Home ಸುದ್ದಿ ರಾಷ್ಟ್ರೀಯ ಉಮ್ಮತ್ತಿ ಹೂವಿನ ಬೆಳೆ ಸಾರು ಸೇವಿಸಿ ಕುಟುಂಬದ ನಾಲ್ವರು ಅಸ್ವಸ್ಥ

ಉಮ್ಮತ್ತಿ ಹೂವಿನ ಬೆಳೆ ಸಾರು ಸೇವಿಸಿ ಕುಟುಂಬದ ನಾಲ್ವರು ಅಸ್ವಸ್ಥ

ಕಾಕಿನಾಡ,ಮೇ.6-ಸಾಮಾಜಿಕ ಮಾಧ್ಯಮದಲ್ಲಿ ಬರುವ ಎಲ್ಲವನ್ನೂ ನಂಬಿ ಅದನ್ನು ಅನುಕರಿಸುವುದು ಜೀವಕ್ಕೆ ಮಾರಕವಾಗಬಹುದು ಎನ್ನುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಎರ್ಲಂಪಲೆಮ್ ನಡೆದಿದೆ


ಸ್ಥಳೀಯರ ಪ್ರಕಾರ, ಒಂದು ಕುಟುಂಬದ ನಾಲ್ವರು ಸದಸ್ಯರು ಇನ್‍ಸ್ಟಾಗ್ರಾಮ್‍ನಲ್ಲಿ ಅಡುಗೆ ಮಾಡುವ ವೀಡಿಯೊವನ್ನು ವೀಕ್ಷಿಸಿದ್ದರು. ಅದರಲ್ಲಿ, ಬೆಳೆ ಸಾರಿನಲ್ಲಿ ಉಮ್ಮತಿಯ ಹೂವುಗಳನ್ನು ಹಾಕಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತೋರಿಸಲಾಗಿದೆ. ಅದನ್ನು ನಂಬಿದ ಕುಟುಂಬ ಸದಸ್ಯರು ತಮ್ಮ ಅಂಗಳದಿಂದ ಉಮ್ಮತಿಯ ಹೂವುಗಳನ್ನು ಆರಿಸಿ, ತಂದು ಬೆಳೆ ಸಾರಿನಲ್ಲಿ ಬೇಯಿಸಿ ತಿಂದಿದ್ದು.
ಖಾದ್ಯವನ್ನು ತಿಂದ ಕೂಡಲೇ ಇಡೀ ಕುಟುಂಬ ತೀವ್ರ ಅಸ್ವಸ್ಥಗೊಂಡ ವಾಕರಿಕೆ , ತಲೆ ತಿರುಗುವಿಕೆ ಉಂಟಾಗಿ ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಅರಿತ ಸ್ಥಳೀಯರು ತಕ್ಷಣ ಅವರನ್ನು ಕಾಕಿನಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಸ್ವಸ್ಥರ ಹೆಸರುಗಳು ವೀರಲಕ್ಷ್ಮಿ, ಗಂಗಾಭವಾನಿ, ಜಯಲಕ್ಷ್ಮಿ ಮತ್ತು ವೀರಬ್ಬುಲು ಎನ್ನಲಾಗಿದೆ.


ವೈದ್ಯರ ಎಚ್ಚರಿಕೆ
ಉಮ್ಮತಿಯ ವಿಷಪೂರಿತ ಹೂವುಗಳನ್ನು ಅಡುಗೆಗೆ ಬಳಸಲಾಗುತ್ತಿದೆ ಎಂದು ಕಂಡುಬಂದ ನಂತರ ವೈದ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಉಮ್ಮತ್ತಿ ಹೂವುಗಳು ತುಂಬಾ ವಿಷಕಾರಿ. ವಿಷದ ಪರಿಣಾಮವನ್ನು ಕಡಿಮೆ ಮಾಡಲು ಮೂಲಭೂತ ಚಿಕಿತ್ಸೆ ಮಾತ್ರ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರಸ್ತುತ, ನಾಲ್ವರೂ ಸಾವಿನಿಂದ ಪಾರಾಗಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.


ಸಾಮಾಜಿಕ ಮಾಧ್ಯಮ ಎಚ್ಚರಿಕೆ!
ಇತ್ತೀಚಿನ ದಿನಗಳಲ್ಲಿ, ಕೆಲವರು ವೀಕ್ಷಣೆಗಳನ್ನು ಪಡೆಯಲು ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ Iಟಿsಣಚಿgಡಿಚಿm ಮತ್ತು ಙouಖಿube ನಲ್ಲಿ ಇಂತಹ ಅಪಾಯಕಾರಿ ಸಲಹೆಯನ್ನು ನೀಡುತ್ತಿದ್ದಾರೆ. ಅಂತಹ ಪ್ರಯೋಗಗಳನ್ನು ಮಾಡುವ ಮೊದಲು ಯೋಚಿಸುವುದು ಅವಶ್ಯಕ. ಉಮ್ಮತ್ತಿ ಸಸ್ಯದ ಬೀಜಗಳು ಮತ್ತು ಹೂವುಗಳು ನಮ್ಮ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ಮಾರಕವೂ ಆಗಬಹುದು ಎಂದು ಅಧಿಕಾರಿಗಳು ಮತ್ತು ವೈದ್ಯರು ಎಚ್ಚರಿಸಿದ್ದಾರೆ.