
ತಾಳಿಕೋಟೆ :ಮೇ.10: ಪಟ್ಟಣದ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘದ(ರಿ) ವತಿಯಿಂದ ಶ್ರೀ ಹುಲಿಗೆಮ್ಮದೇವಿ ಮತ್ತು ಶ್ರೀ ಗದ್ಯಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮೇ 11 ಮತ್ತು 12 ರಂದು ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಮೇ 11 ರಂದು ಮಧ್ಯಾಹ್ನ 1 ಘಂಟೆಗೆ ಅನ್ನ ಪ್ರಸಾದ ಕಾರ್ಯಕ್ರಮ ಜರಗುವುದು. ಸಾಯಂಕಾಲ 6 ಘಂಟೆಗೆ ಧರ್ಮಸಭೆ ಹಾಗೂ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಪೂಜ್ಯ ಶ್ರೀ ಸಿದ್ದಲಿಂಗ ದೇವರು ಹಾಗೂ ಕೊಡಕಲ್ ದುರದುಂಡೇಶ್ವರ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸುವರು.
ಉದ್ಘಾಟಕರಾಗಿ ಕೆಎಸ್‍ಡಿಎಲ್ ಅಧ್ಯಕ್ಷ, ಶಾಸಕರಾದ ಸಿ.ಎಸ್.ನಾಡಗೌಡ(ಅಪ್ಪಾಜಿ), ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಸುರಪುರ ಮತಕ್ಷೇತ್ರ ಮಾಜಿ ಶಾಸಕ ನರಸಿಂಹ ನಾಯಕ (ರಾಜುಗೌಡ), ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಕೆಪಿಸಿಸಿ ಸದಸ್ಯ ಪ್ರಭುಗೌಡ ಲಿಂಗದಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಬಿಜೆಪಿ ಯುವ ಮುಖಂಡ ಹಣಮಂತ ನಾಯಕ ಆಗಮಿಸುವರು,
ಮುಖ್ಯ ಅತಿಥಿಗಳಾಗಿ ಮುಖಂಡರಾದ ಬಸನಗೌಡ ಪಾಟೀಲ ಯಡಿಯಾಪೂರ, ಎಸ್.ಬಿ. ಕಟ್ಟಿಮನಿ, ಮಾಸೂಮಸಾಬ ಕೆಂಭಾವಿ, ಮುತ್ತಪ್ಪ ಚಮಲಾಪೂರ, ಪ್ರಭುಗೌಡ ಮದರಕಲ್ಲ,, ಸಂಜಯ ಹಂಚಾಟೆ, ವಾಸುದೇವ ಹೆಬಸೂರ, ವೀರೇಶ ಬಾಗೇವಾಡಿ, ಶರಣುದಣಿ ದೇಶಮುಖ, ನಾಗೇಶ ಕಟ್ಟಿಮನಿ, ಶಿವಶಂಕರ ಹಿರೇಮಠ, ಮಡುಸಾಹುಕಾರ ಬಿರಾದಾರ, ಕಾಶಿನಾಥ ಮುರಾಳ, ವಿಜಯಸಿಂಗ್ ಹಜೇರಿ, ಪ್ರಕಾಶ ಹಜೇರಿ, ಸಂಗನಗೌಡ ಅಸ್ಕಿ, ಹನುಮಂತ ವಡ್ಡರ ಕಲಿಕೇರಿ, ಧರ್ಮ ಯುದ್ಧ ಪತ್ರಿಕೆ ಸಂಪಾದಕ ಪುಂಡಲೀಕ ಮುರಾಳ ಅವರನ್ನು ಒಳಗೊಂಡು ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಹಾಗೂ ಭೋವಿ ವಡ್ಡರ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ. ಅಂದೇ ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
12 ರಂದು ಭವ್ಯ ರಥೋತ್ಸವ ಮತ್ತು ಮೆರವಣಿಗೆ
ಮೇ 12, 2026ರ ಮಂಗಳವಾರ ಮುಂಜಾನೆ 11 ಗಂಟೆಯಿಂದ ಶ್ರೀ ದೇವಿಯ ಭವ್ಯ ಮೆರವಣಿಗೆ ಆರಂಭವಾಗಲಿದೆ. ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಹೊರಡುವ ದೇವಿಯ ರಥೋತ್ಸವವು ವಾದ್ಯ ವೈಭವದೊಂದಿಗೆ ಕತ್ರಿ ಬಜಾರ, ಪಂಚ್ ಶಹೀದ ದರ್ಗಾ ಮಾರ್ಗವಾಗಿ ಸಾಗಿ ಭೋವಿ ಸಮಾಜದ ಶ್ರೀ ದೇವಿಯ ಗರ್ಭಗುಡಿಯನ್ನು ಪ್ರವೇಶಿಸಲಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಗೌರವಾಧ್ಯಕ್ಷ ದ್ಯಾಪಪ್ಪ ಎಚ್.ಕೂಚಬಾಳ, ಅಧ್ಯಕ್ಷ ಶ್ರೀನಿವಾಸ ಕುಲಕರ್ಣಿ ಪ್ರಕಟನೆ ಮೂಲಕ ವಿನಂತಿಸಿಕೊಂಡಿದ್ದಾರೆ.





















