
ಕಲಬುರಗಿ,ಏ.15: ರಾಜ್ಯದ ಅತಿ ಹೆಚ್ಚಿನ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಮಂಗಳವಾರ (ಏ.14) ಕಲಬುರಗಿಯಲ್ಲಿ ದಾಖಲಾಗಿದೆ.
ಏ.15ರಿಂದ 17ರ ವರೆಗೆ ಕಲಬುರಗಿಯಲ್ಲಿ ಜಿಲ್ಲೆಯಲ್ಲಿ ಉಷ್ಣಅಲೆ (ಹೀಟ್ ವೇವ್ ) ಪ್ರತಾಪ ಇರಲಿದ್ದು,ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಧ್ಯಾಹ್ನ 12 ರಿಂದ ಸಂಜೆ 4ರ ವರೆಗೆ ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ತಪ್ಪಿಸುವುಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ






















