Home ಜಿಲ್ಲೆ ಕಲಬುರಗಿ ವಿಜ್ಞಾನ ರಾಷ್ಟçದ ಅಭಿವೃದ್ಧಿಯ ಚಾಲನಾ ಶಕ್ತಿ

ವಿಜ್ಞಾನ ರಾಷ್ಟçದ ಅಭಿವೃದ್ಧಿಯ ಚಾಲನಾ ಶಕ್ತಿ

ಕಲಬುರಗಿ:ಮಾ.1:ಯಾವುದೇ ಒಂದು ರಾಷ್ಟçದ ಅಭಿವೃದ್ಧಿಯು ಅಲ್ಲಿನ ವಿಜ್ಞಾನದ ಬೆಳವಣಿಗೆಯ ಮೇಲೆ ಅವಲಂಬಿಸಿದೆ. ವಿಜ್ಞಾನವು ಹೊಸ ಸಂಶೋಧನೆಗಳ ಮೂಲಕ ಅನೇಕ ಸೌಕರ್ಯಗಳನ್ನು ದೊರೆಯುವಂತೆ ಮಾಡಿ, ಯಾವುದೇ ರಾಷ್ಟçವು ಅತ್ಯಂತ ಶೀಘ್ರವಾಗಿ ಅಭಿವೃದ್ಧಿ ಹೊಂದುವAತೆ ಮಾಡುತ್ತದೆ. ವಿಜ್ಞಾನವು ರಾಷ್ಟçದ ಅಭಿವೃದ್ಧಿಯ ಚಾಲನಾ ಶಕ್ತಿಯಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಸಂಜೆ ಜರುಗಿದ “ರಾಷ್ಟಿçÃಯ ವಿಜ್ಞಾನ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿ ದಿಸೆಯಿಂದಲೇ ವಿಜ್ಞಾನದ ಬಗ್ಗೆ ತುಂಬಾ ಆಸಕ್ತಿ, ಸಂಶೋಧನಾ ಪ್ರವೃತ್ತಿ ಬೆಳೆಯುವಂತೆ ಶಿಕ್ಷಕರು ಪೂರಕವಾದ ವಾತಾವರಣ ನಿರ್ಮಿಸಬೇಕು. ಸರ್.ಸಿ.ವಿ.ರಾಮನ್ ಅವರ ‘ರಾಮನ್ ಪರಿಣಾಮ’ದಿಂದಾಗಿ ಇಡೀ ವಿಶ್ವವೇ ಭಾರತದಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ಸಮುದ್ರದ ನೀಲಿ ಬಣ್ಣಕ್ಕೆ ಬೆಳಕಿನ ಚದುರುವಿಕೆಯ ಕಾರಣವೆಂಬ ಸಂಶೋಧನೆಗೆ ವಿಶ್ವದ ಶ್ರೇಷ್ಠ ಪ್ರಶಸ್ತಿಯಾದ ನೋಬಲ್ ಪಾರಿತೋಷಕ 1930 ರಲ್ಲಿ ಪಡೆದು ನಮ್ಮ ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ಇದರ ಸವಿನೆನಪಿಗಾಗಿ ಪ್ರತಿವರ್ಷ ‘ಫೆ-28’ನ್ನು ‘ರಾಷ್ಟಿçÃಯ ವಿಜ್ಞಾನ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಶಿಕ್ಷಕ ಆದರ್ಶ ವಡ್ಡನಕೇರಿ ಹಾಗೂ ವಿದ್ಯಾರ್ಥಿಗಳಿದ್ದರು.