ಲಕ್ಷ್ಮೇಶ್ವರ ಪಟ್ಟಣದ ಭಾನು ಮಾರ್ಕೆಟಿಯಲ್ಲಿರುವ ಪುರಸಭೆಯ ವಾಣಿಜ್ಯ ಮಳಿಗೆಯಲ್ಲಿ ಖಾಲಿ ಇರುವ ಕೊಠಡಿಯನ್ನು ಬೀದಿಬದಿ ವ್ಯಾಪಾರಸ್ಥರ ಸಂಘದ ಕಚೇರಿಗೆ ನೀಡುವಂತೆ ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮಂಜುನಾಥ ಹೊಗೆಸೊಪ್ಪಿ ಅವರ ನೇತೃತ್ವದಲ್ಲಿ ಮುಖ್ಯ ಅಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮುನಿರ್ ಅಹಮದ್ ಸಿದ್ದಾಪುರ ಹನುಮಂತಪ್ಪ ರಾಮಗಿರಿ ಮಂಜುನಾಥ ಮೆಹಬೂಬಲಿ ಚಾಮುಲ್ ಖಾನವರ ಪರಶುರಾಮ ಬಳ್ಳಾರಿ ಸೋಮಪ್ಪ ಗೌರಿ ಲಕ್ಷ್ಮಣ ಮುಳಗುಂದ ಶಬ್ಬೀರ್ ಶಿರಹಟ್ಟಿ ರಾಜೇಸಾಬ ಮುಲ್ಲಾನವರ ಜಿಲಾನಿ ತಂಬುಲಿ ಇಮಾಮಶೇನ ದಾದಾಪೀರ್ ಬೆಂಡಿಗೇರಿ ಷರೀಫ್ ಸಾಬ್ ಬಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.