Home ಜಿಲ್ಲೆ ದಿನನಿತ್ಯ ಯೋಗ ಮಾಡಿ : ಶಾಸಕ ಡಾ. ಸಿದ್ದು ಪಾಟೀಲ್

ದಿನನಿತ್ಯ ಯೋಗ ಮಾಡಿ : ಶಾಸಕ ಡಾ. ಸಿದ್ದು ಪಾಟೀಲ್

ಹುಮನಾಬಾದ್: ಜೂ.21:ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ಯೋಗ ಕಾರ್ಯಕ್ರಮದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್ ರವರು ಭಾಗವಹಿ ಯೋಗ ಶಿಬಿರದಲ್ಲಿ ಪಾಲುಗೊಂಡರು.

ಯೋಗವೇ ಅರೋಗ್ಯವಂತ ಜೀವನಕ್ಕೆ ದಾರಿ. ಯೋಗ ಎಂಬುದು ಕೇವಲ ವ್ಯಾಯಾಮವಲ್ಲ, ಜೀವನ ವಿಧಾನ. ಇದು ಒತ್ತಡವನ್ನು ನಿರ್ವಹಿಸಲು, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸ್ವಯಂ ಅನ್ವೇಷಣೆ ಮತ್ತು ಆಂತರಿಕ ಸಮತೋಲನದ ಪ್ರಯಾಣವನ್ನು ಸ್ವೀಕರಿಸಿ, ಯೋಗಾಭ್ಯಾಸವನ್ನು ಮಾಡೋಣ, ಆರೋಗ್ಯ ಕಾಪಾಡಿಕೊಳ್ಳೋಣ. ಸಮಸ್ತ ಜನತೆಗೆ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.

ಈ ಸಂದರ್ಭದಲ್ಲಿ ಯೋಗ ಶಿಬಿರದ ಮುಖ್ಯಸ್ಥರಾದ ನಟವರ ಪವಾರ್, ಮಂಡಲ ಅಧ್ಯಕ್ಷೆ ಅನಿಲ ಪಸರ್ಗಿ, ಪಕ್ಷದ ಮುಖಂಡರಾದ ಬಸವರಾಜ ಆರ್ಯ, ವಿಶ್ವನಾಥ ಪಾಟೀಲ್ ಮಾಡಗೂಳ, ಗಜೇಂದ್ರ ಕನಕಟಕರ, ಮಲ್ಲಿಕಾರ್ಜುನ ಸಿಗಿ, ಮಾಣಿಕರೆಡ್ಡಿ, ರವಿ ಹೊಸ್ಸಳಿ, ಗೋಪಾಲಕೃಷ್ಣ ಮೋಹಳೆ, ಗಿರೀಶ ತುಂಬಾ, ಸುನಿಲ್ ಪತ್ರಿ, ಇಷಾಸ್ ಖಾನ್, ಜ್ಞಾದೇವ ಧುಮಳೆ, ಸಂತೋಷ ನವದಾಗಿ, ಶಿವಕುಮಾರ ತರನಲ್ಲಿ, ರವಿ ಮಾಡಗಿ ಸೇರಿದಂದೆ ಅನೇಕರು ಉಪಸ್ಥಿತರಿದ್ದರು.