
ಬಾದಾಮಿ, ಮೇ11: ತಾಲೂಕಿನ ಚೊಳಚಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ 2026-27 ನೇ ಸಾಲಿಗೆ ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿಗೆ ರೂ.10 ಸಾವಿರ ಠೇವಣಿ ಇಡಲಾಗುವುದು. ಅದನ್ನು ಆರಾಧ್ಯ ಗ್ರೂಪ್ ವತಿಯಿಂದ ನೀಡಲಾಗುವುದು ಶಾಲೆಯ ಮುಖ್ಯಶಿಕ್ಷಕಿ ಎಸ್.ಎಸ್.ಕಲಾದಗಿ ತಿಳಿಸಿದರು.
ಅವರು ತಾಲೂಕಿನ ಚೊಳಚಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ದಾಖಲಾತಿ ಆಂದೋಲನವನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿ ಮಗುವಿಗೆ ಠೇವಣಿ ಹಣ ಮತ್ತು ಮಕ್ಕಳ ಕಲಿಕೆಗೆ 10 ಗಣಕಯಂತ್ರಗಳನ್ನು ಶಾಲೆಗೆ ದೇಣಿಗೆ ನೀಡಲಾಗುವುದು ಎಂದು ಆರಾದ್ಯ ಗ್ರೂಪನ ಪದಾಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಹಶಿಕ್ಷಕರು, ಊರಿನ ಹಿರಿಯರು ಉಪಸ್ಥಿತರಿದ್ದರು.





















