ಕೈಗಾರಿಕೆ, ನವೋದ್ಯಮ, ಮಾನವ ಸಂಪನ್ಮೂಲ, ಕೃಷಿ, ಪ್ರವಾಸೋದ್ಯಮಕ್ಕೆ ಒತ್ತು:ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ನ.1:ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಹಾಗೂ ಉದ್ಯಮಶೀಲತೆ ಕ್ಷೇತ್ರಗಳ ಅಭಿವೃದ್ಧಿಗಾಗಿ ನೀಲಿನಕ್ಷೆ ಸಿದ್ದಪಡಿಸಲಾಗುತ್ತಿದ್ದು, ಆ ಮೂಲಕ ರಾಜ್ಯದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡಲು ಪ್ರಯತ್ನಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶೇಕಡಾವಾರು ರಾಜ್ಯದ ಜಿಡಿಪಿಗೆ ಬೆಂಗಳೂರು 40ರಷ್ಟು ಕೊಡುಗೆ ನೀಡುತ್ತಿದ್ದರೆ, ದಕ್ಷಿಣಕನ್ನಡ-4.5, ಬೆಂಗಳೂರು ಗ್ರಾಮೀಣ-1 ಹಾಗೂ ಕಲಬುರಗಿ-1.9 ಕೊಡುಗೆ ನೀಡುತ್ತಿವೆ. ನವೋದ್ಯಮ ಸ್ಥಾಪನೆ, ಕೈಗಾರಿಕೆಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಮಾನವ ಸಂಪನ್ಮೂಲದ ಬೆಳವಣಿಗೆ, ಕೌಶಲ್ಯಾಭಿವೃದ್ಧಿ, ಆವಿಷ್ಕಾರ ಕೇಂದ್ರ, ಕೃಷಿ ವಲಯದ ಸ್ಥಿರತೆಯ ಜೊತೆಗೆ ಪ್ರವಾಸೋದ್ಯಮವನ್ನು ಬಲಪಡಿಸುವ ಗುರಿಯೊಂದಿಗೆ ನವ ಕಲಬುರಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ರೂಪುರೇಷೆ ಸಿದ್ದಪಡಿಸಲಾಗುತ್ತದೆ ಎಂದು ವಿವರಗಳನ್ನು ಹಂಚಿಕೊಂಡರು.
ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನೀಲಿನಕ್ಷೆ ತಯಾರಿಸಲಾಗಿದ್ದು ಮುಂದಿನ ಎರಡು ವಾರದಲ್ಲಿ ಸಾರ್ವಜನಿಕರೊಂದಿಗೆ ವಿವರಗಳನ್ನು ಹಂಚಿಕೊಳ್ಳಲಾಗುವುದು. ಮುಂದಿನ ಒಂದು ವರ್ಷದೊಳಗೆ ಈ ಎಲ್ಲಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಕಲಬುರಗಿ ಜಿಲ್ಲೆಯ ಜಿಡಿಪಿ ಶೇ.1.9ರಿಂದ 2.15ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಐಟಿ-ಬಿಟಿ ಸೇರಿದಂತೆ ಯಾವುದೇ ನವೋದ್ಯಮ ಆದಷ್ಟೂ ಬೆಂಗಳೂರಿನಲ್ಲಿಯೇ ಕೇಂದ್ರೀಕೃತಗೊಂಡು ತನ್ನ ಕಾರ್ಯಜಾಲ ಮತ್ತು ವಹಿವಾಟು ಕುದುರಿಸಿಕೊಳ್ಳುತ್ತದೆ. ಇದರಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಕೈಗಾರಿಕೆಗಳು ವಿಸ್ತಾರಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ “ಬಿಯಾಂಡ್ ಬೆಂಗಳೂರು” ಕಾರ್ಯಕ್ರಮದಡಿ ಬೆಂಗಳೂರು ಹೊರತುಪಡಿಸಿ ಕಲಬುರಗಿಯಲ್ಲಿ ನವೋದ್ಯಮದ ಉತ್ತೇಜನಕ್ಕೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.
