Home ಜಿಲ್ಲೆ ರಾಜಕೀಯವೆಂಬುದು ಎಂಬಿಬಿಎಸ್ ಮಾಡಿದಷ್ಟು ಸುಲಭವಲ್ಲ – ಶಾಸಕ ಡಾ ಶ್ರೀನಿವಾಸ.

ರಾಜಕೀಯವೆಂಬುದು ಎಂಬಿಬಿಎಸ್ ಮಾಡಿದಷ್ಟು ಸುಲಭವಲ್ಲ – ಶಾಸಕ ಡಾ ಶ್ರೀನಿವಾಸ.

ಸಂಜೆವಾಣಿ ವಾರ್ತೆ

ಕೂಡ್ಲಿಗಿ. ಮೇ. 4 :- ರಾಜಕೀಯ ಎನ್ನುವುದು ಅನುಭವದ ಮೂಟೆ ಅದನ್ನು ಸರಿದೂಗಿಸುವುದು ಅಷ್ಟು ಸುಲಭದ ಮಾತಲ್ಲ ನಾವು ಎಂಬಿಬಿಎಸ್ ಮಾಡಿದಷ್ಟು ಈಜಿಯೂ ಅಲ್ಲ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಮ್ಮ ರಾಜಕೀಯದ ಅಭಿಪ್ರಾಯವನ್ನು ಹಂಚಿಕೊಂಡರು.

ಅವರು ತಾಲೂಕಿನ ಆಲೂರು ಗ್ರಾಮದಲ್ಲಿ ಆಯೋಜಿಸಿದ ಮನೆಮನೆಗೆ ಶಾಸಕರು, ಮನೆಬಾಗಿಲಿಗೆ ನಮ್ಮ ಸರ್ಕಾರ ಎನ್ನುವ ಜನಸ್ಪಂದನ ಕಾರ್ಯಕರ್ಮಕ್ಕೆ ಚಾಲನೆ ನೀಡಿದ ಶಾಸಕ ಡಾ ಶ್ರೀನಿವಾಸ ಮಾತನಾಡುತ್ತ ತಂದೆಯ ರಾಜಕೀಯವನ್ನು ನೋಡುತ್ತಾ ಬೆಳೆದವನು ನಾನು ಆದರೆ ನಾನು ಎಂಬಿಬಿಎಸ್ ಮಾಡಿದಷ್ಟು ಸುಲಭವಲ್ಲ ಈ ರಾಜಕೀಯ ಆದರೆ ಹಾಲಿ ಆಡಳಿತ ನಡೆಸುವ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ತಮ್ಮ ತಂದೆಯ ಸಮ ಕಾಲೀನರು ಇದ್ದು ಮೊದಲ ಬಾರಿ ಶಾಸಕನಾದರೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ರಾಜಕೀಯ ಮಾಡದೇ ಅನುದಾನ ತರುವುದಷ್ಟೇ ನನ್ನ ಗಮನ ಇದ್ದು ಸಮಸ್ಯೆಗಳಿಗೆ ಬೆನ್ನು ತೋರಿಸುವ ಜಾಯಮಾನದ ವ್ಯಕ್ತಿ ನಾನಲ್ಲ,ಎಂದು ತಿಳಿಸಿದ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರದ ಯಾವುದೇ ಹಳ್ಳಿಗೆ ಹೋಗಿ ನೋಡಿದ್ರೂ ಅಭಿವೃದ್ಧಿ ಆಗಿದೆ ಹೇಳಿದರು.

