವಿ.ಸಂಘಧ, ವೀರಶೈವ ಮಹಾವಿದ್ಯಾಲಯದಲ್ಲಿ, ಯೂತ್ ರೆಡ್ ಕ್ರಾಸ್ ಘಟಕದಿಂದ ವಿಶ್ವ ರೆಡ್ ಕ್ರಾಸ್  ದಿನಾಚರಣೆಯನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಜಿ ಮಲ್ಲನಗೌಡ ಇವರು ವಹಿಸಿ ಮಾತನಾಡುತ್ತಾ ರೆಡ್ ಕ್ರಾಸ್  ಕೇವಲ ಒಂದು ಸಂಸ್ಥೆಯಲ್ಲ. ಅದು ಮಾನವೀಯತೆಯ ಸಂಕೇತ. ಯುದ್ದದ ಸಮಯದಲ್ಲಿ ಗಾಯಗೊಂಡ ಸೈನಿಕರಿಗೆ ನೆರವಾಗಲು ಆರಂಭವಾದ ಈ ಚಳುವಳಿ, ಇಂದು ಪ್ರಕೃತಿ ವಿಕೋಪ, ಅಪಘಾತ ಅಥವಾ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದೆ, ಮತ್ತು  ವಿದ್ಯಾರ್ಥಿಗಳು ರೆಡ್ ಕ್ರಾಸ್ ಸ್ವಯಂ ಸೇವಕರಾಗಿ ಸೇವಾ ಮನೋಭಾವನೆಯನ್ನು ಬೆಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು.

ಈ ಕಾರ್ಯಕ್ರಮದ ವೇದಿಕೆಯ ಮೇಲೆ ಡಾ ರಾಜಶ್ರೀ ಪಾಟೀಲ್ ಮುಖ್ಯಸ್ಥರು ಅರ್ಥಶಾಸ್ತ್ರ ವಿಭಾಗ, ರಾಧಸ್ವಾಮಿ, ಮುಖ್ಯಸ್ಥರು, ರಾಜ್ಯಶಾಸ್ರ್ತ ವಿಭಾಗ, ಡಾ.ಕವಿತ.ಎಂ.ಸಂಗನಗೌಡ, ದೈಹಿಕ ಶಿಕ್ಷಣ ನಿರ್ದೇಶಕರು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. , ಡಾ.ಶರಣಬಸವ, ಮುಖ್ಯಸ್ಥರು, ಸಸ್ಯಶಾಸ್ರ್ತ ವಿಭಾಗ ಇವರು ಪ್ರ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು. ರೆಡ್ ಕ್ರಾಸ್ ಘಟಕದ ಸಂಚಾಲರಾದ ಡಾ.ಶರಣಗೌಡ ಇವರು ಅತಿಥಿಗಳನ್ನು ಸ್ವಾಗತಿಸಿದರು. ಡಾ.ವೈ.ಭ್ರಮರಾಂಭ, ಉಪನ್ಯಾಸಕರು ಕನ್ನಡ ವಿಭಾಗ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಅನುರಾಧ.ಕೆ, ಉಪನ್ಯಾಸಕರು ಜೈವಿಕ ತಂತ್ರಜ್ಞಾನ ವಿಭಾಗ ಇವರು ಕಾರ್ಯಕ್ರಮವನ್ನು ವಂದಿಸಿದರು.