
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.01.ಮಾ: ಆಧುನಿಕ ಜಗತ್ತಿನಲ್ಲಿ ಮಾನವನ ಬದುಕು ವಿಜ್ಞಾನ-ತಂತ್ರಜ್ಞಾನಗಳ ಹಿಂದೆ ಸಾಗುತ್ತಿದೆ. ಮಾನವನ ಬದುಕಿಗೆ ಪೂರಕವಾದ ಹತ್ತು ಹಲವಾರು ಆವಿಷ್ಕಾರಗಳು ನಡೆಯುತ್ತಿದ್ದು ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ನಾಗಾಲೋಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಮಕ್ಕಳನ್ನು ಹೊಸ ಬದುಕಿಗೆ ಅಪ್‍ಡೇಟ್ ಮಾಡಬೇಕು.
ಕಲಿಕೆಯ ಹಂತದಲ್ಲಿಯೇ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ನಮ್ಮ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಆಗಬೇಕೆಂದು ಆದಿ ಚುಂಚನಗಿರಿ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಅವರು ಹೇಮಗಿರಿಯ ಬಿಜಿಎಸ್ ಕೇಂದ್ರೀಯ ಪಠ್ಯ ಕ್ರಮದ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಲೆಯ ವತಿಯಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಕಲಾ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ಕಾರ್ಯ ಚಟುವಟಿಕೆ ಇಂದು ಭೂಮಿಯಿಂದ ಬಾಹ್ಯಾಕಾಶದವರೆಗೆ ವಿಸ್ತರಿಸಿದೆ. ಕಂಪ್ಯೂಟರ್ ಯುಗ ಆರಂಭವಾಗಿದ್ದು ನಮ್ಮ ಅಂಗೈನಲ್ಲಿಯೇ ಸರ್ವ ಜಗತ್ತನ್ನು ಸಂಪರ್ಕಿಸುವ ಮಟ್ಟಕ್ಕೆ ನಮ್ಮ ತಂತ್ರಜ್ಞಾನ ಬೆಳೆದಿದೆ. ಎಐ (ಕೃತಕ ಬುದ್ದಿಮತ್ತೆ) ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ.
ಈ ಹೊತ್ತಿನಲ್ಲಿ ವಿಜ್ಞಾನ ಕ್ಷೇತ್ರದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡುವಂತೆ ಮಾಡುವುದು ಪೆÇೀಷಕರ ಕರ್ತವ್ಯ ಎಂದ ಡಾ. ಜೆ.ಎನ್.ರಾಮಕೃಷ್ಣಗೌಡ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ವಿಜ್ಞಾನದತ್ತ ಆಕರ್ಷಿತರಾಗುವಂತೆ ಮಾಡಬೇಕು. ವಿಜ್ಞಾನದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದಾಗ ಕಲಿಕೆ ಮತ್ತು ಮತ್ತು ಸಂಶೋಧನೆ ಕಡೆಗೆ ಮಕ್ಕಳು ಆಸಕ್ತಿ ವಹಿಸುವರು ಎಂದು ಹೇಳಿದರು.
ಮಕ್ಕಳಲ್ಲಿ ಇರುವ ವಿಶೇಷ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಬಿಜಿಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಎಲ್ಲಾ 27 ಶಾಲೆಗಳಲ್ಲೂ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ವಿಜ್ಞಾನವಸ್ತು ಪ್ರದರ್ಶನದಲ್ಲಿ ಮಕ್ಕಳು ತಮ್ಮ ಪರಿಕಲ್ಪನೆಯಲ್ಲಿ ಹತ್ತು ಹಲವಾರು ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದ್ದಾರೆ. ಮಕ್ಕಳು ಮಾಡಿರುವ ಮಾದರಿಯನ್ನು ನೋಡಿದರೆ ನಮಗೆ ಅಚ್ಚರಿಯಾಗುತ್ತದೆ. ಮಕ್ಕಳ ಪ್ರತಿಭೆಯನ್ನು ಹೊರತರಲು ಸೂಕ್ತವಾದ ವೇದಿಕೆಯನ್ನು ನೀಡಬೇಕು. ಆಗ ಮಾತ್ರ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಪೆÇೀಷಕರು ಸಹ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಶಿಕ್ಷಕರು ತಾವು ಸೂಚಿಸಿದ ಮಾದರಿಯನ್ನು ಮಕ್ಕಳಿಂದ ನಿರ್ಮಿಸಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಕಳುಹಿಸಿದ್ದಾರೆ. ಶಿಕ್ಷಕರು, ಶಾಲೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದ ಮಾಡುವ ಪ್ರತಿ ಕಾರ್ಯಕ್ರಮವಕ್ಕೂ ಪೂರಕವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ತಂತ್ರಜ್ಞಾನ, ಬಾಹ್ಯಾಕಾಶದ ಸಂಶೋಧನೆಗಳು, ಡ್ಯಾಂ, ವಿದ್ಯುತ್ ಉತ್ಪಾದನೆ, ಮಾದರಿ ಕೃಷಿ, ಮಾದರಿ ನಗರ, ಟೆಕ್ನಾಲಜಿಗಳು ಹೀಗೆ ಹಲವಾರು ಮಾದರಿಯನ್ನು ಪ್ರದರ್ಶನ ಮಾಡುವ ಮೂಲಕ ಮಕ್ಕಳು ಗಮನ ಸೆಳೆದರು.
ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪುರಸಭೆಯ ಮಾಜಿ ಅಧ್ಯಕ್ಷೆ ಪಂಕಜಪ್ರಕಾಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಹಿರಿಯ ಪತ್ರಕರ್ತ ಬಿ.ಎ.ಮಂಜುನಾಥ್ ಸೇರಿದಂತೆ ನೂರಾರು ಮಕ್ಕಳ ಪೆÇೀಷಕರು ಕಾರ್ಯಕ್ರಮದಲ್ಲಿದ್ದರು.
























