
ಕಲಬುರಗಿ,ಏ.14-ನಗರದ ಜಿಮ್ಸ್ ಆಸ್ಪತ್ರೆಯ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಸಿ. ಆರ್. ಮತ್ತು ಜಿಲ್ಲಾ ಶಸ್ತ್ರಜ್ಞರು ಮತ್ತು ಅಧೀಕ್ಷಕರಾದ ಡಾ.ರೂಕಿಯ ಆಸ್ನಾ ರಬಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ನಂತರ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಸಿ.ಆರ್ ಅವರು ಮಾತನಾಡುತ್ತ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ದಲಿತರಿಗಾಗಿ ಮಾತ್ರವಲ್ಲ, ಇಡೀ ದೇಶದ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾನ್ ನಾಯಕರು. ದೇಶದ ಸಂವಿಧಾನವನ್ನು ರಚಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದರು.
Àಜಿಲ್ಲಾ ಶಸ್ತ್ರಜ್ಞರು ಮತ್ತು ಅಧೀಕ್ಷಕರಾದ ಡಾ.ರೂಕಿಯ ಆಸ್ನಾ ರಬಾ ಅವರು ಮಾತನಾಡಿದರು. ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ.ಓಂ ಪ್ರಕಾಶ್ ಅಂಬೂರೆ, ಡಾ.ಶಾಲಾನಿ ಸಜ್ಜನಶೆಟ್ಟಿ, ಹಿರಿಯ ವೈದ್ಯಾಧಿಕಾರಿಗಳಾದ ಡಾ. ಪ್ರತಿಭಾ, ಸಹಾಯಕ ಆಡಳಿತಧಿಕಾರಿಗಳಾದ ವೀರಣ್ಣ ಶಿವಪುರ, ಮೆಟ್ರೋನ್, ಎಲ್ಜಿಬೆತ್, ಮನೋ ಸಾಮಾಜಿಕ ತಜ್ಞ ಬಾಳಪ್ಪ ಚಿಂಚನಸೂರ , ಜಿಲ್ಲಾ ಮಕ್ಕಳ ಅರೋಗ್ಯ ಸಮಾಲೋಚಕ ಮಂಜುನಾಥ ಕಂಬಾಳಿಮಠ , ಕ್ಲಿನಿಕಲ್ ಸೈಕಾಲಜಿಸ್ಟ್ ಕೇದರ್, ಶರಣು ಸುಂಬುಡ, ರಾಚಾಪ್ಪ ಬಿಸಗೋಂಡ, ಪರ್ವಾತಿ ಭೀಮರಾವ್, ಸುರೇಖಾ ಧಿವಾಟ್ಗಿ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.






















