Home ಜಿಲ್ಲೆ ಮೈಸೂರು ಸಂಸ್ಕೃತಿ, ಸಂಸ್ಕಾರ ಕಲಿಯಲು ಜಾನಪದ ಮುಖ್ಯ

ಸಂಸ್ಕೃತಿ, ಸಂಸ್ಕಾರ ಕಲಿಯಲು ಜಾನಪದ ಮುಖ್ಯ

ಸಂಜೆವಾಣಿ ನ್ಯೂಸ್
ಮೈಸೂರು: ಏ.25:-
ಸಂಸ್ಕೃತಿ, ಸಂಸ್ಕಾರ ಕಲಿಯಲು ಜಾನಪದ ಮುಖ್ಯ ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಹೇಳಿದರು.
ಮೈಸೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ ಕುವೆಂಪುನಗರ ಆದಿಚುಂಚನಗಿರಿ ರಸ್ತೆಯ ಕಾಗಿನೆಲೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದದ ಪ್ರತಿ ಹಾಡು, ಪ್ರತಿ ಶಬ್ದಕ್ಕೂ ಅರ್ಥವಿದೆ ಎಂದರು.


ಇಂತಹ ಜಾನಪದ ಪ್ರಸ್ತುತ ದಿನಗಳಲ್ಲಿ ಮಾಯವಾಗುತ್ತಿದೆ. ಇಲ್ಲವೇ ಪ್ರಾಮುಖ್ಯತೆ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಜಾನಪದವನ್ನು ಜೀವಂತವಾಗಿಡುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.


ಪೆÇ್ರ.ಹನೂರು ಕೃಷ್ಣಮೂರ್ತಿ ಚಿತ್ರದುರ್ಗ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜಾನಪದವನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಗೌರವ ಕಾರ್ಯದರ್ಶಿ ಎಂ.ಪುಟ್ಟಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಗಿನೆಲೆ ಬಿ.ಇಡಿ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಕೆ. ವಿಶಾಲಾಕ್ಷಿ ಆಶಯ ಭಾಷಣ, ಕಜಾಪ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಭಾಗೀಯ ಸಂಚಾಲಕಿ ಡಾ.ಕಾವೇರಿ ಪ್ರಕಾಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ವಿವಿಗಳಿಂದ ಪಿಎಚ್‍ಡಿ ಹಾಗೂ ಗೌರವ ಡಾಕ್ಟರೇಟ್‍ಗೆ ಭಾಜನರಾಗಿರುವ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಜಯಲಕ್ಷ್ಮೀಪುರಂ ಸಂತ ಜೋಸೆಫರ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಚಂದ್ರಶೇಖರ, ಖ್ಯಾತ ಜಾನಪದ ಗಾಯಕ ಅಮ್ಮ ರಾಮಚಂದ್ರ, ಪೂಜಾ ಕುಣಿತ ಕಲಾವಿದ ಸಿ.ಸುಂದರೇಶ್, ಸಮಾಜ ಸೇವಕ ನಂಜನಗೂಡು ತಾ.ಕೊಂಗಳ್ಳಿಯ ಬಿ.ಶಂಕರ್, ಕಜಪ ಕೆ.ಆರ್.ನಗರ ತಾ.ಅಧ್ಯಕ್ಷ ತಿಮ್ಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.


ಕಜಪ ಕಾರ್ಯದರ್ಶಿ ಬೇಸೂರು ಮೋಹನ್ ಪಾಳೇಗಾರ್, ಪತ್ರಿಕಾ ಕಾರ್ಯದರ್ಶಿ ಎ.ಎಲ್.ಸುರೇಶ್ಚಂದ್ರ, ದೊರೆಸ್ವಾಮಿ, ಶಿವಕುಮಾರ್ ಮೊದಲಾದವರು ಇದ್ದರು.
ಪನ್ನಗ ವಿಜಯಕುಮಾರ್ ಮತ್ತು ತಂಡದವರು ಪ್ರಾರ್ಥಿಸಿದರು. ಕೆ.ಆರ್.ನಗರದ ರಿಜ್ವಾನ್ ಕಾರ್ಯಕ್ರಮ ನಿರೂಪಿಸಿದರು.