
ಬೀದರ್,ನ.1: ಕನ್ನಡ ಭಾಷೆ ಹಾಗೂ ಸಂಸ್ಕೃತಿ ಶ್ರೀಮಂತಗೊಳ್ಳಲು ಬಸವಾದಿ ಶರಣರ ಪಾತ್ರ ಬಹಳಷ್ಟಿದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.ಇಂದು ನಗರದ ನೆಹರು ಕ್ರೀಡಾಂಗಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ನಿಮಿತ್ಯ ರಾಷ್ಟ್ರಧ್ವಜಾರೊಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆ ಎಷ್ಟು ಶ್ರೀಮಂತವಾಗಿದೆಯೋ, ಕರ್ನಾಟಕ ಕೂಡ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಮತ್ತು ನೈಸರ್ಗಿಕವಾಗಿ ಅಷ್ಟೇ ಶ್ರೀಮಂತವಾಗಿದೆ. ಆದಿಕವಿ ಪಂಪನಿಂದ ಇಂದಿನ ಆಧುನಿಕ ಕವಿವರೇಣ್ಯರವರೆಗೆ ಕನ್ನಡ ಸಾಹಿತ್ಯಕ್ಕೆ ಅನೇಕರು ಕೊಡುಗೆ ನೀಡಿದ್ದಾರೆ. ಕನ್ನಡವನ್ನು ಗಟ್ಟಿ ಗೊಳಿಸಿದ್ದಾರೆ. ಈ ಪರಂಪರೆಯಲ್ಲಿ ಕಲ್ಯಾಣ ಕರ್ನಾಟಕದ ಪುಣ್ಯ ಭೂಮಿಯಲ್ಲಿವ ವಚನಗಳನ್ನು ರಚಿಸಿದ ಶರಣರು ಮತ್ತು ದಾಸ ಶ್ರೇಷ್ಠರು ಕನ್ನಡ ಭಾಷೆಯನ್ನು ಸಮೃದ್ಧಗೊಳಿಸುವುದರ ಜೊತೆಗೆ ಸಾಮಾಜಿಕ ಪರಿವರ್ತನೆಗೆ ಅಡಿಪಾಯ ಹಾಕಿದ್ದಾರೆ. ಕರುನಾಡು, ಶ್ರೀಗಂಧದಬೀಡು, ಶಿಲ್ಪ ಕಲೆಗಳನಾಡು, ಅಷ್ಟೇ ಅಲ್ಲ ಕರ್ನಾಟಕ ವಿಜ್ಞಾನ, ತಂತ್ರಜ್ಞಾನದ ತವರೂ ಆಗಿದೆ ಏಕೀಕರಣ ಚಳವಳಿಯಲ್ಲಿ ಅಖಂಡ ಕರ್ನಾಟಕವನ್ನು ಒಗ್ಗೂಡಿಸಲು ರಾಜ್ಯದ ಹಲವರು ಶ್ರಮಿಸಿದ್ದಾರೆ. ಈ ಎಲ್ಲ ಮಹಾನುಭಾವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಹುಯಿಲಗೋಳ ನಾರಾಯಣ ರಾಯರು, ಗುದ್ದೆ,ಪಾಹಳ್ಳಿಕೇರಿ, ಸಿದ್ದಪ್ಪಾ ಕಂಬಳಿ, ಗಂಗಾಧರ ರಾವ್ ದೇಶಪಾಂಡೆ, ಆರ್.ಆರ್. ದಿವಾಕರ, ಶ್ರೀನಿವಾಸ್ ಕೌಜಲಗಿ, ಕೆಂಗಲ್ ಹನುಮಂತಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್.ನಿಜಲಿಂಗಪ್ಪ ಮತ್ತು ಬೀದರ ಜಿಲ್ಲೆಯ ಡಾ.ಜಯದೇವಿ ತಾಯಿ ಲಿಗಾಡೆ, ಉರ್ದು ನಾಮಫಲಕ ಹಾಕಿ ಕನ್ನಡ ಕಲಿಸಿದ ಭಾಲ್ಕಿ ಹಿರೇಮಠದಡಾ. ಚನ್ನಬಸವಪಟ್ಟದೇವರು, ಪ್ರಭುರಾವ ಕಂಬಳಿವಾಲಾ, ಆರ್.ವಿ. ಬಿಡಪ್ಪ, ಚಿಟಗುಪ್ಪಾದ ವಿಠಲರಾವ ಹುಕಡಾಲ, ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಸೇರಿದಂತೆ ಅಸಂಖ್ಯಾತ ಕನ್ನಡಾಭಿಮಾನಿಗಳು ತಮ್ಮ ತಮ್ಮ ಪ್ರದೇಶವನ್ನು ಕರುನಾಡಿನ ಉಳಿಸಲು ಹೋರಾಟ ಮಾಡಿದ್ದಾರೆ, ಸೆರೆವಾಸ ಅನುಭವಿಸಿದ್ದಾರೆ. ಇವರೆಲ್ಲರ ಹೋರಾಟದ ಫಲವಾಗಿ ಮೈಸೂರು ರಾಜ್ಯ ಉದಯಿಸಿತು.
