ಜೈ ಕರ್ನಾಟಕ ಯುವಕ ಮಂಡಳ ನವನಗರ ಕರ್ನಾಟಕ ವೃತ್ತ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ, ಎಪಿಎಂಸಿ ನವನಗರ ಪೆÇಲೀಸ್ ಠಾಣೆ ಇನ್ ಸ್ಪೆಕ್ಟರ್ ಕೆ. ಸಮಿಉಲ್ಲಾ ಉಪಸ್ಥಿತರಿದ್ದರು. ವೀರಶೈವ ಸಮಾಜದ ಕಾರ್ಯದರ್ಶಿ ಸಂಗಮೇಶ ಹೊರಗಿನಮಠ, ಕೆ.ಎನ್. ಸವಡಿ, ಸಂಘದ ಅಧ್ಯಕ್ಷ ಸ್ವಾಮಿ ಮಹಾಜನಶೆಟ್ಟರ್, ಶಿವು ಪೂಜಾರ, ಕೆ.ಎಸ್. ಹಿರೇಮಠ, ಭೀಮಪ್ಪ ಜಾವೂರ, ಗುರುನಾಥ ಢಗೆ, ಶಿವು ಶಿರ್ವಾಳ, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಾಲಾ ಮಕ್ಕಳು, ನಿವಾಸಿಗಳು ಭಾಗವಹಿಸಿದ್ದರು.