Home ಜಿಲ್ಲೆ ಕಲಬುರಗಿ ಯೋಗದ ಮೌಲ್ಯಗಳನ್ನು ಅರಿತು ದಿನನಿತ್ಯ ಯೋಗಾಭ್ಯಾಸವನ್ನು ದಿನಚರಿಯಲ್ಲಿ ಅಳವಡಿಕೊಳ್ಳಬೇಕು:ಜಿಲ್ಲಾಧಿಕಾರಿ ಇಕ್ರಂ ಶರೀಪ್

ಯೋಗದ ಮೌಲ್ಯಗಳನ್ನು ಅರಿತು ದಿನನಿತ್ಯ ಯೋಗಾಭ್ಯಾಸವನ್ನು ದಿನಚರಿಯಲ್ಲಿ ಅಳವಡಿಕೊಳ್ಳಬೇಕು:ಜಿಲ್ಲಾಧಿಕಾರಿ ಇಕ್ರಂ ಶರೀಪ್

ಕಲಬುರಗಿ: ಜೂ. 21: ಯೋಗ ದಿನಾಚರಣೆಗೆ ಯೋಗವನ್ನು ಸೀಮಿತ ಮಾಡದೇ ಯೋಗದ ಮೌಲ್ಯಗಳನ್ನು ಅರಿತು ದಿನನಿತ್ಯ ಯೋಗಾಭ್ಯಾಸವನ್ನು ದಿನಚರಿಯಲ್ಲಿ ಅಳವಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಇಕ್ರಂ ಶರೀಪ್ ಕರೆ ನೀಡಿದರು.

ಭಾನುವಾರದಂದು ಚಂದ್ರೆಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲಬುರಗಿ ಹಾಗೂ ಆಯುಷ್ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ “ ಆರೋಗ್ಯಕರ ವೃದ್ದಾಪ್ಯಕ್ಕಾಗಿ ಯೋಗ ” ಎಂಬ ಪೋಷವಾಕ್ಯದ 12 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಯೋಗ ಜತೆ ನನ್ನ ಸಂಬಂಧ ಹಳೆಯದಾಗಿದೆ ಸುಮಾರು 7 ವರ್ಷಗಳಿಂದ ಕಾಲದಿಂದ ನಾನು ದಿನ ನಿತ್ಯ ನಿಯಮಿತವಾಗಿ ಸೂರ್ಯ ನಮಸ್ಕಾರದೊಂದಿಗೆ ನನ್ನ ಕಾರ್ಯ ಪ್ರಾರಂಭಿಸಿದ್ದೇನೆ ಇದು ಒಂದು ನನ್ನ ಜೀವನ ಶೈಲಿ ಎಂದು ಹೇಳಬಹುದು. ವೈಯಕ್ತಿಕ ಜೀವನದಲ್ಲಿ ಸಹ ಎಷ್ಟು ಕೆಲಸ ಒತ್ತಡ, ಆತಂಕ ಇದ್ದರು ಮನೋಬಲ,ಆತ್ಮ ಸ್ಥೈರ್ಯ ತಾಳ್ಮೆ ಬೆಳೆಸುವುದಾಗಿ ಸಕರಾತ್ಮಕ ಚಿಂತನೆ ಸ್ಪಷ್ಟ ನಿರ್ಧಾರಕ್ಕೆ ಯೋಗದ ಸಹಕಾರವಿರುತ್ತದೆ ಎಂದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲಬುರಗಿ ಹಾಗೂ ಆಯುಷ್ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿ ಎಲ್ಲ ಅಧಿಕಾರಿ ವರ್ಗದವರಿಗೂ ಸಿಬ್ಬಂದಿ ವರ್ಗದವರಿಗೆ ಎಲ್ಲ ಬಂದಂತಹ ಸಾರ್ವಜನಿಕರಿಗೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಸಲ್ಲಿಸಿದರು.

ಕಲಬುರಗಿ ನಗರ ಪೋಲಿಸ ಆಯುಕ್ತ ಡಾ ಶರಣಪ್ಪ ಎಸ್.ಡಿ. ಮಾತನಾಡಿ, ಯೋಗದ ಮಹತ್ವ ಸ್ಥಳೀಯ ಮಟ್ಟದಲ್ಲಿ ಅಂತರಾಷ್ಟೀಯ ಮಟ್ಟದಲ್ಲಿ ಯೋಗದ ಮಹತ್ವದ ಪರಿಣಾಮ ಹಾಗೂ ಸದುಪಯೋಗ ಬೀರುತ್ತದೆ 30 ಅಥವಾ 45 ನಿಮಿಷಗಳವರೆಗೆ ಯೋಗವನ್ನು ಮಾಡಿದರೆ ದೈಹಿಕ ಮಾನಸಿಕ ಸದೃಢತ್ತೆ ತುಂಬ ಸಹಕಾರಿಯಾಗಲಿದೆ ಎಂದು ಹೇಳಿದರು.

ಜಿಲ್ಲಾ ಆಯುಷ್ ಅಧಿಕಾರಿ( ಪ್ರಭಾರ) ಡಾ.ಕೆ.ಬಿ.ಬಬಲಾದಿ ಪುಸ್ತಕಗಳನ್ನು ನೀಡಿ ಸ್ವಾಗತಿಸಿದರು.

ಇದೆ ಸಂದರ್ಭದಲ್ಲಿ ಯೋಗ ಶಿಷ್ಠಾಚಾರದ ಬಿತ್ತಿ ಪತ್ರವನ್ನು ಅನಾವರಣಗೊಳಿಸಿದರು.
ವೇದಿಕೆಮೇಲೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪಸಂಕನೂರ, ನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಶಾಲು ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶಿಖರ್ ಮೊಘ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಯುವ ಸಬಲೀಕರಣ, ಕ್ರೀಡಾ ಸಹಾಯಕ ನಿರ್ದೇಶಕ ಸಂಗಮೇಶ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆ ಉಪನಿರ್ದೇಶಕ ಈರಣ್ಣ ಆಶಾಪುರ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ರಾಜಶೇಖರ ಗೋನಾಯಕ, ಆಯುರ್ವೇದ ಮಂಡಳಿ ರಾಷ್ಟ್ರೀಯ ಆಯೋಗ ನವದೆಹಲಿ ಅಧ್ಯಕ್ಷರಾದ ಡಾ. ಅಲ್ಲಮಪ್ರಭು ಉಪಸ್ಥಿತರಿದ್ದರು,

ನಾಗರಾಜ ಮತ್ತು ಶಶಿಕಲಾ ಯೋಗಾ ಪ್ರಾತ್ಯೇಕ್ಷತೆ ನಡೆಸಿಕೊಟ್ಟರು ಆರ್,ಜೆ ವಾಣಿ ಅವರು ಕಾರ್ಯಕ್ರಮ ನಿರೂಪಿಸಿದರು.
ಆಯುಷ್‌ ಸ್ಥಾಯಿ ವೈದ್ಯಾಧಿಕಾರಿಗಳು/ಹಿರಿಯ ವೈದ್ಯಾಧಿಕಾರಿಗಳು/ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಜಿಲ್ಲೆಯ ವಿವಿಧ ಯೋಗ ಸಂಘಸಂಸ್ಥೆಗಳು ಮುಖ್ಯಸ್ಥರು, ಸದಸ್ಯರು ಮತ್ತು ಯೋಗ ಶಿಬಿರಾರ್ಥಿಗಳು, ವಿವಿಧ ಪ್ರೌಢಶಾಲೆ ವಿದ್ಯಾರ್ಥಿಗಳು, ಆಯುಷ್ ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1050 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.