Home ಸುದ್ದಿ ರಾಷ್ಟ್ರೀಯ ಸುವೇಂದು ಆಪ್ತನ ಹತ್ಯೆ: ಬಿಜೆಪಿ ಆಕ್ರೋಶ-ಭಾರೀ ಪ್ರತಿಭಟನೆ

ಸುವೇಂದು ಆಪ್ತನ ಹತ್ಯೆ: ಬಿಜೆಪಿ ಆಕ್ರೋಶ-ಭಾರೀ ಪ್ರತಿಭಟನೆ

ಕೋಲ್ಕತ್ತಾ,ಮೇ.7:– ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದ್ದು ಬಿಜೆಪಿ-ಟಿಎಂಸಿ ನಡುವೆ ಸಂಘರ್ಷ ತಾರಕಕ್ಕೇರಿದೆ. ಈ ನಡುವೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಸಹಾಯಕ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದು ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುವಂತಾಗಿದೆ
ಚಂದ್ರನಾಥ್ ರಥ್ ಹತ್ಯೆ ಖಂಡಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪಶ್ಚಿಮ ಮೆದಿನಾಪುರದ ಭದುತಲಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಮತ್ತು ಈ ನಡುವೆ ರಸ್ತೆಯಲ್ಲಿ ಟಯರ್‍ಗೆ ಬೆಂಕಿ ಹಚ್ಚಿ ತಮ್ಮ ಕೋಪ ಮತ್ತು ಅಸಹನೆ ಹೊರಹಾಕಿದ್ದಾರೆ.


ರಾಜ್ಯದ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಚಂದ್ರನಾಥ್ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ 15 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ರಾಜ್ಯದಲ್ಲಿ ಆಡಳಿತಕ್ಕೆ ರಾಜ್ಯದ ಜನರು ಅಂತ್ಯ ಹಾಡಿ ಬಿಜೆಪಿ ಸರ್ಕಾರವನ್ನು ಮೊದಲ ಬಾರಿಗೆ ಅಧಿಕಾರಕ್ಕೆ ತಂದಿದ್ದಾರೆ, ಸರ್ಕಾರ ರಚನೆಗೆ ಮುನ್ನವೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯ ಆಪ್ತ ಸಹಾಯಕನನ್ನು ಹತ್ಯೆ ಮಾಡಲಾಗಿದೆ.
ಮರಣೋತ್ತರ ಪರೀಕ್ಷೆಗೆ ರವಾನೆ: ನಿನ್ನೆ ರಾತ್ರಿ ದುಷ್ಕರ್ಮಿಗಳ ಗುಂಡೇಟಿಗೆ ಹತ್ಯೆಯಾದ ಚಂದ್ರನಾಥ್ ರಥ್ ಅವರ ಮೃತದೇಹವನ್ನು ಬರಾಸತ್ ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ


ಈ ಕುರಿತು ಪ್ರತಿಕ್ರಿಯೆ ನಡೆಸಿರುವ ವಕೀಲ ಸೋಮರಾಜ್ ಬಂಡೋಪಾಧ್ಯಾಯ ಎರಡು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆಯ ನಡೆಯುವ ಸಾದ್ಯತೆ ಇದೆ, ಚಂದ್ರನಾಥ್ ದೇಹಕ್ಕೆ 6 ಗಂಡುಗಳು ತಗುಲು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಉತ್ತರ 24 ಪರಗಣದಲ್ಲಿ ನಡೆದ ಭೀಕರ, ಪಾಯಿಂಟ್-ಬ್ಲಾಂಕ್ ದಾಳಿಯಲ್ಲಿ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಘಟನೆ ಹಿಂದಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದಿದ್ಧಾರೆ.


ಸ್ಥಳಕ್ಕ ಭೇಟಿ ಪರಿಶೀಲನೆ: ಈ ನಡುವೆ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ನಿನ್ನೆ ರಾತ್ರಿ ಗುಂಡಿಕ್ಕಿ ಕೊಂದ ಸ್ಥಳಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಗಡು ಭದ್ರತಾ ಪಡೆ- ಬಿಎಸ್‍ಎಫ್ ಪೆÇಲೀಸ್ ಮಹಾನಿರ್ದೇಶಕ ಪ್ರವೀಣ್ ಕುಮಾರ್ ಪರಿಶೀಲನೆ ನಡೆಸಿದ್ದು ಘಟನೆ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.