ರಾಜಕೀಯ ನಿಜವಾಗಲೂ ಎಂ ಬಿ ಬಿ ಎಸ್ ಗಿಂತ ಕಷ್ಟ,ರಾಜಕೀಯದಲ್ಲಿ ಯಾವುದನ್ನ ಸ್ವೀಕರಿಸಬೇಕು ಯಾವುದನ್ನೂ ಬಿಡಬೇಕು ಎಂದು ಗೊತ್ತಗಲ್ಲ, ಅದರೂ ಎಲ್ಲವನ್ನು ಎದುರಿಸಿ ಆರೋಗ್ಯ ಮತ್ತು ಶಿಕ್ಷಣ್ಣಕ್ಕೆ ಹೆಚ್ಚಿನ ಅದ್ಯತೆ ನೀಡಿದ್ದೇನೆ.ಸಾವಿರಕ್ಕೂ ಹೆಚ್ಚು ಕೋಟಿ ರೂ. ಅನುದಾನವನ್ನ ತಂದು ಶಕ್ತಿ ಮೀರಿ ಕೆಲಸಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಕೆರೆನೀರು ತುಂಬಿಸುವ ಹಾಗೂ ಚೆಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ರೈತರ ಅನುಕೂಲಕ್ಕಾಗಿ ಅಂತರ್ಜಲ ಮಟ್ಟ ಹೆಚ್ಚಿಸಿ , ವಿದ್ಯುತ್ ಸೇರಿ ಇತರೆ ಕಾಮಗಾರಿಗಳಿಗೆ ಒತ್ತು ನೀಡಿದ್ದೇನೆ , ಚಿಕ್ಕಜೋಗಿಹಳ್ಳಿಯ ಪವರ್ ಸ್ಟೇಷನ್ ನನ್ನು 6.5 ಮೇಘಾ ವ್ಯಾಟ್ನಿಂದ, 20 ಮೇಘಾ ವ್ಯಾಟ್ಗೆ ಪರಿವರ್ತಿಸಲಾಗುವುದು ಜತೆಗೆ ಕ್ಷೇತ್ರದ ಎಲ್ಲ ಕಡೆಯಲ್ಲಿ ಜೋತು ಬಿದ್ದ ತಂತಿಗಳನ್ನು ಸರಿಪಡಿಸಿ ಲಿಂಕ್ ಲೈನ್ ಮಾಡಲಾಗಿದೆ ಎಂದರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ನರಸಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಶಾಸಕರ ಜನ ಸಂಪರ್ಕ ಕಾರ್ಯಕ್ರಮವು ನಾಲ್ಕು ಅಂಶಗಳ ಕಾರ್ಯಕ್ರಮವಾಗಿದ್ದು, ಮೊದಲು ಸಾರ್ವಜನಿಕರಲ್ಲಿ ಸ್ವಚ್ಚತೆಯ ಅರಿವು ಹಾಗು ಮನೆ ಬಾಗಿಲಿನಲ್ಲಿ ಸಮಸ್ಯೆ ಪರಿಹರಿಸುವುದು ಹಾಗು ವೇದಿಕೆಯ ಬಳಿಯಲ್ಲೂ ಸಹ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಉದ್ದೇಶವಾಗಿದೆ ಎಂದರು.

ತಹಶೀಲ್ದಾರ್ ವಿ ಕೆ ನೇತ್ರಾವತಿ ಮಾತನಾಡಿ, 104 ಕಂದಾಯ ಗ್ರಾಮಗಳಲ್ಲಿ 25 ಸಾವಿರ ಹಕ್ಕು ಪತ್ರವನ್ನು ವಿತರಿಸಲಾಗಿದೆ, ಆಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 7 ಕಂದಾಯ ಗ್ರಾಮಗಳಲ್ಲಿ 625 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದ ಅವರು. ಪೋತಿ ಆಂದೋಲನದ ಮೂಲಕ ಬರೀ ವಂಶ ವೃಕ್ಷ ಮಾತ್ರ ಕೊಟ್ರೆ ಸಾಕು ಜಮೀನುಗಳ ಪೋತಿ ಅಗುವುದು, ಹಾಗು ಹೆಣ್ಣು ಮಕ್ಕಳನ್ನು ಕೈ ಬಿಡಬೇಕು ಎಂದರೆ ಒಪ್ಪಿಗೆ ಪತ್ರದ ಮೂಲಕ ಅದಕ್ಕೂ ಪರಿಹಾರ ಇದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಧರ ಸ್ವಾಮಿ, ಎಪಿಎಂಸಿ ಅಧ್ಯಕ್ಷ ಬೋಸಣ್ಣ, ಬಣವಿಕಲ್ಲು ಯರ್ರಿಸ್ವಾಮಿ, ತಳವಾರ್ ಶರಣಪ್ಪ, ಚಂದ್ರಮೌಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು, ಪಿಡಬ್ಲ್ಯೂಡಿ ಇಲಾಖೆಯ ಎಇಇ ನಾಗನಗೌಡ್ರು, ಟಿಎಚ್ಒ ಡಾ. ಪ್ರದೀಪ್, ಜಿ ಪಂ ಇಂಜಿನಿಯರಿಂಗ್ ಇಲಾಖೆಯ ಎಇಇ ಮಲ್ಲಿಕಾರ್ಜುನ, ಕೂಡ್ಲಿಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಹಾಗೂ ಆಲೂರು ಗ್ರಾಮಪಂಚಾಯಿತಿ ಆಡಳಿತಾಧಿಕಾರಿ ಬಸವರಾಜ, ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ಕಂದಾಯ ನಿರೀಕ್ಷಕ ಕೊಟ್ರೇಶ್, ಗ್ರಾಮ ಆಡಳಿತಾಧಿಕಾರಿ ಇಮ್ರಾನ್,ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕುಬೇರಾಚಾರಿ, ಪಿಡಿಒ ವಿನಯ್ ಕುಮಾರ್, ಸಿಬ್ಬಂದಿ ಅನಂತ ನಾಯಕ್ ಇತರರಿದ್ದರು.