ಕರ್ನಾಟಕ ಕೇವಲ ಹೆಸರಲ್ಲ. ಅದೊಂದು ಚೇತನಶಕ್ತಿ ಸರ್ವ ಜನಾಂಗದ ಶಾಂತಿಯ ತೋಟ, ಧರ್ಮ, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳ ಕಣಜ, ಹಿಂದೂ, ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಇತ್ಯಾದಿ ಧರ್ಮಗಳ ಸಂಗಮಎಂದರು.
ಇಡೀ ಜಗತ್ತಿಗೆ ಸಂಸತ್ತಿನ ಪರಿಕಲ್ಪನೆ ಕಟ್ಟಿಕೊಟ್ಟ, ಪ್ರಜಾಪ್ರಭುತ್ವದ ಮೂಲ ಸೆಲೆಯೇ ಬೀದರ್ ಜಿಲ್ಲೆಯಲ್ಲಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಬೀದರ್ ಜಿಲ್ಲೆಯಲ್ಲಿ ಬಸವಾದಿ ಶರಣರ ಪಾದಸ್ಪರ್ಶದಿಂದ ಪುನೀತವಾದ ಪುಣ್ಯಭೂಮಿ ಬಸವಕಲ್ಯಾಣವೂ ಇದೆ, ನಾನಕ್ಕಿರಾಗುರುದ್ವಾರವೂ ಇದೆ, ಮಹಮದವಾನರ ಮದರಸಾ ಇದೆ, ಸಂತ ಪಾಲರ ಇಗರ್ಜಿಯೂ ಇದೆ, ಝರಣಿ ನರಸಿಂಹ ಸ್ವಾಮಿ, ಪಾಪನಾಶ ದೇವಾಲಯವೂ ಇದೆಎಂದವರು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಬಸವಕಲ್ಯಾಣದ ಅನುಭವ ಮಂಟಪ ಜಗತ್ತಿನ ಪ್ರಥಮ ಪ್ರಜಾ ಸಂಸತ್ತಾಗಿತ್ತು. ಈಗ 740 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಸರಕಾರವು 50 ಕೋಟಿ ರೂ.ಗಳನ್ನು ಇತ್ತೀಚಿಗೆ ಬಿಡುಗಡೆ ಮಾಡಿದೆ. ಈಗ ಶೇ. 70 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2026ರ ವಷಾರ್ಂತ್ಯದೊಳಗೆ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸರ್ಕಾರ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಶಸ್ತ್ರ ಮೀಸಲು ಪೆÇಲೀಸ್ ಪಡೆ, ನಾಗರಿಕ ಪೆÇೀಲಿಸ್, ಗೃಹರಕ್ಷಕ ದಳ, ಅರಣ್ಯ ಪೆÇೀಲಿಸ್, ಅಬಕಾರಿ, ಭಾರತ ಸ್ಕೌಟ್ಸ್ ಮತ್ತು ಗೈಡ್, ಭಾರತ ಸೇವಾದಳ, ಎನ್.ಸಿ.ಸಿ, ಎನ್.ಎಸ್.ಎಸ್ ತುಕಡಿಗಳಿಂದ ಪರೆಡ್ ವಂದನೆ ಸ್ವೀಕರಿಸಿದರು.ಇದೇ ಸಂದರ್ಭದಲ್ಲಿ ತೋಟಗಾರಿಕೆ, ರೇಷ್ಮೆ, ಅರಣ್ಯ, ಆರೋಗ್ಯ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಇತ್ಯಾದಿ ಇಲಾಖೆಗಳ ಸ್ತಬ್ದ ಚಿತ್ರಗಳು ಎಲ್ಲರ ಮನಸುರೆಗೊಳಿಸಿದವು.
ಬೆಳಿಗ್ಗೆ 8 ಗಂಟೆಗೆ ನಗರದ ಬಸವೇಶ್ವರ ವೃತ್ತದಿಂದ ಅಲಂಕೃತ ವಾಹನದಲ್ಲಿ ತಾಯಿ ಭೂವನೇಶ್ವರಿ ದೇವಿಯ ಭವ್ಯ ಮೆರವಣಿಗೆ ಜರುಗಿತು.ಸಂಗೀತ, ಸಾಹಿತ್ಯ, ಸಮಾಜ ಸೇವೆ, ಪತ್ರಿಕಾ ರಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಮಹನಿಯರಿಗೆ ಸನ್ಮಾನಿಸಲಾಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಸಂಸದ ಸಾಗರ ಖಂಡ್ರೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸೋಧಿನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಬದೌಲೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಉಪಾ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಕನ್ನಡಪರ ಸಂಘಟನೆಗಳ ಪ್ರಮುಖರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು, ರೈತರು, ಸಾರ್ವಜನಿಕರು, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.





























