Home ಜಿಲ್ಲೆ ಯಡಿಯೂರಪ್ಪ ಸ್ವಾಗತಕ್ಕೆ ಬಳ್ಳಾರಿ ಅರಳಿ ಹಾರ

ಯಡಿಯೂರಪ್ಪ ಸ್ವಾಗತಕ್ಕೆ ಬಳ್ಳಾರಿ ಅರಳಿ ಹಾರ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.08: ನಾಳೆ ನಡೆಯಲಿರುವ ತಮ್ಮ ಅಭಿಮಾನೋತ್ಸವಕ್ಕೆ ಇಂದು ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಮಾಜಿ ಮುಖ್ಯ ಮಂತ್ರಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನು ನಗರದಲ್ಲಿ ಸಿದ್ದವಾದ ಅರಳಿ (ಹತ್ತಿ) ಹಾರದಿಂದ ಸ್ವಾಗತಿಸಲಾಗುತ್ತಿದೆ.

ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ ಅವರ ಸಹೋದರಿ ರಾಧಮ್ಮ ಪರಮೇಶ್ವರೆಡ್ಡಿ ಅವರು ಈ ಹಾರವನ್ನು ಸಿದ್ದಪಡಿಸಿದ್ದಾರೆ. ಈ ಹಾರವನ್ನು ರಾಜ್ಯ ರೈತ ಮೋರ್ಚಾ ಪರವಾಗಿ ಯಡಿಯೂರಪ್ಪನವರಿಗೆ ಅರ್ಪಿಸಲಿದೆ.