Home ಜಿಲ್ಲೆ ಲಿಡ್ಕರ್ ಕಾಲೋನಿಗೆ ಬಾಬು ಜಗಜೀವನ್ ರಾಂ ನಿಗಮ ಅಧ್ಯಕ್ಷರ ಭೇಟಿ, ಅಭಿವೃದ್ಧಿ ಕಾಮಗಾರಿಗಳಿಗೆ ಭರವಸೆ

ಲಿಡ್ಕರ್ ಕಾಲೋನಿಗೆ ಬಾಬು ಜಗಜೀವನ್ ರಾಂ ನಿಗಮ ಅಧ್ಯಕ್ಷರ ಭೇಟಿ, ಅಭಿವೃದ್ಧಿ ಕಾಮಗಾರಿಗಳಿಗೆ ಭರವಸೆ

ಬೀದರ್, ಏ ೨೯:ಬೀದರ್ ನಗರದ ಲಿಡ್ಕರ್ ಕಾಲೋನಿಗೆ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮುಂಡರಗಿ ನಾಗರಾಜ್ ಅವರು ಸೋಮವಾರ ಮೊಟ್ಟಮೊದಲ ಬಾರಿಗೆ ಭೇಟಿ ನೀಡಿ ಕಾಲೋನಿಯ ವಿವಿಧ ಸಮಸ್ಯೆಗಳು ಹಾಗೂ ಅಭಿವೃದ್ಧಿ ಅಗತ್ಯಗಳನ್ನು ಪರಿಶೀಲಿಸಿದರು.

ಕಾಲೋನಿಯ ಜನರ ಬೇಡಿಕೆಯ ಮೇರೆಗೆ ಇಲಾಖೆಯ ಯೋಜನೆಯಡಿ ಕೈಗೊಳ್ಳಬೇಕಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ತುರ್ತಾಗಿ ಅಗತ್ಯವಿರುವ ದುರಸ್ತಿ ಕಾಮಗಾರಿಗಳನ್ನು ಸ್ಥಳದಲ್ಲೇ ವೀಕ್ಷಣೆ ಮಾಡಿದ ಅವರು, ಶೀಘ್ರದಲ್ಲೇ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹರಳಯ್ಯ ಸಮಾಜದ ಬೀದರ್ ಜಿಲ್ಲಾ ಅಧ್ಯಕ್ಷ ಹಮಿಲ್ಪುರೆ ಸುಭಾಷ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟಿಳೆಕರ, ಖಜಾಂಚಿ ಸಂಜೀವಕುಮಾರ ದಾಮಾ ಹಾಗೂ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದು, ಕಾಲೋನಿಯ ಮೂಲಭೂತ ಸೌಲಭ್ಯಗಳ ಬಗ್ಗೆ ಮನವಿ ಸಲ್ಲಿಸಿದರು.

ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯ ಕ್ರಮಗಳನ್ನು ಅತಿ ಶೀಘ್ರವಾಗಿ ಕೈಗೊಳ್ಳುವುದಾಗಿ ತಿಳಿಸಿದರು