
ಕೋಲಾರ,ಮಾ,೨೭- ೧೯೮೨ರ ಡಿಸೆಂಬರ್ ೧೭ರಂದು ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗಳಾದ ವೈ.ವಿ. ಚಂದ್ರಚೂಡ್ ನೇತೃತ್ವದ ಪಂಚಸದಸ್ಯ ಪೀಠವು ಪಿಂಚಣಿಯು ನೌಕರನ ಮೂಲಭೂತ ಹಕ್ಕು ಮತ್ತು ಅದು ಸರ್ಕಾರದ ದಾನವಲ್ಲ ಎಂದು ಐತಿಹಾಸಿಕ ತೀರ್ಪು ನೀಡಿದೆ. ಪಿಂಚಣಿಯು ನಿವೃತ್ತ ನೌಕರರು ಗೌರವಯುತವಾಗಿ ಬದುಕಲು ನೀಡುವ ಜೀವನ ಭತ್ಯೆಯಾಗಿದ್ದು, ಅದನ್ನು ರದ್ದುಪಡಿಸುವ ಅಧಿಕಾರ ಯಾವುದೇ ಸರ್ಕಾರಕ್ಕಿಲ್ಲ ಎಂದು ಈ ತೀರ್ಪು ಸ್ಪಷ್ಟಪಡಿಸಿದೆ.
ಆದರೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ ನಿವೃತ್ತರಿಗೆ ನೀಡುವ ತುಟ್ಟಿಭತ್ಯೆ ಮತ್ತು ವೇತನ ಆಯೋಗದ ಸೌಲಭ್ಯಗಳ ಕುರಿತು ವ್ಯತಿರಿಕ್ತವಾಗಿ ಚರ್ಚಿಸಿರುವುದು ಬೇಸರವಾಗಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು ಮತ್ತೊಮ್ಮೆ ಪರಿಶೀಲಿಸಿ, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕೆಂದು ನಿವೃತ್ತ ಸರ್ಕಾರಿ ನೌಕರರ ಬೇಡಿಕೆಗಳಾದ ತುಟಿ ಭತ್ಯೆಯನ್ನು ನೀಡಬೇಕಾಗಿ ನಿವೃತ್ತ ಎ.ಎಸ್.ಐ, ಕೆ. ಎನ್. ರವೀಂದ್ರನಾಥ್ ಮನವಿ ಮಾಡಿದ್ದಾರೆ.























