
ಕಾಂಗ್ರೆಸ್‌ಗೆ ಒಲಿದ ಸಚಿವ ಸ್ಥಾನ
ಚೆನ್ನೈಮೇ.೨೧:ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತಮ್ಮ ಸಚಿವ ಸಂಪುಟವನ್ನು ಇಂದು ವಿಸ್ತರಿಸಿದ್ದಾರೆ.
ಒಟ್ಟು ೨೩ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇದರಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಸೇರಿರುವುದು ವಿಶೇಷವಾಗಿದ್ದು, .ಚೆನ್ನೈನ ಲೋಕ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ನೂತನ ಸಚಿವರುಗಳಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ೨೩ ಸಚಿವರ ಪೈಕಿ ೨೧ ಮಂದಿ ಟಿವಿಕೆ ಪಕ್ಷದವರಾಗಿದ್ದರೆ, ಇಬ್ಬರು ಮಿತ್ರಪಕ್ಷವಾದ ಕಾಂಗ್ರೆಸ್‌ನವರಾಗಿದ್ದಾರೆ.೧೯೬೭ರ ಬಳಿಕ ಹೊಸ ಇತಿಹಾಸ ಬರೆದ ಕಾಂಗ್ರೆಸ್ ವಿಜಯ್ ಸಂಪುಟಕ್ಕೆ ಕಾಂಗ್ರೆಸ್‌ನ ಕಿಳಿಯೂರು ಶಾಸಕ ಎಸ್. ರಾಜೇಶ್ ಕುಮಾರ್ ಮತ್ತು ಮೇಲೂರು (ಮಧುರೈ) ಶಾಸಕ ಪಿ. ವಿಶ್ವನಾಥನ್ ಅವರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.
ತಮಿಳುನಾಡು ರಾಜಕಾರಣದಲ್ಲಿ ೧೯೬೭ರ ನಂತರ ಮಿತ್ರಪಕ್ಷವೊಂದಕ್ಕೆ ಆಡಳಿತದಲ್ಲಿ ಪಾಲು ಸಿಗುತ್ತಿರುವುದು ಇದೇ ಮೊದಲು. ಈ ಹಿಂದೆ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ದಶಕಗಳ ಕಾಲ ಆಡಳಿತ ನಡೆಸಿದ್ದರೂ, ಕಾಂಗ್ರೆಸ್ ಸೇರಿದಂತೆ ಯಾವುದೇ ಮಿತ್ರಪಕ್ಷಗಳನ್ನು ಸರ್ಕಾರದಲ್ಲಿ ಸೇರಿಸಿಕೊಂಡಿರಲಿಲ್ಲ. ೧೯೬೭ರಲ್ಲಿ ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರು ಕಾಂಗ್ರೆಸ್ ವಿರುದ್ಧ ಗೆದ್ದು ಮೊದಲ ಬಾರಿಗೆ ದ್ರಾವಿಡ ಸರ್ಕಾರ ರಚಿಸಿದ್ದರು.
ಅಂದಿನಿಂದ ಇಂದಿನವರೆಗೆ ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರದ ಮಾದರಿ ಇರಲಿಲ್ಲ. ಈಗ ಸಿಎಂ ವಿಜಯ್ ಆ ಸಂಪ್ರದಾಯವನ್ನು ಮುರಿದಿದ್ದಾರೆ.ಐಯುಎಂಎಲ್, ವಿಸಿಕೆ ಸದ್ಯಕ್ಕಿಲ್ಲ:ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಇತರ ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಮ್‌ಎಲ್) ಮತ್ತು ವಿಡುದಲೈ ಚಿರುತೈಗಳ್ ಕಚ್ಚಿ ( ವಿಕೆಸಿ) ಪಕ್ಷಗಳಿಗೂ ಸರ್ಕಾರ ಸೇರಲು ಆಹ್ವಾನ ನೀಡಿದ್ದರು. ಆದರೆ ಸದ್ಯದ ವಿಸ್ತರಣೆಯಲ್ಲಿ ಈ ಎರಡೂ ಪಕ್ಷಗಳ ಶಾಸಕರು ಪ್ರಮಾಣ ವಚನ ಸ್ವೀಕರಿಸಿಲ್ಲ.ಐಯುಎಂಎಲ್ ತತ್ವಶಃ ಸರ್ಕಾರ ಸೇರಲು ಒಪ್ಪಿದ್ದರೂ, ತನ್ನ ಇಬ್ಬರು ಶಾಸಕರಲ್ಲಿ ಯಾರನ್ನು ಮಂತ್ರಿ ಮಾಡಬೇಕೆಂಬ ಗೊಂದಲದಿಂದಾಗಿ ಈ ಸಮಾರಂಭದಿಂದ ದೂರ ಉಳಿದಿದೆ.
