Home ಜಿಲ್ಲೆ ದಯಾನಂದ ಪುರಿ ಶ್ರೀಗಳ ಪಟ್ಟಾಧಿಕಾರ

ದಯಾನಂದ ಪುರಿ ಶ್ರೀಗಳ ಪಟ್ಟಾಧಿಕಾರ


ಬಾದಾಮಿ,ಮೇ.೧೦:
ಸಮಾಜದ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದಾರೆ ಎಂದು ತೋರಿಸಲ್ಲು ದೊಡ್ಡ ಪ್ರಯತ್ನ ನಡೆದಿದೆ. ಧರ್ಮ ಜಾತಿಯ ರಾಜಕೀಯ ಮಾಡಲು ನಾವು ತಯಾರಿದ್ದೇವೆ ಎಂದು ರಾಜ್ಯಕ್ಕೆ ದೇವಾಂಗ ಸಮಾಜ ತೋರುತ್ತಿದೆ, ದೇವರಿಗೆ ಉಡುಪು ಕೊಟ್ಟ ದೇವಾಂಗ ಸಮಾಜ, ಸರಕಾರವನ್ನು ಬದಲಿಸುವ ಶಕ್ತಿ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.


ಅವರು ಶನಿವಾರ ಸಮೀಪದ ಬನಶಂಕರಿ ಯಲ್ಲಿ ರಾಜ್ಯ ದೇವಾಂಗ(ನೇಕಾರ) ಸಮಾಜದ ಜಾಗೃತಿ ಸಮಾವೇಶ, ದಯಾನಂದ ಪುರಿ ಶ್ರೀಗಳ ೩೬ ನೇ ಪಟ್ಟಾಧಿಕಾರ, ತುಲಾಭಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿಮ್ಮ ಸಮಾಜದ ವಿವಿದ ಬೇಡಿಕೆಗಳನ್ನು ಸರಕಾರದ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಬೇಡಿಕೆ ಈಡೇರಿಕೆಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.


ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನ್ನವರ ಮಾತನಾಡಿ ಇಂದು ಧರ್ಮದ ಹೆಸರಲ್ಲಿ ನಿಮ್ಮನ್ನು ಬಲಿ ಕೊಡುವ ಕೆಲಸ ನಡೆದಿದೆ, ಹಳೆಯ ಸಂಪ್ರದಾಯ, ಮೂಢನಂಬಿಕೆಯಿAದ ದೂರ ಇರಿ, ಯಾವುದೇ ಆಮಿ?Àಗಳಿಗೆ ಒಳಗಾಗದೆ, ನಿಮ್ಮ ಮತ ಚಲಾವಣೆ ಮಾಡಿರಿ. ಸಮಾಜ ಸಂಘಟಿಸುವ ಕೆಲಸ ಮಾಡಿದ್ದು ಒಳೆಯದು ಎಂದು ಹೇಳಿದರು.


ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಾಮನಿರ್ದೇಶಕ ಸದಸ್ಯ ರಾಹುಲ ಜಾರಕಿಹೊಳಿ ಮಾತನಾಡಿದರು. ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ರವೀಂದ್ರ ಕಲಬುರಗಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡ ಎಂ.ಬಿ.ಹAಗರಗಿ, ಸಮಾಜದ ಮುಖಂಡರಾದ ಗೋ ತಿಪ್ಪೇಶ್, ಬಿ.ಜೆ ಗಣೇಶ್, ಪಿ. ಆರ್. ಗಿರಿಯಪ್ಪ, ಮುಖಂಡರಾದ ಸಿ.ಎಲ್.ಧನಪಾಲ್, ಟಿ.ರಾಜೇಶ, ಎಚ್.ಪರಮೇಶ್ವರಪ್ಪ, ಕೆ.ಸಿ.ತಿಮ್ಮಶೆಟ್ಟಿ, ಸಂಕಣ್ಣ ಕರಡಿಗುಡ್ಡ, ಟಿ.ಆರ್.ಉಮಾಪತಿ, ಚುಡಾಮನಿ ಕೇಶವಮೂರ್ತಿ, ಕುಮಾರ ಶೇಬಿನಕಟ್ಟಿ, ಮಹೇಶ ಶೇಬಿನಕಟ್ಟಿ, ಗವಿರಂಗಯ್ಯ, ಶ್ರೀಧರ ದೇವಾಂಗ, ಸತೀಶ ಸಪ್ಪರದ, ಭಾರತಿ ರಮೇಶ, ಉಮೇಶ ಕಂದಗಲ್, ದಿನೇಶ ಗಿಡ್ನಂದಿ, ಆರ್.ಜೆ.ರಾಮದುರ್ಗ, ರವಿ ಬಳಿಗೇರ, ಬಸವರಾಜ ಕುದರಿ, ಸತೀಶ ಸಪ್ಪರದ, ಹೇಮಾದ್ರೆಪ್ಪ ಕೊಪ್ಪಳ, ಬಸವರಾಜ ವಡ್ಡೊಡಗಿ, ಟಿ.ಎಂ.ಜಲೇAದ್ರ, ನಾಗಪ್ಪ ಭಾವಿಕಟ್ಟಿ ಸೇರಿದಂತೆ ವಿವಿದ ಜಿಲ್ಲೆಗಳಿಂದ ಆಗಮಿಸಿದ ನೇಕಾರ ಸಮುದಾಯದ ಮುಖಂಡರು ಹಾಜರಿದ್ದರು.


ಮಹಿಳೆಯರಿಂದ ಕುಂಭ ಮೆರವಣಿಗೆ:ವೇದಿಕೆ ಕಾರ್ಯಕ್ರಮದ ಮುನ್ನ ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದಿಂದ ಮುಖ್ಯರಸ್ತೆಯ ಮೂಲಕ ಅಂಭೇಡ್ಕರ ಸರ್ಕಲ್ ವರೆಗೆ ವಿವಿದ ಸಂಗೀತ ವಾದ್ಯಗಳ ಮೂಲಕ ಸಹಸ್ರಾರು ಮಹಿಳೆಯರಿಂದ ಕುಂಭ ಮೆರವಣಿಗೆ ಮತ್ತು ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳ ಸಾರೋಟಗಿಯಲ್ಲಿ ಮೆರವಣಿಗೆಯು ಬಹಳ ವಿಜೃಂಭನೆಯಿAದ ಜರುಗಿತು. ರಸ್ತೆಯಲ್ಲಿ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಮೆರವಣಿಗೆಯಲ್ಲಿ ನೇಕಾರ ಸಮಾಜದ ಮುಖಂಡರು, ಮಹಿಳಯರು ಭಾಗವಹಿಸಿದ್ದರು.
ರವೀಂದ್ರ ಕಲಬುರ್ಗಿ ನೇತೃತ್ವದಲ್ಲಿ ಯಶಸ್ವಿಯಾದ ಜಾಗೃತಿ ಸಮಾವೇಶ: ರಾಜ್ಯ ನೇಕಾರ ಸಮಾಜದ ಜಾಗೃತಿ ಸಮಾವೇಶದ ಅಧ್ಯಕ್ಷ ರವೀಂದ್ರ ಕಲಬುರ್ಗಿ ನೇತೃತ್ವದಲ್ಲಿ ಶುಕ್ರವಾರ ಮತ್ತು ಶನಿವಾರ ಸಮಾವೇಶ ಅತ್ಯಂತ ಯಶಸ್ವಿಯಾಯಿತು.