
ಕೆ.ಆರ್.ಪುರ, ಜು.೨-ಇಸ್ಕಾನ್ ಕೆ.ಆರ್.ಪುರದ ವತಿಯಿಂದ ಎರಡನೇ ವರ್ಷದ ಜಗನ್ನಾಥ ಸ್ವಾಮಿ ರಥಯಾತ್ರೆಗೆ ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿ ಮಟತನಾಡಿದ ಅವರು ಇಸ್ಕಾನ್ ಸಂಸ್ಥೆಯು ವಿಶ್ವಾದ್ಯಂತ ನಡೆಸುತ್ತಿರುವ ಹಲವಾರು ಜನೋಪಯೋಗಿ ಸೇವೆಗಳಿಗೆ ಮೆಚ್ಚುಗೆ ಸೂಚಿಸಿ ಪ್ರಸ್ತುತ ಕೆ.ಆರ್. ಪುರದಲ್ಲಿ ಆಚರಿಸುತ್ತಿರುವ ರಥಯಾತ್ರೆ ಎಲ್ಲ ನಿವಾಸಿಗಳ ಯೋಗಕ್ಷೇಮ, ಸುಖ ಶಾಂತಿ ಹಾಗೂ ಭಗವದ್ ಕೃಪೆ ಸಿಗಲೆಂದು ಆಶಿಸಿದರು.
ಕೊಡಿಗೆ ಹಳ್ಳಿಯ ಓಶಿಯಾನಸ್ ಕ್ಲಾಸಿಕ್ ಅಪಾರ್ಟ್ಮೆಂಟ್ ನಿಂದ ರಥಯಾತ್ರೆ ಯು ಪ್ರಾರಂಭವಾಗಿ ಸಂಕೀರ್ತನೆ ವಾದ್ಯಗೋಷ್ಠಿ ಗಳೊಂದಿಗೆ ವಿವಿಧ ಸಾಂಸ್ಕೃತಿಕ ತಂಡಗಳು ಕೆ.ಆರ್. ಪುರದ ವಿವಿಧ ಬಡಾವಣೆಗಳಲ್ಲಿ ನೂರಾರು ಭಕ್ತರ ಜೊತೆಗೆ ಸಾಗಿ ಅಯ್ಯಪ್ಪನಗರದ ಇಸ್ಕಾನ್ ಭಕ್ತಿ ಕೇಂದ್ರದಲ್ಲಿ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಆರ್.ಎಸ್.ಎಸ್. ಮುಖಂಡ ಆನಂದಮೂರ್ತಿ, ಸಬ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ, ವೇಣಿ ಮಾಧವ ದಾಸ, ರಾಸೇಶ್ವರ ಕೃಷ್ಣದಾಸ, ಕಮಲೇಶ ದಾಸ , ಗೋಕುಲ ಕೃಷ್ಣಸಖ ದಾಸ, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.