ನಾಗಾವಿ ಇನ್ಸ್ಟಿಟ್ಯೂಟ್ ಆಫ್ ಕಾಂಪಿಟಿಟಿವ್ ಎಕ್ಸಾಮಿನೆಷನ್ (ನೈಸ್) ಅಡಿಯಲ್ಲಿ ಕಲಬುರಗಿ ನಗರದಲ್ಲಿ ತರಬೇತಿ ಕೇಂದ್ರ ಸಿದ್ಧಗೊಂಡಿದೆ. ಈ ಕೇಂದ್ರದಲ್ಲಿ 2000 ವಿದ್ಯಾರ್ಥಿಗಳಿಗೆ ಯುಪಿಎಸ್ಸಿ, ಕೆಪಿಎಸ್ಸಿ, ಬ್ಯಾಂಕಿಂಗ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು ಎಂದು ಸಚಿವ ಪ್ರಿಯಾಂಕ್ ತಿಳಿಸಿದರು.
ಇದರ ಜೊತೆಗೆ, ಐತಿಹಾಸಿಕ ಸ್ಮಾರಕಗಳನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಸಂರಕ್ಷಣೆಗೆ ರೂ. 313.17 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕನ್ನಡದ ಪ್ರಾಚೀನ ವಿಶ್ವವಿದ್ಯಾನಿಲಯ ಎಂಬ ಖ್ಯಾತಿ ಪಡೆದಿರುವ ಚಿತ್ತಾಪುರ ತಾಲೂಕಿನ ನಾಗಾವಿ ಪಾರಂಪರಿಕ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳನ್ನು ರೂ 68 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಸಹ ಹೇಳಿದರು.
ಕೆ.ಕೆ.ಆರ್.ಡಿ.ಬಿ ಮೆಗಾ-ಮ್ಯಾಕ್ರೋ ಅನುದಾನದಡಿ ಕಲಬುರಗಿ ಜಿಲ್ಲೆಯಾದ್ಯಂತ 9 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಕಮಲಾಪುರ, ಸೇಡಂ, ಅಫಜಲಪುರ ಹಾಗೂ ಚಿತ್ತಾಪುರದಲ್ಲಿ ಡ್ರೋನ್ ಸಿಂಪಡಣೆ ಕೇಂದ್ರ ಸ್ಥಾಪಿಸಿದೆ. ಅಫಜಲಪುರ ಮತ್ತು ಚಿತ್ತಾಪುರ ತಾಲೂಕಿನಲ್ಲಿ ರೂ. 3 ಕೋಟಿ ವೆಚ್ಚದಲ್ಲಿ ಸಿರಿಧಾನ್ಯ ಸಂಸ್ಕರಣ ಕೇಂದ್ರ ಸ್ಥಾಪಿಸಲಾಗುತ್ತಿದೆ. ಚಿತ್ತಾಪುರದಲ್ಲಿ ರೂ. 10 ಕೋಟಿ ವೆಚ್ಚದಲ್ಲಿ ಶೀತಲೀಕರಣ ಘಟಕ ಮತ್ತು ಕಲಬುರಗಿ ಜಿಲ್ಲೆಯಾದ್ಯಂತ ರೂ. 7.59 ಕೋಟಿ ವೆಚ್ಚದಲ್ಲಿ ಏಳು ಸೂಕ್ಷ್ಮ ಜಲಾನಯನ ಸಂಸ್ಕರಣ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೆÇಲೀಸ್ ಕಮಿಷನರ್ ಶರಣಪ್ಪ ಢಗೆ, ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ ಭಂವಸಿರ್ಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಇತರರಿದ್ದರು.


ಸಚಿವ ಪ್ರಿಯಾಂಕ್ ಪ್ರಸ್ತಾಪಿಸಿದ ಅಂಶಗಳು
• ಕಲಬುರಗಿ ನಗರದಲ್ಲಿ ಅತ್ಯುತ್ತಮ ಇನ್ನೊವೇಷನ್ ಸೆಂಟರ್ ಸ್ಥಾಪನೆ.
• ಕಲಬುರಗಿ ಜಿಲ್ಲೆಯಲ್ಲಿ 2030ರ ವೇಳೆಗೆ 500ಕ್ಕೂ ಹೆಚ್ಚು ಸ್ಟಾರ್ಟ್-ಅಪ್ಗಳನ್ನು ಪೆÇ?ಷಿಸಿ, ಕನಿಷ್ಠ 1,000 ನೇರ ಉದ್ಯೋಗಗಳನ್ನು ಸೃಷ್ಟಿಸುವುದು.
• ಯುವಕರಲ್ಲಿ ಉದ್ಯಮಶೀಲತಾ ಗುಣಮಟ್ಟ ರೂಢಿಸುವ ನಿಟ್ಟಿನಲ್ಲಿ ಅವರ ವ್ಯಕ್ತಿತ್ವ ವಿಕಸನಕ್ಕಾಗಿ ಭಾಷ್ ಲ್ಯಾಬ್ ಸ್ಥಾಪನೆ.
• ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದ 3ನೇ ಹಂತದ 595.6 ಎಕರೆಗಳ ಪೈಕೀ 36.89 ಎಕರೆಯಲ್ಲಿ ವಿದ್ಯುನ್ಮಾನ ಉತ್ಪನ್ನಗಳ ತಯಾರಿಕಾ ಘಟಕ, 48.80 ಎಕರೆಯಲ್ಲಿ ರಸಾಯನಿಕ ಮತ್ತು ಅನಿಲ ಕೈಗಾರಿಕೆಗಳು, 5.51 ಎಕರೆಯಲ್ಲಿ ಫುಡ್ ಪಾರ್ಕ್ 5.24 ಎಕರೆಯಲ್ಲಿ ಸುಸ್ಥಿರ ವಿದ್ಯುನ್ಮಾನ ಉದ್ಯಾನ ಸ್ಥಾಪನೆಗೆ ಕ್ರಮ.
• ಕಪನೂರ ಕೈಗಾರಿಕಾ ಪ್ರದೇಶದ 3ನೇ ಹಂತದ 20 ಎಕರೆ ಜಾಗದಲ್ಲಿ ಆಟೋ ಮೊಬೈಲ್ ವಾಹನಗಳ ದುರಸ್ತಿ ಮತ್ತು ಸಂಬಂಧಪಟ್ಟ ಎಲ್ಲಾ ವೃತ್ತಿಗಳ ಬೆಂಬಲಕ್ಕೆ ಆಟೋ ಜನರಲ್ ಇಂಜಿನಿಯರಿಂಗ್ ಕ್ಲಸ್ಟರ್ ಸ್ಥಾಪನೆ.


ಮುಂದಿನ ವಾರ ರೈತರ ಖಾತೆಗಳಿಗೆ ಬೆಳೆ ಪರಿಹಾರ
ಪ್ರಸಕ್ತ ವರ್ಷ ಮುಂಗಾರು ಅವಧಿಯಲ್ಲಿ ಸುರಿದ ಭಾರಿ ಮಳೆ ಮತ್ತು ನದಿಗಳ ಪ್ರವಾಹದಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3,24,777 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಸಮೀಕ್ಷೆ ಕೈಗೊಂಡಿದ್ದು, ಈವರೆಗೆ 4,17,596 ರೈತರು ಪರಿಹಾರಕ್ಕಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ. ಈ ಪೈಕಿ 4,15,996 ರೈತರ ವಿವರಗಳು ಸ್ವೀಕೃತಗೊಂಡಿದ್ದು, 1,148 ತಿರಸ್ಕøತಗೊಂಡಿವೆ. ಇನ್ನೂ 1,600 ರೈತರ ವಿವರಗಳು ದಾಖಲಾಗಬೇಕಿದೆ. ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ನಿಯಮಗಳಡಿ ಮೊದಲ ಕಂತಿನ ಬೆಳಹಾನಿ ಪರಿಹಾರ ಮುಂದಿನ ವಾರದಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.


ಸ್ಮಾರ್ಟ್ ಕಲಬುರಗಿ ಸಿಟಿಗೆ ಒತ್ತು
ಕೇವಲ ಉದ್ಯೋಗ ಹಾಗೂ ಶಿಕ್ಷಣಕ್ಕಷ್ಟೇ ಒತ್ತು ನೀಡದೆ ಯುವ ಸಬಲೀಕರಣಕ್ಕಾಗಿ ಕಲಬುರಗಿಯಲ್ಲಿ ಬೃಹತ್ ಸ್ಪೋಟ್ರ್ಸ್ ಸಿಟಿ ಸ್ಥಾಪನೆಗೆ ಅಡಿಗಲ್ಲು ನೆರವೇರಿಸಲಾಗುವುದು. ಈ ನಿಟ್ಟಿನಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯ ಮಾದರಿಯಲ್ಲಿ ಅಭಿವೃದ್ದಿ ಪಡಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮದಡಿ ರೂ.1000 ಕೋಟಿ ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನ ಸಮೂಹಗಳಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಸುವ ಉದ್ದೇಶದೊಂದಿಗೆ 5 ವರ್ಷಗಳ ಪರಿವರ್ತಕ, ಮೂಲ ಸೌಕರ್ಯ ಅಂತರ ಹಣಕಾಸಿನ ಪ್ರವೇಶ ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಪಸರಿಸುವ ಮೂಲಕ ಲೀಪ್ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ನುಡಿದರು.