ತಾಲೂಕಿನ 17 ರೈತ ಫಲಾನುಭವಿಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ಕೊಳವೆಬಾವಿ ಸಾಮಗ್ರಿಗಳಾದ ಪೈಪು ಮೋಟಾರ್ ಗಳನ್ನು ವಿತರಿಸಿದರು. ಹಾಗೂ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಗೂಡು ಕಟ್ಟುವ ಚಂದ್ರಿಕೆ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ವಿತರಿಸಲಾಯಿತು.ನಂತರ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕೆಲವುಗಳನ್ನು ಅಲ್ಲಿಯೇ ಇದ್ದ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಇತ್ಯಾರ್ಥ ಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಡಾ ಶ್ರೀನಿವಾಸ ಸೂಚಿಸಿದರು.

(ಬಾಕ್ಸ್ ಐಟಂ )

ಶಾಸಕರಿಗೊಂದು ಕಿವಿಮಾತು ಕೊಟ್ಟ ಜಿ ಪಂ ಮಾಜಿ ಸದಸ್ಯ ಶಶಿಧರಸ್ವಾಮಿ : ಶಾಸಕರೇ ನೀವು ಕ್ಷೇತ್ರದ ಬಗ್ಗೆ ಇಟ್ಟಿರುವ ಜನಪರ ಕಾಳಜಿ, ಅಭಿವೃದ್ಧಿ ಬಗ್ಗೆ ನನ್ನದೊಂದು ಹ್ಯಾಟ್ಸ್ ಪ್ ಆದರೆ ಕೆಲವರು ಇಂದ್ರ ಚಂದ್ರ ಎನ್ನುವ ಮೂಲಕ ನಿಮ್ಮನ್ನು ಅಟ್ಟಕ್ಕೆರುಸುವ ಪರಿ ತಮ್ಮ ಆಸುಪಾಸಿನ ಜನರು ಮಾಡುತ್ತಿದ್ದು ತಾವು ನೇತ್ರ ತಜ್ಞರಾಗಿ ಕಣ್ಣಿನ ಸೂಕ್ಷ್ಮತೆಯ ನರನಾಡಿ ಬಲ್ಲವರಾಗಿದ್ದು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಿ ಯಾರೋ ಮೂರನೇ ವ್ಯಕ್ತಿಯ ಸುಳ್ಳಿನ ಹಾಗೂ ಬಣ್ಣದ ಮಾತಿಗೆ ಕಿವಿಗೋಡದೆ ಮುಂಬರುವ ಜಿ ಪಂ, ತಾ ಪಂ ಚುನಾವಣೆಗೆ ಎಂತಹ ವ್ಯಕ್ತಿಗೆ ಟಿಕೆಟ್ ಕೊಡಿಸಬೇಕು ಎಂದು ತಿಳಿದುಕೊಳ್ಳಿ ಎಂದು ನಾನೊಬ್ಬ ಜಿ ಪಂ ಮಾಜಿ ಸದಸ್ಯನಾಗಿದ್ದು ರಾಜಕೀಯ ಅನುಭವದ ಸೂಕ್ಷ್ಮತೆಯನ್ನು ತಿಳಿಸುವುದಾಗಿ ಶಾಸಕ ಡಾ ಶ್ರೀನಿವಾಸ ಅವರಿಗೆ ಜಿ ಪಂ ಮಾಜಿ ಸದಸ್ಯ ಕಾನಾಮಡುಗು ಶಶಿಧರ ಸ್ವಾಮಿ ಕಾರ್ಯಕ್ರಮದಲ್ಲಿ ತಿಳಿಸಿದರು.