
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,20- ಪ್ರಧಾನ ಮಂತ್ರಿ ವಿಕಸಿತ್ ಭಾರತ ರೋಜ್ ಗಾರ್ ಯೋಜನೆ ಕುರಿತು ನಿನ್ನೆ ಸಂಜೆ ರಾಷ್ಟ್ರವ್ಯಾಪಿ ಕೈಗೊಂಡಿದ್ದ ಬೃಹತ್ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಕೈಗಾರಿಕಾ ಸಂಸ್ಥೆಯ ವಿದ್ಯಾನಗರದ ಸಭಾಂಗಣದಲ್ಲಿ 2025 ರಲ್ಲಿ ಉದ್ಯೋಗ ಪಡೆದು ಭವಿಷ್ಯ ನಿಧಿಯಡಿ ನೊಂದಾಯಿತರಾದವರ೮ಗೆ ಯೋಜನೆಯ ಪ್ರಮಾಣ ಪತ್ರ ವಿತರಣೆ ಸಮಾರಂಭ ಜರುಗಿತು.
ಕಾರ್ಯಕ್ರಮವನ್ನು ಸಂಡೂರು ಶಾಸಕಿ ಅನ್ನಪೂರ್ಣ ಅವರು ಉದ್ಘಾಟನೆ ಮಾಡಿ. ಈ ಭಾಗದಲ್ಲಿ ಅನೇಕ ಕೈಗಾರಿಕೆಗಳ ಮೂಲಕ ಯುವ ಜನತೆಗೆ ಹೊಸ ಉದ್ಯೋಗ ದೊರೆಯುತ್ತಿದೆ. ಇವರಿಗೆಲ್ಲ ಈಗ ಭಾರತ ಸರ್ಕಾರ ವಿಕಸಿತ ಭಾರತ ಯೋಜನೆ ಮೂಲಕ ಪ್ರೋತ್ಸಾಹ ಧನವನ್ನು ಭವಿಷ್ಯ ನಿಧಿ ಮೂಲಕ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಹೊಸದಾಗಿ ಉದ್ಯೋಗ ಸೃಷ್ಟಿಸುವ ಉದ್ಯೋಗದಾತರಿಗೂ ಪ್ರೋತ್ಸಾಹದಾಯಕವಾಗಿದೆಂದರು.
ಈ ಯೋಜನೆಯಡಿ ಈ ವರೆಗೆ ಬಳ್ಳಾರಿ ವಲಯದಲ್ಲಿ 1374 ಹೊಸ ಫಲಾನುಭವಿಗಳು, 248 ಉದ್ಯೋಗದಾತರು ಇದರ ಲಾಭ ಪಡೆಯುತ್ತಿದ್ದಾರೆ.
ಈ ವೇಳೆ ಯೋಜನಡಯಡಿ ನೊಂದಾಯಿಸಿಕೊಂಡವರಿಗೆ ಪ್ರಮಾಣ ಪತ್ರ ನೀಡಲಾಯ್ತು.
ಈ ವೇಳೆ ವರ್ಚ್ಯುವಲ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಯೋಗಿಗಳನ್ನು ಉದ್ದೀಶಿಸಿ ಕ ಮಾತನಾಡಿದರು.ಭವಿಷ್ಯ ನಿಧಿ ಇಲಾಖೆಯ ಬಳ್ಳಾರಿ ಕಚೇರಿಯ ಪ್ರಾದೇಶಿಕ ಆಯುಕ್ತ ಕೆ.ವಿ.ಪ್ರವೀಣ್ ಮೊದಲಾದವರು ಇದ್ದರು.
ಸಂಜೆವಾಣಿ ಜೊತೆ ಮಾತನಾಡಿದ ಆಂದ್ರಪ್ರದೇಶದ ಕಮತಂ ಗಾಯತ್ರಿ ಜಿಂದಾಲ್ ಪೆಲೆಟ್ ಪ್ಲಾಂಟ್ ಉದ್ಯೋಗಿ 2025 ರ ಅಕ್ಟೋಬರ್ ನಲ್ಲಿ ಉದ್ಯೋಗ ಪಡೆದು ವಿಕಸಿತ ಭಾರತ್ ರೋಜ್ಗಾರ್ ಯೋಜನೆ ಯಡಿ ಪ್ರೋತ್ಸಾಹ ಹಣ ಪಡೆದಿರುವುದು ಖುಷಿ ತಂದಿದೆ ಎಂದರು. ಅದೇ ರೀತಿ ಹೊಸಪೇಟೆಯ ಮೆಹರಾಜ್ ಸಹ ಯೋಜನೆಯಿಂದ ತಮಗಾಗುತ್ತಿರುವ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತೊಡಿಸಿದರು.
ಕೋಟ್:
ತಾವು ಕಳೆದ 2025 ರಲ್ಲಿ ಜಿಂದಾಲ್ ಸಂಸ್ಥೆಯಲ್ಲಿ ಉದ್ಯೋಗ ಪಡೆದಿದ್ದು. ವೇತನದ ಜೊತೆ ಪ್ರಧಾನ ಮಂತ್ರಿ ವಿಕಸಿತ್ ಭಾರತ ರೋಜ್ಗಾರ್ ಯೋಜನೆಯಡಿ ಪ್ರೋತ್ಸಾಹಧನವನ್ನು ಪಡೆಯುತ್ತಿರುವುದು ಕುಟುಂಬದ ನಿರ್ವಹಣೆಗೆ ಹೆಚ್ಚಿನ ಸಹಕಾರಿಯಾಗಲಿದೆ. ಇದು ನವ ಉದ್ಯೋಗಿಗಳಿಗೆ ಉಪಯುಕ್ತವಾದುದಾಗಿದೆ
ಕಿಶನ್ ಕುಮಾರ್,
ಯೋಜನೆಯ ಫಲಾನುಭವಿ , ಬಳ್ಳಾರಿ.


























