
ಸಂಜೆವಾಣಿ ನ್ಯೂಸ್
ಮೈಸೂರು: ಮೇ.10:– ಪೆÇಲೀಸರಲ್ಲಿ ಏಕಾಗ್ರತೆ ಹೆಚ್ಚಿಸಲು ಮತ್ತು ಸಾರ್ವಜನಿಕರೊಂದಿಗೆ ಮತ್ತಷ್ಟು ಸಂಯಮದಿಂದ ವರ್ತಿಸಲು ಯೋಗ ರಾಮಬಾಣ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಮೈಸೂರು ಜಿಲ್ಲಾ ಪೆÇಲೀಸರಿಗಾಗಿ ಜ್ಯೋತಿನಗರದಲ್ಲಿರುವ ಡಿಎಆರ್ ಮೈದಾನದ ಆವರಣದಲ್ಲಿ ಇಲಾಖೆ ವತಿಯಿಂದ ಏರ್ಪಡಿಸಿದ್ದ 5 ದಿನಗಳ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪೆÇಲೀಸರ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸಮಾಜದ ಆರೋಗ್ಯ ಚೆನ್ನಾಗಿರಲು ಸಾಧ್ಯ. ಹೀಗಾಗಿ ನೀವುಗಳು ಯೋಗದ ಜತೆಗೆ ಪ್ರತೀ ದಿನ ಕ್ರೀಡಾ ಚಟುವಟಕೆಗಳಲ್ಲಿ ಬಾಗವಹಿಸಬೇಕು. ಈ ಮೂಲಕ ನೀವುಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು. ಇದರಿಂದ ಇಲಾಖೆಗೂ, ತಮಗೂ ಒಳಿತಾಗಲಿದೆ ಎಂದರು.
ಪೆÇಲೀಸರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುತ್ತಾರೆ. ಈ ವೇಳೆ ನಮ್ಮ ಪೆÇಲೀಸ್ ಸಿಬ್ಬಂದಿ ಎಷ್ಟು ಒತ್ತಡದಲ್ಲಿರುತ್ತಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಅಂತಹ ಒತ್ತಡದ ವಾತಾವರಣವನ್ನು ಯೋಗಾಭ್ಯಾಸ ತಿಳಿಗೊಳಿಸುತ್ತದೆ ಎಂದರು.
ಅಂತರಾಷ್ಟ್ರೀಯ ಮಟ್ಟದ ಯೋಗ ಗುರು ಡಾ.ಭಾಗೀರಥಿ 400 ಮಂದಿ ಜಿಲ್ಲಾ ಪೆÇಲೀಸರಿಗೆ ಪ್ರತಿ ದಿನ ಬೆಳಗ್ಗೆ ಯೋಗ ತರಬೇತಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಪೆÇಲೀಸರು ಸೂರ್ಯ ನಮಸ್ಕಾರ, ಸುಖಾಸನ, ತಾಡಾಸನ, ಭುಜಂಗಾಸನ ಮತ್ತು ವಜ್ರಾಸನ ಸೇರಿದಂತೆ ವಿವಿಧ ಆಸನಗಳ ತರಬೇತಿ ಪಡೆದುಕೊಂಡ ಜತೆಗೆ ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಕೆಲಸದ ಒತ್ತಡವನ್ನು ಹೇಗೆ ನಿಯಂತ್ರಿಸುವುದು ಎಂಬ ಬಗ್ಗೆ ತಿಳಿಸಲಾಯಿತು. ಎಸ್ಪಿ ಮಲ್ಲಿಕಾಜುನ ಬಾಲದಂಡಿ ಅವರು ಕೂಡ ಐದು ದಿನವೂ ಯೋಗ ಶಿಭಿರದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಸಮಾರೋಪ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ್, ಸಿ.ಮಲ್ಲಿಕ್, ಡಿಎಆರ್ ಡಿವೈಎಸ್ಪಿ ವೀರಣ್ಣ ಮತ್ತಿತರರು ಪಾಲ್ಗೊಂಡಿದ್ದರು.
























