Home ಜಿಲ್ಲೆ ಹೆಚ್.ಎಸ್.ಕೆ ಪಾಲಿಟೆಕ್ನಿಕ್‍ನ ವತಿಯಿಂದವಿಶ್ವ ಜಲ ದಿನ ಆಚರಣೆ

ಹೆಚ್.ಎಸ್.ಕೆ ಪಾಲಿಟೆಕ್ನಿಕ್‍ನ ವತಿಯಿಂದವಿಶ್ವ ಜಲ ದಿನ ಆಚರಣೆ

ಸಂಜೆವಾಣಿ ವಾರ್ತೆ                                                         

ಬಳ್ಳಾರಿ, ಮಾ.26 ಜಿಲ್ಲೆಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್‍ಕಾಲೇಜಿನ ಸಿವಿಲ್ ವಿಭಾಗದ ವತಿಯಿಂದ ನಿನ್ನೆ  ವಿಶ್ವ ಜಲ ದಿನವನ್ನು ಆಚರಿಸಲಾಯಿತು.

ಈಕಾರ್ಯಕ್ರಮದ ಅತಿಥಿಗಳಾಗಿ ವೀ,ವಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಮೋಹನರೆಡ್ಡಿ, ಮುಂಡಾಸದ ಚನ್ನಬಸವರಾಜ, ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಮಹಾಬಲೇಶ್ವರಪ್ಪ ಹೆಚ್.ಎಸ್.ಕೆ ಪಾಲಿಟೆಕ್ನಿಕ್‍ನ ಆಡಳಿತ ಮಂಡಳಿಯ ಅಧ್ಯಕ್ಷರಾದಪಲ್ಲೇದ ಪ್ರಭುಲಿಂಗ,ಆಡಳಿತ ಮಂಡಳಿಯ ಸದಸ್ಯರಾದ ಬಾಣಾಪುರ ಜಡೆಸಿದ್ದನಗೌಡ, ಚಂದ್ರಶೇಖರ ಪಾಶ್ಚಾಪುರ್‍ಪ್ರಾಚಾರ್ಯರಾದ ಬಿ.ಶ್ರೀಶೈಲಗೌಡ ಎಲ್ಲಾ ವಿಭಾಗದ ಮುಖ್ಯಸ್ಥರು,ಸಿಬ್ಬಂದಿಗಳು ವಿದ್ಯಾರ್ಥಿಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು

ಈ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ತಮ್ಮ ಬಾಷಣದಲ್ಲಿ ನೀರಿನ ನಿರ್ವಹಣೆ ಮಹತ್ವ,ಮಿತ ಬಳಕೆ ಮತ್ತು ಅದರಿಂದ ಆಗುವ ಉಪಯೋಗಗಳನ್ನು ತಿಳಿಸಿದರು.ನೀರು ಪೋಲಾಗುವದರಿಂದ ಆಗುವ ಅನಾಹುತ ಮತ್ತು ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದರು.ನೀರು ಪೋಲಾಗದಂತೆ ನೋಡಿಕೊಳ್ಳಲ್ಲು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು ಇದರಲ್ಲಿ ಮಹಿಳೆಯರ ಪಾತ್ರ ಮಹತ್ವವಾಗಿದೆ. ನೀರು ನಮ್ಮ ಸಮಾಜಿಕ ಮತ್ತುಆರ್ಥಿಕ ಪರಿಸ್ಥಿತಿಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ.

ಈ ಕಾರ್ಯಕ್ರಮ ಉಸ್ತುವಾರಿಯನ್ನು ಸಿವಿಲ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಉಮ್ಮೆ ಸಲ್ಮಾ, ನಿರೂಪಣೆಯನ್ನು ಸಿವಿಲ್ ಉಪನ್ಯಾಸಕಿ ಕುಮಾರಿ ಸ್ವಾತಿಕೆ.ಹೆಚ್‍ಅವರು ಮತ್ತು ವಂದನಾರ್ಪಣೆಯನ್ನು ಬಿ.ಸಂಜನಾ ನಡೆಸಿ ಕೊಟ್ಟರು