ಕತ್ತಲಿನಿಂದ ಬೆಳಕಿಗೆ : ಅಫಜಲಪುರ ಪೊಲೀಸ್ ಠಾಣೆಯ ಹೊಸ ಮುಖ

ಕರಜಗಿ:ನ.1:ಕಲಬುರಗಿ ಜಿಲ್ಲೆಯ ಅಫಜಲಪುರ ಪೆÇಲೀಸ್ ಠಾಣೆಯ ಪ್ರವೇಶ ದ್ವಾರ ಈಗ ಹೊಸ ರೂಪ ಪಡೆದುಕೊಂಡಿದೆ. ಕಳೆದ ಕೆಲವು ದಿನಗಳ ಹಿಂದೆ ಕತ್ತಲಿನಿಂದ ಆವರಿಸಿದ್ದ ಈ ಪ್ರದೇಶ ಇದೀಗ ಪ್ರಕಾಶಮಾನವಾಗಿ ಕಂಗೊಳಿಸುತ್ತಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಅನುಕೂಲತೆಗೆ ಇಲಾಖೆ ಮುಂದಾಗಿದೆ ಎಂಬುದು ಸ್ಪಷ್ಟವಾಗಿದೆ.

ಇದಕ್ಕೂ ಮೊದಲು “ಕತ್ತಲೆಯಲ್ಲಿ ಪೆÇಲೀಸ್ ಠಾಣೆ ಪ್ರವೇಶ ದ್ವಾರ” ಎಂಬ ಶೀರ್ಷಿಕೆಯಲ್ಲಿ ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಸ್ಥಳೀಯರು ಠಾಣೆಯ ಪ್ರವೇಶದ್ವಾರದಲ್ಲಿ ಬೆಳಕಿನ ಕೊರತೆಯಿಂದಾಗಿ ರಾತ್ರಿ ವೇಳೆ ಸಂಚಾರ ಮಾಡಲು ಅಸೌಕರ್ಯ ಎದುರಿಸುತ್ತಿದ್ದರು. ಜನರ ಅಸಮಾಧಾನ ಮಾಧ್ಯಮಗಳ ಮುಖಾಂತರ ಹೊರಹೊಮ್ಮಿದ ನಂತರ, ಪೆÇಲೀಸ್ ಇಲಾಖೆ ತಕ್ಷಣ ಸ್ಪಂದಿಸಿದೆ.

ಆರಕ್ಷಕ ಇಲಾಖೆ ಅಧಿಕಾರಿಗಳು , ಅಗತ್ಯ ಕ್ರಮ ಕೈಗೊಂಡಿದ್ದಾರೆ. ಇದೀಗ ಠಾಣೆಯ ಪ್ರವೇಶದ್ವಾರದಲ್ಲಿ ನೂತನ ವಿದ್ಯುತ್ ದೀಪಗಳ ಸ್ಥಾಪನೆಗೊಂಡಿದ್ದು, ಸ್ಥಳವು ದಿನದ ಬೆಳಕಿನಂತೆಯೇ ಪ್ರಕಾಶಿಸುತ್ತಿದೆ. ಈ ಬೆಳಕಿನ ವ್ಯವಸ್ಥೆಯಿಂದ ಠಾಣೆಯ ಸುತ್ತಮುತ್ತಿನ ರಸ್ತೆ ಪ್ರದೇಶವೂ ಬೆಳಗಿದ್ದು, ಸಾರ್ವಜನಿಕರು ಮತ್ತು ಠಾಣೆಗೆ ಆಗಮಿಸುವ ನಾಗರಿಕರಿಗೆ ಭದ್ರತೆಯ ಭಾವನೆ ಹೆಚ್ಚಾಗಿದೆ.

ಸಂಜೆವಾಣಿ ಪತ್ರಿಕೆಯ ವರದಿ ಹಾಗೂ ಸಾರ್ವಜನಿಕರ ಧ್ವನಿಗೆ ಸ್ಪಂದಿಸಿ ಕ್ರಮ ಕೈಗೊಂಡ ಪೆÇಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ. ಜನರ ಕಾಳಜಿ ಮತ್ತು ಮಾಧ್ಯಮದ ಪ್ರತಿಕ್ರಿಯೆಯನ್ನು ಗೌರವಿಸುವ ಮೂಲಕ ಪೆÇಲೀಸರು ಉತ್ತಮ ಉದಾಹರಣೆ ನಿರ್ಮಿಸಿದ್ದಾರೆ.

ಸ್ಥಳೀಯರು ಈಗ ಸಂತೋಷ ವ್ಯಕ್ತಪಡಿಸುತ್ತಾ, “ಪತ್ರಿಕೆಯ ವರದಿ ಮತ್ತು ಇಲಾಖೆಯ ಸ್ಪಂದನೆಯಿಂದ ನಿಜವಾಗಿಯೂ ಬದಲಾವಣೆ ಕಂಡಿದ್ದೇವೆ” ಎಂದು ಹೇಳುತ್ತಿದ್ದಾರೆ. ಅಫಜಲಪುರ ಠಾಣೆಯ ಬೆಳಕಿನ ವ್ಯವಸ್ಥೆ ಇದೀಗ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು, ಇದು ಇಲಾಖೆಯ ಜವಾಬ್ದಾರಿಯುತ ನಡವಳಿಕೆಗೆ ಸಾಕ್ಷಿಯಾಗಿದೆ.