ಮತ್ತೊಂದೆಡೆ ವಿಸಿಕೆ ಈಗಾಗಲೇ ತನ್ನ ಒಬ್ಬ ಶಾಸಕನ ಹೆಸರನ್ನು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದೆ.೩ ಸ್ಥಾನಗಳು ಬಾಕಿ:ಸಂವಿಧಾನದ ನಿಯಮಗಳ ಪ್ರಕಾರ ತಮಿಳುನಾಡು ವಿಧಾನಸಭೆಯ ಬಲಕ್ಕೆ ಅನುಗುಣವಾಗಿ ಗರಿಷ್ಠ ೩೫ ಸಚಿವರನ್ನು ಹೊಂದಲು ಅವಕಾಶವಿದೆ. ಇಂದಿನ ವಿಸ್ತರಣೆಯೊಂದಿಗೆ ಸಿಎಂ ವಿಜಯ್ ನೇತೃತ್ವದ ಸಚಿವ ಸಂಪುಟದ ಒಟ್ಟು ಸಂಖ್ಯಾಬಲ ೩೨ಕ್ಕೆ ಏರಿಕೆಯಾಗಿದ್ದು, ಇನ್ನು ೩ ಸ್ಥಾನಗಳು ಬಾಕಿ ಉಳಿದಿವೆ. ಈ ಸ್ಥಾನಗಳನ್ನು ಮುಂದಿನ ದಿನಗಳಲ್ಲಿ ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳಿಗೆ ನೀಡುವ ಸಾಧ್ಯತೆಯಿದೆ.
ನೂತನ ಸಚಿವರ ಹೆಸರುಪಕ್ಷ
೧ಎ. ಶ್ರೀನಾಥ್ಟಿವಿಕೆ (ಟಿವಿಕೆ)೨ಕಮಲಿ ಎಸ್.ಟಿವಿಕೆ (ಟಿವಿಕೆ)೩ಸಿ. ವಿಜಯಲಕ್ಷ್ಮಿ(ಟಿವಿಕೆ) ೪ಆರ್.ವಿ. ರಂಜಿತ್ ಕುಮಾರ್ಟಿವಿಕೆ (ಟಿವಿಕೆ)೫ಆರ್. ವಿನೋತ್ಟಿವಿಕೆ (ಟಿವಿಕೆ)೬ರಾಜೀವ್ಟಿವಿಕೆ (ಟಿವಿಕೆ)೭ಬಿ. ರಾಜ್‌ಕುಮಾರ್ಟಿವಿಕೆ (ಟಿವಿಕೆ)೮ವಿ. ಗಾಂಧೀರಾಜ್ಟಿವಿಕೆ (ಟಿವಿಕೆ)೯ಮಥನ್ ರಾಜಾ ಪಿ.ಟಿವಿಕೆ (ಟಿವಿಕೆ)೧೦ಜಗದೀಶ್ವರಿ ಕೆ.ಟಿವಿಕೆ (ಟಿವಿಕೆ)೧೧ಎಸ್. ರಾಜೇಶ್ ಕುಮಾರ್ಕಾಂಗ್ರೆಸ್ (ಕಾಂಗ್ರೆಸ್)೧೨ಎಂ. ವಿಜಯ್ ಬಾಲಾಜಿಟಿವಿಕೆ ( ಟಿವಿಕೆ)೧೩ಲೋಗೇಶ್ ತಮಿಳ್ ಸೆಲ್ವನ್ ಡಿ.ಟಿವಿಕೆ (ಟಿವಿಕೆ)೧೪ವಿಜಯ್ ತಮಿಳನ್ ಪಾರ್ಥಿಬನ್ ಎ.ಟಿವಿಕೆ (ಟಿವಿಕೆ)೧೫ರಮೇಶ್ಟಿವಿಕೆ (ಟಿವಿಕೆ)೧೬ಪಿ. ವಿಶ್ವನಾಥನ್ಕಾಂಗ್ರೆಸ್ (ಕಾಂಗ್ರೆಸ್)೧೭ಕುಮಾರ್ ಆರ್.ಟಿವಿಕೆ (ಟಿವಿಕೆ)೧೮ತೇನ್ನರಸು ಕೆ.ಟಿವಿಕೆ (ಟಿವಿಕೆ)೧೯ವಿ. ಸಂಪತ್ ಕುಮಾರ್ಟಿವಿಕೆ (ಖಿಗಿಏ)೨೦ಮೊಹಮ್ಮದ್ ಫರ್ವಾಸ್ ಜೆ.ಟಿವಿಕೆ (ಟಿವಿಕೆ)೨೧ಡಿ. ಶರತ್ ಕುಮಾರ್ಟಿವಿಕೆ (ಟಿವಿಕೆ)೨೨ಎನ್. ಮೇರಿ ವಿಲ್ಸನ್ಟಿವಿಕೆ (ಟಿವಿಕೆ )೨೩ವಿಘ್ನೇಶ್ ಕೆ.ಟಿವಿಕೆ (ಟಿವಿಕೆ) ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
























