Home ಜಿಲ್ಲೆ ತಾಂತ್ರಿಕ ತೊಂದರೆ: ಕೆಲಸವಿಲ್ಲದೆ ವಾಪಸಾದ ಕಾರ್ಮಿಕರು

ತಾಂತ್ರಿಕ ತೊಂದರೆ: ಕೆಲಸವಿಲ್ಲದೆ ವಾಪಸಾದ ಕಾರ್ಮಿಕರು

ಲಕ್ಷ್ಮೇಶ್ವರ,ಮೇ9: ತಾಲೂಕಿನ ಸುರಣಗಿ ಗ್ರಾಮ ಪಂಚಾಯಿತಿಯಲ್ಲಿ ವಿಬಿಜಿ ರಾಮ್ ಜಿ (ನರೇಗಾ) ಕಾಮಗಾರಿ ಸಂಬಂಧ ತಾಂತ್ರಿಕ ತೊಂದರೆಯಿಂದಾಗಿ ಕೆಲಸಕ್ಕೆ ತೆರಳಿದ್ದೆ ನೂರಾರು ಕಾರ್ಮಿಕರು ಕೆಲಸದಿಂದ ವಂಚಿತರಾಗಿ ಮರಳಿ ಬಂದ ಘಟನೆ ಜರುಗಿದೆ.


ಘಟನೆ ವಿವರಃ ಸುರಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಹೊಂದಿರುವ ನೂರಾರು ಕಾರ್ಮಿಕರು ಕೆಲಸಕ್ಕೆ ತೆರಳಿದ್ದರು ಆದರೆ ಈಗಿನ ನಿಯಮಾವಳಿಯಂತೆ ತಂತ್ರಾಂಶದ ಮೂಲಕ ಮುಖ ಚರ್ಯೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಮಿಸ್ ಮ್ಯಾಚ್ ಎಂದು ಬರುತ್ತಿದ್ದಂತೆ ಕೂಲಿ ಕಾರ್ಮಿಕರ ಸಹನೆಯ ಕಟ್ಟೆ ಒಡೆಯಿತು.


ಕೆಲಸಕ್ಕೆ ಬಂದಿದ್ದ ನೂರಾರು ಕಾರ್ಮಿಕರಲ್ಲಿ ಕೆಲವರಿಗೆ ಕೆಲಸ ಸಿಕ್ಕರೆ ಇನ್ನು ಕೆಲವರಿಗೆ ಸಿಗಲಿಲ್ಲ ಇದರಿಂದ ರೋಸಿ ಹೋದ ಮಹಿಳಾ ಕೂಲಿ ಕಾರ್ಮಿಕರು ಎಲ್ಲವನ್ನು ಸರಿಪಡಿಸಿಕೊಂಡು ಕೆಲಸವನ್ನು ಆರಂಭಿಸಿ ಒಬ್ಬರಿಗೆ ಕೆಲಸ ಕೊಟ್ಟು ಇನ್ನೊಬ್ಬರಿಗೆ ಕೊಡುವುದಿಲ್ಲ ಎಂದರೆ ಇದು ಯಾವ ನ್ಯಾಯ ಎಲ್ಲವನ್ನು ಸ್ಥಗಿತಗೊಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಆಗ ಪಂಚಾಯತಿ ಸಿಬ್ಬಂದಿ ತಾಂತ್ರಿಕ ದೋಷವನ್ನು ಸರಿಪಡಿಸಿಕೊಂಡು ಕೆಲಸ ಆರಂಭಿಸುವುದಾಗಿ ಹೇಳಿದ ನಂತರ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕೂಲಿ ರಹಿತರಾಗಿ ಮರಳಿದರು.


ಈ ಕುರಿತು ಪಿಡಿಒ ಗೌರಮ್ಮ ರೋಣ ದ ಪ್ರತಿಕ್ರಿಯೆ ನೀಡಿ ಕೃಷಿಕೂಲಿ ಕಾರ್ಮಿಕರ ಇ_ ಕೆವೈಸಿ ಸಮರ್ಪಕವಾಗಿದ್ದು ಇದನ್ನು ಗ್ರಾಮ ಪಂಚಾಯಿತಿಯಲ್ಲಿ ಸರಿಪಡಿಸಲಾಗಿದೆ ಆದರೆ ಈಗ ಹೊಸ ತಂತ್ರಾಂಶವನ್ನು ಬಳಸುತ್ತಿರುವುದರಿಂದ ದೋಷ ಕಂಡುಬಂದಿದ್ದು ಅದನ್ನು ಸರಿಪಡಿಸಿ ಕೆಲಸ ಆರಂಭಿಸುವುದಾಗಿ ಹೇಳಿದ್ದಾರೆ.


ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ್ ಸುರಣಗಿ ಕಳೆದ ವರ್ಷವೂ ಮಳೆಗಾಲದ ಮುಂದೆ ಕೆಲಸ ಆರಂಭಿಸಿ 20 ದಿನ ಕೆಲಸ ನಿರ್ವಹಿಸಿದವರಿಗೆ ಕೇವಲ 4 ದಿನಗಳ ಕೂಲಿ ನೀಡಿ ತಾಂತ್ರಿಕ ದೋಷದಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಯಿತು. ಈಗ ಕೃಷಿಕೂಲಿ ಕಾರ್ಮಿಕರು ಸಮರ್ಪಕವಾಗಿ ಕೆಲಸ ನಿರ್ವಹಿಸಲು ತಂತ್ರಾಂಶ ಅಡ್ಡ ಬಂದಿರುವುದರಿಂದ ಹಿರಿಯ ಅಧಿಕಾರಿಗಳು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.